ಯಲ್ಲಾಪುರದ ನ್ಯಾಯಾಲಯದ ಆವಾರದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಎಸ್. ಉದ್ಘಾಟಿಸಿದರು. ಅನಿತಾಕುಮಾರಿ, ಸರಸ್ವತಿ ಭಟ್ಟ, ಗಜಾನನ ನಾಯ್ಕ, ವಿ.ಟಿ. ಭಟ್ಟ ಇದ್ದರು.  
ಉತ್ತರ ಕನ್ನಡ

ಕಾರ್ಮಿಕರ ಹಕ್ಕುಗಳ ಕುರಿತು ಜಾಗೃತಿ ಅವಶ್ಯ

ವಿನಯ ಆಶೋಕ ನಾಯ್ಕ
ಯಲ್ಲಾಪುರ: ಕಾರ್ಮಿಕರ ಹಕ್ಕು ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಎಸ್. ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶನಿವಾರಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಮೇಲಿನ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಜಾಗತಿಕ ಮಟ್ಟದಲ್ಲಿ ನಡೆದ ಹೋರಾಟದ ಫಲವಾಗಿ ಕಾರ್ಮಿಕರ ಕೆಲಸದ ಅವಧಿ ಪರಿಷ್ಕೃತಗೊಂಡು ಕ್ರಾಂತಿಯಾದ ನೆನಪಿಗೆ ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಸಿವಿಲ್ ನ್ಯಾಯಾಧೀಶೆ ಅನಿತಾಕುಮಾರಿ ಮಾತನಾಡಿದರು. ಪ್ಯಾನಲ್ ವಕೀಲೆ ಸರಸ್ವತಿ ಭಟ್ಟ ಕಾರ್ಮಿಕ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಎಎಸ್‌ಐ ಗಜಾನನ ನಾಯ್ಕ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ವಿ.ಟಿ. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಅರೆಕಾಲಿಕ ನ್ಯಾಯಿಕ ಸ್ವಯಂಸೇವಕ ಸುಧಾಕರ ಜಿ. ನಾಯಕ ನಿರ್ವಹಿಸಿದರು.