ಯಲ್ಲಾಪುರ ತಾಲೂಕಿನ ಹುಲಗಾನ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ವರ್ಧಂತಿ ಉತ್ಸವದ ಪ್ರಯುಕ್ತ ಶ್ರೀಕೃಷ್ಣ ಪಾರಿಜಾತ-ನರಕಾಸುರ ವಧೆ ಯಕ್ಷಗಾನ Yakshagana ಪ್ರದರ್ಶನ ನಡೆಯಿತು.  
ಉತ್ತರ ಕನ್ನಡ

cultural program ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

ಮಂಜುನಾಥ ಕೆಂಪಸಣ್ಣವರ
ಯಲ್ಲಾಪುರ: ತಾಲೂಕಿನ ಹುಲಗಾನ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ವರ್ಧಂತಿ ಉತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು cultural program ಜರುಗಿದವು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಆನಗೋಡ ಸೊಸೈಟಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಉದ್ಘಾಟಿಸಿದರು. ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಜಿ.ಎಸ್. ಭಟ್ಟ ತಟ್ಟಿಗದ್ದೆ ಅಧ್ಯಕ್ಷತೆ ವಹಿಸಿದ್ದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಎಲ್ಎಸ್‌ಎಂಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಮೊಕ್ತೇಸರ ವೆಂಕಟರಮಣ ಹೆಗಡೆ, ದೇವಸ್ಥಾನದ ಟ್ರಸ್ಟ್ ಉಪಾಧ್ಯಕ್ಷ ಶ್ರೀಕೃಷ್ಣ ಭಟ್ಟ ತಟ್ಟಿಗದ್ದೆ, ಖಜಾಂಚಿ ವಿಶ್ವನಾಥ ಭಟ್ಟ ತಟ್ಟಿಗದ್ದೆ, ಪತ್ರಕರ್ತ ಜಿ.ಎನ್. ಭಟ್ಟ ತಟ್ಟಿಗದ್ದೆ ಉಪಸ್ಥಿತರಿದ್ದರು. ನಾರಾಯಣ ಬೆಳ್ಳಿ ನಿರ್ವಹಿಸಿದರು.
ಹುಲ್ಲೋರಮನೆಯ ಗಜಾನನ ಮಾರುತಿ ತಾಳಮದ್ದಲೆ ಕೂಟದ ಕಲಾವಿದರಿಂದ ಸುಧನ್ವ ಮೋಕ್ಷ ತಾಳಮದ್ದಲೆ ನಡೆಯಿತು. ನಂತರ ಪ್ರಸಿದ್ಧ ಕಲಾವಿದರಿಂದ ಪ್ರದರ್ಶನಗೊಂಡ ಶ್ರೀಕೃಷ್ಣ ಪಾರಿಜಾತ-ನರಕಾಸುರ ವಧೆ ಯಕ್ಷಗಾನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ ಭಟ್ಟ ಬ್ರಹ್ಮೂರು, ಸಂಜನಾ ಹಿರೇಗುತ್ತಿ, ಮದ್ದಲೆವಾದಕರಾಗಿ ಗಣಪತಿ ಭಾಗ್ವತ ಕವಾಳೆ, ಚಂಡೆವಾದಕರಾಗಿ ಗಣೇಶ ಗಾಂವ್ಕರ ಕನಕನಹಳ್ಳಿ ಭಾಗವಹಿಸಿದ್ದರು.
ನರಕಾಸುರನಾಗಿ ಸುಬ್ರಹ್ಮಣ್ಯ ಚಿಟ್ಟಾಣಿ, ಕೃಷ್ಣನಾಗಿ ಲೋಕೇಶ ನಾಯ್ಕ ಗುಣವಂತೆ, ದೇವೇಂದ್ರನಾಗಿ ಗುರುಪ್ರಸಾದ ಭಟ್ಟ, ನಾರದನಾಗಿ ಶ್ರೀಧರ ಅಣಲಗಾರ, ಮುರಾಸುರನಾಗಿ ರಾಮಕೃಷ್ಣ ಭಟ್ಟ ಕಂಚನಗದ್ದೆ, ಸತ್ಯಭಾಮೆಯಾಗಿ ದೀಪಕ ಭಟ್ಟ ಕುಂಕಿ, ಸಖಿಯಾಗಿ ರಕ್ಷಿತ್ ಕುಳಿಮನೆ, ಮಕರಂದನಾಗಿ ನಾಗೇಂದ್ರ ಭಟ್ಟ ಮೂರೂರು ಪಾತ್ರ ನಿರ್ವಹಿಸಿದರು.