ಸುಂಕಸಾಳ ಬಳಿ ಬಸ್ ಅಪಘಾತಕ್ಕೊಳಗಾಗಿದರ. 
ಉತ್ತರ ಕನ್ನಡ

ಸುಂಕಸಾಳ ಬಳಿ ಭೀಕರ ಅಪಘಾತ 8 ಜನ ಗಂಭೀರ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಬಸ್ ಹಾಗೂ ಎರಡು ಲಾರಿಗಳ ನಡುವೆ ಸುಂಕಸಾಳ ಮೂಲೆಮನೆ ಸಮೀಪ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಗುರುವಾರ ಬೆಳಗಿನಜಾವ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ 8 ಜನರು ಗಂಭೀರವಾಗಿ ಗಾಯಗೊಂಡಿದ್ದು, 24 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹಂಪಿಯಿಂದ ಗೋವಾಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ವಿದೇಶಿಗರೂ ಸೇರಿ ಹಲವು ಪ್ರಯಾಣಿಕರಿದ್ದರು. ಲಾರಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳೀಯರು ಆಗಮಿಸಿ, ಪ್ರಯಾಣಿಕರನ್ನು ಬಸ್ ನಿಂದ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದರು. ಗಂಭೀರ ಗಾಯಗೊಂಡವರನ್ನು ಕಾರವಾರ ಕ್ರಿಮ್ಸ್ ಗೆ, ಉಳಿದವರನ್ನು ಅಂಕೋಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ನಂತರ ಪೊಲೀಸರು ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸುಮಾರು 5 ತಾಸು ಬಂದ್ ಆಗಿತ್ತು. ಎರಡೂ ಕಡೆ 15 ಕಿಮೀವರೆಗೂ ವಾಹನಗಳ ಸಾಲು ನಿಂತಿತ್ತು.