ಕಾರವಾರ: ಸೀಬರ್ಡ್ ನೌಕಾನೆಲೆ ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಿಸಲು ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ನೂತನ ಜಿಲ್ಲಾಧ್ಯಕ್ಷ ಅರುಣ ಹರ್ಕಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013 ರಿಂದ ಉತ್ತರ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷನಾಗಿದ್ದೆ. ಈಗ ಅಧ್ಯಕ್ಷನಾಗುವ ಅವಕಾಶ ದೊರೆತಿದ್ದು, ಎಲ್ಲರ ಸಹಕಾರ ಪಡೆದು, ಕನ್ನಡಪರ ಹೋರಾಟಗಳಲ್ಲಿ ತೊಡಗಿಕೊಳ್ಳಲಿದ್ದೇನೆ ಎಂದರು.
ಕೇಂದ್ರ ಸರ್ಕಾರದ ಎರಡೂ ಬೃಹತ್ ಯೋಜನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ. ಕದಂಬ ನೌಕಾನೆಲೆಯ ಮುಖ್ಯ ದ್ವಾರದಲ್ಲಿ ಅಥವಾ ಬೇರೆ ಯಾವುದೇ ದ್ವಾರದಲ್ಲಿ ಕನ್ನಡ ನಾಮಫಲಕವೇ ಇಲ್ಲ. ಆ ಸಂಬAಧ ಹೋರಾಟ ಮಾಡಲಿದ್ದೇವೆ. ಅಲ್ಲದೇ, ವಿವಿಧ ವಾಣಿಜ್ಯ ಮಳಿಗಗಳಲ್ಲಿ ಶೇ.60 ಕ್ಕಿಂತ ಹೆಚ್ಚು ಭಾಗ ಕನ್ನಡ ಇರಬೇಕು ಎಂಬ ನಿಯಮವೂ ಎಲ್ಲೆಡೆ ಪಾಲನೆಯಾಗುತ್ತಿಲ್ಲ. ಆ ಬಗ್ಗೆ ಹೋರಾಟ ಮಾಡಲಾಗುವುದು ಎಂದರು.
ಜಿಲ್ಲಾ ಉಪಾಧ್ಯಕ್ಷ ವಿನಾಯಕ ನಾಯ್ಕ, ಯುವ ಘಟಕದ ಅಧ್ಯಕ್ಷ ಮಂಜುನಾಥ ನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ನೀಲಾ ಮಾದರ್, ವಿವಿಧ ತಾಲೂಕು ಅಧ್ಯಕ್ಷರಾದ ತಿಮ್ಮಪ್ಪ ನಾಯ್ಕ, ಬಸವರಾಜ ಬೆಂಡಿಗೇರಿಮಠ, ರಾಜಾ ನಾಯ್ಕ, ಮಂಜುನಾಥ ಗೌಡ, ಅಶೋಕ ಮಾನೆ, ಪ್ರಮುಖರಾದ ಭಾಗ್ಯಾ ಸವಣೂರು, ಶ್ರೀಪಾದ ಶೇಟ್, ಶ್ರೀಕಾಂತ ಪಟಗಾರ, ಅಂತೋನ ಫರ್ನಾಂಡಿಸ್, ರೋಹನ್ ರಾಯ್ಕರ್, ಗಿರೀಶ, ನಾಗರಾಜ ನಾಯಕ, ಮಂಜುನಾಥ ನಾಯ್ಕ, ಅಮಿತ್ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.