ಸಿದ್ದಾಪುರದ ನ್ಯಾಚುರೋಪತಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸ್ಥೂಲತೆ ಜಾಗೃತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಶ್ರೀಶಾಂತನಾಥ ಮಾತನಾಡಿದರು. ಡಾ. ರೂಪಾ ಭಟ್ಟ, ಡಾ. ವಾಣಿ ಜೀರಗಲ್, ಡಾ. ಶಶಿಭೂಷಣ ಹೆಗಡೆ ಇದ್ದರು. 
ಉತ್ತರ ಕನ್ನಡ

ಸ್ಥೂಲತೆಯ ಅರಿವು ಮೂಡಿಸಿದ ಜಾಗೃತಿ ಕಾರ್ಯಾಗಾರ

ಸಿದ್ದಾಪುರ: ಸ್ಥಳೀಯ ನ್ಯಾಚುರೋಪತಿ ಮಹಾವಿದ್ಯಾಲಯದಲ್ಲಿ ಮೆಡಿಕಲ್ ಇನ್‌ಸ್ಟಿಟ್ಯೂಟ್ ಅಪ್ ನ್ಯಾಚುರೋಪತಿ ಯೋಗಿಕ್ ಸೈನ್ಸ್ ಸಂಸ್ಥೆ, ಕೇಂದ್ರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸಂಶೋಧನಾ ಮಂಡಳಿ ಸಹಯೋಗದಲ್ಲಿ ಸ್ಥೂಲತೆ ಜಾಗೃತಿ ಕಾರ್ಯಾಗಾರ ಹಾಗೂ ಒಂದು ವಾರದ ಸ್ಥೂಲತೆ ಮುಕ್ತ ಶಿಬಿರ ಏರ್ಪಡಿಸಲಾಗಿತ್ತು.
ಸ್ಥೂಲತೆ ಅಪಾಯಗಳು, ಇದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಹಾಗೂ ನೈಸರ್ಗಿಕ ಚಿಕಿತ್ಸಾ ಪದ್ಧತಿ ಮತ್ತು ಯೋಗ ವಿಜ್ಞಾನದ ಮೂಲಕ ಆರೋಗ್ಯಕರ ತೂಕ ನಿಯಂತ್ರಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಅಲ್ಲದೆ, ಯೋಗಾಭ್ಯಾಸ, ನೈಸರ್ಗಿಕ ಚಿಕಿತ್ಸೆಗಳು ಆಹಾರ ನಿಯಂತ್ರಣ ಡಿಟಾಕ್ಸ್ ವಿಧಾನಗಳು ಹಾಗೂ ಜೀವನಶೈಲಿ ಪರಿವರ್ತನೆ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು .
ಶಿಬಿರದ ಸಮಾರೋಪದಲ್ಲಿ ಪಿಎಸ್‌ಐ ಶ್ರೀಶಾಂತನಾಥ ಮಾತನಾಡಿ, ವಿಶೇಷವಾಗಿ ಪೊಲೀಸ್ ಸಿಬ್ಬಂದಿಗೆ ದೈಹಿಕ ಕ್ಷಮತೆ ಮತ್ತು ಶಿಸ್ತಿನ ಜೀವನಶೈಲಿಯ ಅಗತ್ಯತೆ ಕುರಿತು ಮಾಹಿತಿ ನೀಡಿದರು.
ಧನ್ವಂತರಿ ಆರ್ಯುವೇದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ರೂಪಾ ಭಟ್ಟ ಮಾತನಾಡಿ, ಆಹಾರ ಕ್ರಮದ ಮಹತ್ವ ಮತ್ತು ಸ್ಥೂಲತೆಯ ಆರೋಗ್ಯದ ಕುರಿತು ವಿವರಿಸಿದರು.
ಕಾಲೇಜ್ ಪ್ರಾಚಾರ್ಯೆ ಡಾ. ವಾಣಿ ಜೀರಗಲ್ ಮಾತನಾಡಿ, ದೈನಂದಿನ ಯೋಗಾಭ್ಯಾಸ ಆರೋಗ್ಯಕರ ಆಹಾರ ಪದ್ಧತಿ ಮತ್ತು ಶಿಸ್ತಿನ ದಿನಚರಿ ಅನುಸರಿಸುವುದು ಮುಂತಾದ ಸಣ್ಣ ಬದಲಾವಣೆಗಳು ಸಹ ಗಮನಾರ್ಹ ಪರಿಣಾಮ ಬೀರುತ್ತವೆ. ಬೊಜ್ಜು ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ನಿಡಬಹುದಾದ ಕಾಯಿಲೆಯಾಗಿದೆ ಎಂದು ವಿವರಿಸಿದರು
ಸಂಸ್ಥೆ ಅಧ್ಯಕ್ಷ ಶಶಿಭೂಷಣ.ವಿ. ಹೆಗಡೆ ಇತರರು ಉಪಸ್ಥಿತರಿದ್ದರು. ಡಾ. ಭಾರ್ಗವ ಜೆ.ಆರ್. ಸಂಯೋಜಿಸಿದರು. ಅಪೂರ್ವ ಹೆಗಡೆ, ಡಾ. ನಿಖಿತಾ ಹಾಗೂ ಡಾ.ಸುರೇಶ ಕಾರ್ಯಕ್ರಮ ನಿರ್ವಹಿಸಿದರು.