ಯಲ್ಲಾಪುರದ ವೇದವ್ಯಾಸ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಧನಗರಗೌಳಿ ಯುವ ಸೇನೆ ವತಿಯಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಬಾಲಕೃಷ್ಣ ನಾಯಕ, ಸಂತೋಷ ವರಕ್, ಭಾಗು ಡೊಯೊಪೊಡೆ, ಲಕ್ಷ್ಮಣ ಕೊಕರೆ, ಲಕ್ಷ್ಮಣ ಬೊಡಕೆ ಇತರರಿದ್ದರು. 
ಉತ್ತರ ಕನ್ನಡ

EDUCATION: ಶಿಕ್ಷಣದಿಂದ ಸರ್ವಾಂಗೀಣ ಪ್ರಗತಿ

ಸೋಮನಾಥ ರೆಡ್ಡಿ
ಯಲ್ಲಾಪುರ: ಪಟ್ಟಣದ ವೆಂಕಟರಮಣ ಮಠದ ವೇದವ್ಯಾಸ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಧನಗರಗೌಳಿ ಯುವ ಸೇನೆ ವತಿಯಿಂದ ಉತ್ತರ ಕನ್ನಡ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. ಮೂರು ಜಿಲ್ಲೆಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಉದ್ಯಮಿ ಬಾಲಕೃಷ್ಣ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಹಿಂದುಳಿದಿರುವ ಧನಗರಗೌಳಿ ಸಮುದಾಯ ಅತ್ಯಂತ ಮುಗ್ಧ ಸಮಾಜವಾಗಿದ್ದು, ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಇವರು ಶಿಕ್ಷಣ (EDUCATION) ಕ್ಷೇತ್ರದಲ್ಲಿ ಗಣನೀಯವಾಗಿ ಮುಂದೆ ಬರುತ್ತಿರುವುದು ಸಂತಸದ ವಿಚಾರ. ಈ ಸಮಾಜದಲ್ಲಿ ಇತ್ತೀಚೆಗೆ ಭಾರತೀಯ ಸೇನೆಗೆ ಸೇರುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಈ ಸಮಾಜದ ಏಳಿಗೆಗಾಗಿ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಯುವ ಸೇನೆಯ ಅಧ್ಯಕ್ಷ ಸಂತೋಷ ವರಕ್, ಯಾವ ಸಮಾಜದಲ್ಲಿ ಶಿಕ್ಷಣಕ್ಕೆ ಮಹತ್ವ ನೀಡುವುದಿಲ್ಲವೋ ಅಂತಹ ಸಮಾಜ ಅಭಿವೃದ್ದಿ ಹೊಂದಲು ಅಸಾಧ್ಯ. ಧನಗರಗೌಳಿ ಸಮಾಜ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಅವರನ್ನು ಕೂಡ ಗಂಡು ಮಕ್ಕಳಂತೆ ಉತ್ತಮ ಸಾಕ್ಷರರನ್ನಾಗಿ ಮಾಡಿದರೆ ಅವರೂ ಸಮಾಜಕ್ಕೆ ಗೌರವ, ಕೀರ್ತಿ ತರುವುದು ನಿಶ್ಚಿತ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಲ್ಲಿ ಮಾತ್ರ ಪಡೆದ ಶಿಕ್ಷಣಕ್ಕೆ ಮೌಲ್ಯ ಬರುತ್ತದೆ. ಇಟ್ಟ ಗುರಿಯನ್ನು ತಲುಪಬೇಕಾದರೆ ಕೆಣುಕುವರನ್ನು ಇಣುಕಿ ಸಹ ನೋಡಬಾರದು’ ಎಂದರು.
ಸಮಾಜದ ಮೊದಲ ಲೆಕ್ಕಪರಿಶೋಧಕ ಭಾಗು ಡೋಯಿಪೊಡೆ, ಸಮಾಜದ ಹಿರಿಯ ಬಮ್ಮು ಬೀರು ಎಡಗೆ, ಗ್ರಾ.ಪಂ. ಮಾಜಿ ಅಧ್ಯಕ್ಷ ವಿಠ್ಠು ಶೆಳಕೆ, ಯುವ ಸೇನೆಯ ಪ್ರಧಾನ ಕಾರ್ಯದರ್ಶಿಗಳಾದ ಕೊಂಡು ಭಾವಧಾನೆ, ವೇಣುಗೋಪಾಲ್ ಪಟಕಾರೆ, ಉಪಾಧ್ಯಕ್ಷ ಬಾಬು ಶೇಂಡಗೆ, ಖಜಾಂಚಿ ಲಕ್ಷ್ಮಣ ಕೋಕರೆ, ಸಂಘಟನಾ ಕಾರ್ಯದರ್ಶಿ ಬಮ್ಮು ಫೋಂಡೆ, ಗ್ರಾ.ಪಂ. ಮಾಜಿ ಸದಸ್ಯೆ ನಯನಾ ಶೇಂಡಗೆ, ನಿವೃತ್ತ ಸೈನಿಕ ಧೂಳು ಶಿಂಧೆ, ಹಿರಿಯರಾದ ಧೂಳು ಡೋಯಿಪೊಡೆ, ಮಾಲು ವರಕ್, ಸಾಮು ಜೋರೆ, ರಾಮು ಬಿಚ್ಚುಕಲೆ, ಜಾನು ಪಾಂಡ್ರಮೀಸೆ, ಯುವ ಸೇನೆಯ ಪದಾಧಿಕಾರಿಗಳು ಇದ್ದರು.
ವನವಾಸಿ ವಿದ್ಯಾರ್ಥಿ ನಿಲಯದ ಮಕ್ಕಳು ಪ್ರಾರ್ಥಿಸಿದರು. ಯುವ ಸೇನೆಯ ರಾಜ್ಯ ಗೌರವಾಧ್ಯಕ್ಷ ಲಕ್ಷ್ಮಣ ಬೋಡಕೆ, ಕಾರ್ಯಕ್ರಮದ ಸಂಚಾಲಕ ಭರತ ಕೋಕ್ರೆ, ಸಿದ್ದು ಜಾನಕರ್, ಲಕ್ಷ್ಮಣ ಕೋಕ್ರೆ ನಿರ್ವಹಿಸಿದರು.