ಬನವಾಸಿ ಮಧುಕೇಶ್ವರ ದೇವಾಲಯದ ಸೋರುವಿಕೆ ತಡೆ ಕಾಮಗಾರಿಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವೀಕ್ಷಿಸಿದರು. ಬನವಾಸಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ, ಕಾರ್ಯದರ್ಶಿ ವಿಶ್ವನಾಥ್ ಒಡೆಯರ್, ಗೀತಾ ಯಜಮಾನ, ಶಿವಕುಮಾರ ದೇಸಾಯಿ ಇತರರು ಇದ್ದರು.  
ಉತ್ತರ ಕನ್ನಡ

ಆನೆಗಳ ಕೆತ್ತನೆಯ ರಕ್ಷಣೆಗೆ ಮನವಿ

ಶಿರಸಿ: ಬನವಾಸಿ ಮಧುಕೇಶ್ವರ ದೇವಸ್ಥಾನ ಮುಂಭಾಗದಲ್ಲಿ ಮಹಾದ್ವಾರದ ಎರಡೂ ಬದಿಗೆ ಇರುವ ಆನೆಗಳ ಕೆತ್ತನೆಯ ರಕ್ಷಣೆ ಆಗಬೇಕು ಮತ್ತು ದೇವಸ್ಥಾನ ಪ್ರವೇಶ ದ್ವಾರ ವಿನ್ಯಾಸವನ್ನು ಬದಲಾಯಿಸಿ ಆಕರ್ಷಣೀಯವಾಗಿ ಮಾಡಲು ಪ್ರಯತ್ನ ಮಾಡಬೇಕು ಎಂದು ಬನವಾಸಿ ನೂತನ ತಾಲೂಕು ರಚನೆ ಹೋರಾಟ ಸಮಿತಿ ಸದಸ್ಯರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ಮನವಿ ಮಾಡಿದರು.

ಪುರಾತತ್ವ ಇಲಾಖೆಯಿಂದ ಕೈಗೊಂಡಿರುವ ಮಧುಕೇಶ್ವರ ದೇವಸ್ಥಾನ ಶಿಖರ ಸೋರುವಿಕೆ ತಡೆ ಕಾಮಗಾರಿಯನ್ನು ಸಂಸದರು ಸೋಮವಾರ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ, ಕಾರ್ಯದರ್ಶಿ ವಿಶ್ವನಾಥ್ ಒಡೆಯರ್ ಅವರು ದೇವಸ್ಥಾನದ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಆರಂಬಿಸಿದ ಶಾಶ್ವತ ಪರಿಹಾರ ಕಾಮಗಾರಿ ಸಮಯಕ್ಕೆ ಸರಿಯಾಗಿ ಆಗಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಗೇರಿ, ಇಲಾಖೆಯ ಉನ್ನತ ಮಟ್ಟದ ಸಮಿತಿ ಸದಸ್ಯರಾಗಿರುವ ತಮ್ಮ ತಮ್ಮ ನಿರಂತರ ಪ್ರಯತ್ನದಿಂದ ಹಣ ಬಿಡುಗಡೆಯಾಗಿ ಸೋರಿಕೆ ತಡೆ ಕಾಮಗಾರಿ ಪ್ರಾರಂಭವಾಗಿದೆ.

ಈ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಗಮನಕ್ಕೆ ತಂದ ಸ್ಥಳೀಯ ಸಂಘಟನೆ ಬನವಾಸಿ ನೂತನ ತಾಲೂಕು ರಚನಾ ಹೋರಾಟ ಸಮಿತಿ ಪಟ್ಟು ಹಿಡಿದು ಮಾಡಿದ ಪ್ರಯತ್ನ ಕೂಡ ಶ್ಲಾಘನೀಯ ಎಂದರು.

ಸಮಿತಿಯ ಸದಸ್ಯೆ ಗೀತಾ ಯಜಮಾನ, ಪಿಎಸ್‌ಐ ಮಹಾಂತಪ್ಪಾ ಕುಂಬಾರ, ಬಿಜೆಪಿ ಪ್ರಮುಖರಾದ ಶಿವಕುಮಾರ್ ದೇಸಾಯಿ ಗೌಡ,ಅರವಿಂದ್ ಶೆಟ್ಟಿ, ಸಾಯಿರಾಮ ಕಾನಳ್ಳಿ,ಸಿದ್ದಲಿಂಗೇಶ್ ಕಬ್ಬೂರ, ಶಂಕರ ಗೌಡ ಭಾಷಿ, ಜ್ಯೋತಿ ಚನ್ನಯ್ಯ, ಪುಟ್ಟರಾಜ ಸವಣೂರ, ಪ್ರವೀಣ್ ಕತ್ರಾಜಿ, ಪ್ರಶಾಂತ್ ಶೇಟ್, ಹಾಗೂ ಅನಂತ ಖರೆ, ನಾಗೇಶ್ ಭಟ್ ಇತರರು ಇದ್ದರು.