ದಾಂಡೇಲಿಯ ಸದ್ಗುರು ಯಲ್ಲಾಲಿಂಗೇಶ್ವರ ಶಾಖಾ ಮಠದ ವಾರ್ಷಿಕ ಜಾತ್ರೋತ್ಸವದಲ್ಲಿ ಮುಗುಳಖೋಡದ ಶ್ರೀ ಷಡಕ್ಷರಿ ಶಿವಯೋಗಿ ಡಾ.ಮುರುಘ ರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿದರು. ಶ್ರೀ ಸಂಜಯ ಮಹಾರಾಜ ಸ್ವಾಮಿಜಿ, ಭಕ್ತ ಅಮೋಗಿ ಮದರಿ ಇತರರಿದ್ದರು. 
ಉತ್ತರ ಕನ್ನಡ

ಶ್ರದ್ಧಾಭಕ್ತಿಯ ಸೇವೆಯಿಂದ ಪುಣ್ಯ ಪ್ರಾಪ್ತಿ

ವಿನಯ ಆಶೋಕ ನಾಯ್ಕ
ದಾಂಡೇಲಿ: ಭಕ್ತರಿದ್ದಲ್ಲಿ ಮಾತ್ರ ಮಠಗಳಿರಲು ಸಾಧ್ಯ. ಮಠಗಳು ಸದೃಢಗೊಳ್ಳಲು ಭಕ್ತರ ಶ್ರದ್ಧಾಭಕ್ತಿಯ ಸೇವೆ ಬಹುಮೂಲ್ಯ ಕಾರಣವಾಗಿದೆ ಎಂದು ಮುಗುಳಖೋಡದ ಶ್ರೀ ಷಡಕ್ಷರಿ ಶಿವಯೋಗಿ ಡಾ.ಮುರುಘ ರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ನಗರದ ಸಮೀಪದಲ್ಲಿರುವ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಶಾಖಾ ಮಠದ ವಾರ್ಷಿಕ ಜಾತ್ರೋತ್ಸವದಲ್ಲಿ ಮಂಗಳವಾರ ಅವರು ಮಾತನಾಡಿದರು.
ಶ್ರದ್ಧಾಭಕ್ತಿಯಿಂದ ಮಾಡುವ ಸೇವೆಯಿಂದ ಪುಣ್ಯಪ್ರಾಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ದಾಂಡೇಲಿಯಲ್ಲಿ ಈ ಮಠದ ಸ್ಥಾಪನೆಗಾಗಿ ಇಲ್ಲಿಯ ಭಕ್ತರು ಶ್ರದ್ಧಾಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನಿಜವಾದ ಪುಣ್ಯವಂತರಾಗಿದ್ದಾರೆ ಎಂದರು.
ವಿಜಯಪುರದ ಅಹೇರಿ ಮಠದ ಶ್ರೀ ಸಂಜಯ ಮಹಾರಾಜ ಸ್ವಾಮಿಜಿ, ದಾಂಡೇಲಿ ಶಾಖಾ ಮಠದ ಉಸ್ತುವಾರಿ ಭಕ್ತ ಅಮೋಗಿ ಮದರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಆಲೂರು ಗ್ರಾಪಂ ಸದಸ್ಯ ಸುಭಾಷ ಬೋವಿವಡ್ಡರ, ಪ್ರಮುಖರಾದ ಮದನ ಹಲವಾಯಿ, ಚನ್ನಬಸಪ್ಪ ಮುರುಗೋಡ, ಬಸವರಾಜ ಶಾಬಾದಿ, ಹರಳಯ್ಯ ಲೋಗಾವಿ, ಬಸವರಾಜ ಮಾಶಾಳ, ಶಿವಲಿಂಗಪ್ಪ ಶಾಬಾದಿ, ಶ್ಯಾಮ ಖಾನಾಪುರಿ, ಯಲ್ಲಪ್ಪ ಬಾವಿಕಟ್ಟಿ, ಗಂಗಯ್ಯ ಹಿರೇಮಠ, ನಾಗೇಶ ಕೊಲ್ಲೂರು, ಶ್ರೀಕಾಂತ ಅಸೋದೆ ಇತರರಿದ್ದರು.
ಮದನ ಹಲವಾಯಿ ಮತ್ತು ಗೀತಾ ಹಲವಾಯಿ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಮಹನೀಯರನ್ನು ಸಮಿತಿಯ ಪರವಾಗಿ ಶ್ರೀಗಳು ಸನ್ಮಾನಿಸಿದರು. ಶ್ರೀಮಂತ ಮದರಿ ಸ್ವಾಗತಿಸಿದರು. ಹನುಮಂತ ಕುಂಬಾರ ನಿರೂಪಿಸಿ, ವಂದಿಸಿದರು.