ಸಿದ್ದಾಪುರ ತಾಲೂಕಿನ ಪೂಜಾರಿಕೊಪ್ಪ, ಅರಶಿನಗೋಡ ಹಾಗೂ ಕೋಣೆಗದ್ದೆಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಸಮಾರಾಧನೆಯಲ್ಲಿ ದೇವರನ್ನು ಶೃಂಗರಿಸಿರುವುದು.  
ಉತ್ತರ ಕನ್ನಡ

ದೇವಸ್ಥಾನದ ವಾರ್ಷಿಕ ಸಮಾರಾಧನೆ

ವಿನಯ ಆಶೋಕ ನಾಯ್ಕ
ಸಿದ್ದಾಪುರ: ತಾಲೂಕಿನ ಪೂಜಾರಿಕೊಪ್ಪ, ಅರಶಿನಗೋಡ ಹಾಗೂ ಕೋಣೆಗದ್ದೆಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಸಮಾರಾಧನೆ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಿತು. ಮಹಾಗಣಪತಿ ಪೂಜೆ, ರುದ್ರಹೋಮ, ದೇವಿ ಪಾರಾಯಣ, ಕುಂಕುಮಾರ್ಚನೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಹೆಮ್ಮನಬೈಲಿನ ಲಕ್ಷ್ಮೀನಾರಾಯಣ ಯಕ್ಷಗಾನ ಮಂಡಳಿಯಿಂದ ‘ಬೇಡರ ಕಣ್ಣಪ್ಪ’ ಯಕ್ಷಗಾನ ಪ್ರದರ್ಶನಗೊಂಡು ಜನಮನ ಸೂರೆಗೊಂಡಿತು.