ಹುಬ್ಬಳ್ಳಿ-ಅಂಕೋಲಾ ಮಾರ್ಗ  
ಉತ್ತರ ಕನ್ನಡ

26 ವರ್ಷಗಳ ನಂತರ ಬಹು ನಿರೀಕ್ಷೆಯ ಯೋಜನೆ ಜಾರಿಗೆ ಯತ್ನ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ
  • ದೇಶದ ವಿಶೇಷ ಯೋಜನೆ ಎಂದು ಅಧಿಸೂಚನೆ
  • 69 ಗ್ರಾಮಗಳಲ್ಲಿ ಭೂ ಸ್ವಾಧೀನ ಮಾಡಲು ರೈಲ್ವೆ ಇಲಾಖೆ ಅಧಿಸೂಚನೆ
  • ರೈಲ್ವೆ ಮಂಡಳಿಯಿಂದ ಡಿಪಿಆರ್‌ಗೆ ಅನುಮೋದನೆ
ಕಾರವಾರ:

ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯನ್ನು ಜಾರಿ ಮಾಡುವ ಪ್ರಯತ್ನ ಮತ್ತೆ ಶುರುವಾಗಿದೆ. ಹೈಕೋರ್ಟ್ ಸೂಚನೆಯಂತೆ ಪರಿಷ್ಕೃತ ಡಿಪಿಆರ್‌ಗೆ ರೈಲ್ವೆ ಇಲಾಖೆ ಅನುಮೋದನೆ ನೀಡಿದ್ದು, ಇದನ್ನು ವಿಶೇಷ ರೈಲ್ವೆ ಯೋಜನೆ ಎಂದು ಅಧಿಸೂಚನೆ ಹೊರಡಿಸಲಾಗಿದೆ.

ಈ ಸಂಬಂಧ ಭಾರತ ಸರ್ಕಾರದ ಗೆಜೆಟ್‌ನಲ್ಲಿ ಜುಲೈ 23 ರಂದು ಅಧಿಸೂಚನೆ ಹೊರಡಿಸಲಾಗಿದೆ. ಅದರಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ 13, ಕಲಘಟಗಿ ತಾಲೂಕಿನ 16, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ-24 ಹಾಗೂ ಅಂಕೋಲಾ ತಾಲೂಕಿನ 16 ಸೇರಿ ಒಟ್ಟು 69 ಗ್ರಾಮಗಳನ್ನು ಈ ಯೋಜನೆಯ ವ್ಯಾಪ್ತಿಗೆ ಸೇರಿಸಿ, ನೈರುತ್ಯ ರೈಲ್ವೆಯ ಬೆಂಗಳೂರು ಕಂಟೋನ್ಮೆಂಟ್‌ನ ನಿರ್ಮಾಣ ವಿಭಾಗದ ಮುಖ್ಯ ಇಂಜಿನಿಯರ್ ಪ್ರದೀಪ ಪುರಿ ಅಧಿಸೂಚನೆ ಹೊರಡಿಸಿದ್ದಾರೆ. ಒಟ್ಟು 163 ಕಿಮೀ ನಡುವೆ ವಿದ್ಯುದೀಕರಣ ಸಮೇತ ಹೊಸ ಬ್ರಾಡ್ ಗೇಜ್ ಡಬ್ಬಲ್ ಲೈನ್ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಲಾಗಿದೆ. ಮತ್ತೊಮ್ಮೆ ಅಂತಿಮ ಸರ್ವೇ ನಡೆದ ನಂತರ ಸರ್ವೇ ನಂಬರ್ ಸಹಿತ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ.

ಪರಿಸರ ಅರ್ಜಿ:

ನೈರುತ್ಯ ರೈಲ್ವೆ ಕಳೆದ ವರ್ಷ ಅಧ್ಯಯನ ನಡೆಸಿ ಇದೇ ಏಪ್ರೀಲ್‌ನಲ್ಲಿ ಸಲ್ಲಿಸಿದ 16,435 ಕೋಟಿ ರೂ.ಗಳ ಹೊಸ ಡಿಪಿಆರ್ ಆಧರಿಸಿ, ಪರಿಸರ ಅನುಮತಿಗಾಗಿ ರೈಲ್ವೆ ಇಲಾಖೆಯು ಪರಿಸರ ಇಲಾಖೆಗೆ ಜುಲೈ 10 ರಂದು ಅರ್ಜಿ ಸಲ್ಲಿಸಿದೆ. ಸುಮಾರು 586 ಹೆಕ್ಟೇರ್ ಅರಣ್ಯವನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಸಲ್ಲಿಸಲಾಗಿದ್ದು, ಸುಮಾರು 1.78 ಲಕ್ಷ ಮರಗಳನ್ನು ಕಡಿಯಬೇಕಾಗಬಹುದು ಎಂದು ತಿಳಿಸಲಾಗಿದೆ.

ಯಾವ ಗ್ರಾಮಗಳು..?

ಹೊಸಳ್ಳಿ, ಕಿರವತ್ತಿ, ಕೋಲ್ಕೇರಿ, ರಾಮನಕೊಪ್ಪ, ಕನ್ನಡಗಲ್, ಸಹಸ್ರಳ್ಳಿ, ಕೊಂಡೆಮನೆ, ಯಲ್ಲಾಪುರ, ಚಂದಗುಳಿ, ಸಬಗೇರಿ, ಗೋಪಡಮನೆ, ಹಿತ್ತಲಕಾರಗದ್ದೆ, ಇಡಗುಂದಿ, ಜೋಗದಮನೆ, ಕೊಮ್ಮಾಡಿ, ಅರಬೈಲ, ತೆಲಂಗಾರ, ವಜ್ರಳ್ಳಿ, ಹೊನ್ನಗದ್ದೆ, ಆಂಬಾಗಾವ, ಗುಳ್ಳಾಪುರ, ಕೋಡ್ಲಗದ್ದೆ, ಕಳಚೆ, ಮಾವಿನಮನೆ, ಅಂಕೋಲಾದ ಸುಂಕಸಾಳ, ಕಟ್ಟಿನಹಕ್ಕಲ, ಹೆಬ್ಬುಳ, ಕವಳಳ್ಳಿ, ಅಗಸೂರು, ಹೆಗ್ಗರಮಕಿಗದ್ದೆ, ಅದ್ಧೂರ,ನಾವಗದ್ದೆ, ಬೋಗ್ರಿಬೈಲ್, ಶಿರಕುಳಿ, ಬಾಳೆಗುಳಿ, ಶೆಡಗೇರಿ, ಹೊಸಗದ್ದೆ, ಬೋಳೆ, ಅಂಕೋಲಾ ಗ್ರಾಮಗಳ ಹೆಸರನ್ನು ಯೋಜನೆಗೆ ಸೇರಿಸಲಾಗಿದೆ. ಈಗ ಆ ಗ್ರಾಮಗಳ ಜನರಲ್ಲಿ ಭೂಸ್ವಾಧೀನದ ಆತಂಕ ಶುರುವಾಗಿದೆ.

ಹುಬ್ಬಳ್ಳಿ-ಅಂಕೋಲಾ ಯೋಜನೆಯ ಹಿನ್ನೋಟ

  • *1997-98 ನೇ ಸಾಲಿನಲ್ಲೇ ಭಾರತ ಸರ್ಕಾರದಿಂದ ಅನುಮೋದನೆ ದೊರೆಯಿತು. 2000 ರಲ್ಲಿ ಆಗಿನ ಪ್ರಧಾನಿ ವಾಜಪೇಯಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
  • *163 ಕಿಮೀ ರೈಲ್ವೆ ಯೋಜನೆ ಕಾಮಗಾರಿ ಕಲಘಟಗಿವರೆಗೆ ನಡೆದಿತ್ತು. ಪರಿಸರ ಹಾನಿ ಸಂಬAಧ ಆಕ್ಷೇಪಣೆಗಳು ಬಂದು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಕಾಮಗಾರಿ ಸ್ಥಗಿತವಾಯಿತು.
  • *ವಿವಿಧ ನ್ಯಾಯಾಲಯಗಳ ವಿಚಾರಣೆ, ಉನ್ನತಾಽಕಾರಿ ಸಮಿತಿಯ ಪರಿಶೀಲನೆ ಹಾಗೂ ವರದಿಯ ಬಳಿಕ ಸುಪ್ರೀ ಕೋರ್ಟ್ ಯೋಜನೆಗೆ ಹಸಿರು ನಿಶಾನೆ ತೋರಿತ್ತು.
  • *2016 ರಲ್ಲಿ ನೈರುತ್ಯ ರೈಲ್ವೆ ಯೋಜನೆಗೆ ಹೊಸ ಪ್ರಸ್ತಾವನೆ ಸಿದ್ಧ ಮಾಡಿತ್ತು. ಅದಕ್ಕೆ ಕರ್ನಾಟಕ ವನ್ಯಜೀವಿ ಮಂಡಳಿ 2020 ರಲ್ಲಿ ಅನುಮೋದನೆ ನೀಡಿತ್ತು.
  • *ಆದರೆ, ವನ್ಯಜೀವಿ ಮಂಡಳಿಯ ಅನುಮೋದನೆ ಪ್ರಶ್ನಿಸಿ ಪರಿಸರವಾದಿಗಳು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಸಂಬಂಧಪಟ್ಟ ಅಽಕೃತ ಪರಿಸರ ಹಾಗೂ ವನ್ಯಜೀವಿ ಸರ್ಕಾರಿ ಸಂಸ್ಥೆಗಳ ಸಲಹೆ ಪಡೆದು ಯೋಜನೆಗೆ ಹೊಸ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ಪಡೆಯುವಂತೆ ಆದೇಶ ಮಾಡಿತ್ತು.
  • *ವನ್ಯಜೀವಿ ಸಂಶೋಧನಾ ಸಂಸ್ಥೆ ಸೇರಿ ವಿವಿಧ ಇಲಾಖೆಗಳ ಸಲಹೆ ಪಡೆದ ನೈರುತ್ಯ ರೈಲ್ವೆ ಇದೇ ವರ್ಷ ಏಪ್ರಿಲ್‌ನಲ್ಲಿ ಹೊಸ ಡಿಪಿಆರ್ ಸಿದ್ಧಪಡಿಸಿತ್‌ಉತ. ಆರಂಭದಲ್ಲಿ 483 ಕೋಟಿ ರೂ. ಇದ್ದ ಯೋಜನಾ ವೆಚ್ಚ ಈಗ 16 ಸಾವಿರ ಕೋಟಿಗೆ ತಲುಪಿದೆ.