ಗೋಕರ್ಣದ ಅಶೋಕೆಯಲ್ಲಿ 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ನಿಮಿತ್ತ ಶನಿವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಮಂಗಳೂರು ಶಾಸಕ ಡಾ. ಭರತ ಶೆಟ್ಟಿ, ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.  
ಉತ್ತರ ಕನ್ನಡ

ಹಿತಮಿತ ಭೋಜನಕ್ಕಿದೆ ತಪಸ್ಸಿನ ಫಲ

ಗೋಕರ್ಣ:

ಹಿತಮಿತ ಮೇಧ್ಯಾಶನಂ ತಪಃ. ಹಿತ, ಮಿತ ಮತ್ತು ಪವಿತ್ರವಾದ ಭೋಜನಕ್ಕೆ ತಪಸ್ಸಿನ ಫಲವಿದೆ. ಕಾಡಿಗೆ ಹೋಗದೆ, ಮನೆಯಲ್ಲಿ ಅಥವಾ ಇದ್ದಲ್ಲಿಯೇ ಇದ್ದು ಸುಲಭವಾಗಿ ಮಾಡಬಹುದಾದ ತಪಸ್ಸು ಭೋಜನ ಎಂಬುದಾಗಿ ಆಯುರ್ವೇದ ಶಾಸ ತಿಳಿಸುತ್ತದೆ ಎಂದು 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ನಿರತರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಇಲ್ಲಿನ ಅಶೋಕೆಯಲ್ಲಿ ಶನಿವಾರ ಏರ್ಪಡಿಸಿದ್ದ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಶ್ರೀಗಳು ಆಹಾರ ಅಥವಾ ಭೋಜನ ಸಂಬಂಧಿ ಆಯುರ್ವೇದ ಶಾಸ್ರದ ಸೂತ್ರಗಳನ್ನು ವಣಿರ್ಸಿದರು.

ಪಾಪ ಮತ್ತು ಪರಿಹಾರ

ಪಾಪವೇ ಮನುಷ್ಯ ಜೀವನದಲ್ಲಿನ ಹಲವು ಸಮಸ್ಯೆಗಳಿಗೆ ಮೂಲ. ಪಾಪವೇ ಮಾನವನ ದೊಡ್ಡ ಶತ್ರು. ಇದಕ್ಕೆ ರಾವಣ ನಿದರ್ಶನ. ರಾವಣನ ಶತ್ರು ಶ್ರೀರಾಮ ಅಲ್ಲ. ಆತನ ನಿಜವಾದ ವೈರಿ ಧರ್ಮ ವಿರೋಧಿ ಪಾಪವಾದ ಕಾಮ ಆಗಿದೆ. ಈ ಪಾಪವೇ ನಮ್ಮ ಮತ್ತು ದೇವರ ಮಧ್ಯದ ಅಭೇದ್ಯ ಗೋಡೆಯಾಗಿದೆ. ಪಾಪದ ಈ ಗೋಡೆ ಅಥವಾ ಈ ತೆರೆ ಸರಿದರೆ ಭಗವತ್​ ದರ್ಶನ ಸುಲಭ. ಜೀವಕ್ಕೆ ಆದ್ಯ ಕರ್ತವ್ಯ ಪಾಪ ಪರಿಹಾರ!
ಬದುಕಿಗೆ ಅಂಟಿಕೊಂಡಿರುವ ಈ ಕಳೆಯನ್ನು ಕಳೆಯುವಂತಾಗಬೇಕು. ಜಾಣರು ಇದರ ಮೂಲೋತ್ಪಾಟನೆಯ ಮೂಲಕ ಪರಿಹಾರಕ್ಕೆ ಪ್ರಯತ್ನಶಿಲರಾಗುತ್ತಾರೆ. ಎಂತಹದ್ದೇ ಪಾಪಕ್ಕೆ ತಪಸ್ಸು ರಾಜಮಾರ್ಗ ಎಂದು ಧರ್ಮಶಾಸಗಳು ಸಾರಿವೆ. ಇಂತಹ ತಪಸ್ಸಿಗೆ ಸುಲಭಪ್ರದ ದಾರಿಯನ್ನು ಯೋಗಶಾಸ ನೀಡಿದೆ. ಯೋಗಸೂತ್ರ ಶೌಚ, ಸಂತೋಷ, ತಪಸ್ಸು ಇತ್ಯಾದಿ ಯಮ ನಿಯಮಗಳ ಮೂಲಕ ಪಾಪ ಪರಿಮಾರ್ಜನೆಯ ಸೂಕ್ತ ಮಾರ್ಗವನ್ನು ಉಪದೇಶಿಸಿದೆ. ಅದೇ ಭೋಜನ ಅಥವಾ ಆಹಾರದ ಮೂಲಕದ ತಪಸ್ಸಿನಿಂದ ಪಾಪ ವಿನಾಶ ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.

ಪಾಪದ ಕವಚಗಳು

ತಪಸ್ಸು ಎಂದರೆ ಸುಡುವುದು. ಪಾಪಕ್ಕೆ ಎರಡು ಕವಚಗಳನ್ನು ಗುರುತಿಸಲಾಗಿದೆ. ಒಳ ಮತ್ತು ಹೊರ ಕವಚ.ಪಾಪದ ಹೊರ ಕವಚವನ್ನು ಸ್ನಾನಾದಿ ಕರ್ಮಗಳಿಂದ ತೊಳೆಯಬಹುದು. ಇನ್ನು ಗೋ&ಜನ್ಯ ದ್ರವ್ಯಗಳಿಂದ ಸಿದ್ಧಪಡಿಸಿದ ಪವಿತ್ರ ಪಂಚಗವ್ಯದಿಂದ ಅಸ್ತಿ ಅಥವಾ ಮೂಳೆವರೆಗಿನ ಪಾಪ ಶುದ್ಧಿಯಾದೀತು. ಆದರೆ, ಅಪವಿತ್ರವಾದ ಬೇಡವಾದುದನ್ನು ತಿಂದರೆ ಪಾಪ ನೇರವಾಗಿ ಜಠರವನ್ನೇ ಪ್ರವೇಶಿಸುತ್ತದೆ. ಇಂತಹ ಪಾಪದ ಒಳ ಕವಚವನ್ನು ಪ್ರಾಣಾಯಾಮಕ್ಕೆ ಕಳೆಯುವ ಶಕ್ತಿಯಿದೆ. ಆದರೆ, ಎಲ್ಲರಿಂದ ಯೋಗ ಪ್ರಾಣಾಯಾಮ ಒದಗಿ ಬರುವುದು ಕಷ್ಟ ಸಾಧ್ಯ. ಕಾರಣ ಶರೀರದ ಒಳ ಸೇರಿರುವ ಪಾಪವನ್ನು ನಾಶಗೈಯಲು ಎಲ್ಲರಿಗೂ ಸುಲಭವಾಗಿರುವ ಮಾರ್ಗ ಹಿತಮಿತ ಮತ್ತು ಮೇಧ್ಯ (ಪವಿತ್ರ) ಆಹಾರ ಅಥವಾ ಭೋಜನ ತಪಸ್ಸಾಗಿದೆ.

ಹಿತ ಮಿತ ಮತ್ತು ಮೇಧ್ಯ

ಹಿತ ಮಿತ ಮತ್ತು ಮೇಧ್ಯ ಆಹಾರ ಒಳಗೆ ಬೇರು ಬಿಟ್ಟಿರುವ ಪಾಪವನ್ನೂ ಸುಡಬಲ್ಲದು. ಹಿತ ಆಹಾರದಲ್ಲಿ ನಿಹಿತ ಮತ್ತು ವಿಹಿತ ಎಂಬ ಎರಡು ಬಗೆ. ಪ್ರಕೃತಿ ದತ್ತವಾಗಿ ನಮಗೆ ಕೊಟ್ಟಿದ್ದು ನಿಹಿತ ಹಿತ. ಯಾವುದು ಬೇಕು, ಯಾವುದು ನಿಷಿದ್ಧ ಎಂದು ಶಾಸಗತವಾಗಿ ಆಯುರ್ವೇದ ಮತ್ತು ಧರ್ಮಶಾಸದಿಂದ ನಮಗೆ ಬಂದಿದ್ದು ವಿಹಿತ ಆಹಾರ. ಇನ್ನು ಮೇಧ್ಯ ಆಹಾರ ಎಂದರೆ ಪವಿತ್ರವಾದ ಆಹಾರವಾಗಿದೆ. ಮೇಧ್ಯ ಎಂದರೆ ಯಗಳ ಮುಖೇನ ಭಗವಂತನ ಅರ್ಪಣೆಗೆ ಯೋಗ್ಯವಾದ ವಸ್ತು. ಇಂತಹ ದೇವಾರ್ಪಣೆಗೆ ಯೋಗ್ಯವಾದ ಆಹಾರ ನಮ್ಮ ಶರೀರವನ್ನು ಸೇರಿ ಜಠರಾಗ್ನಿ ಪ್ರಜ್ವಲಿಸುವಂತೆ ಮಾಡಿ ಪಾಪ ನಾಶಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಒಳಗಿನ ಅಗ್ನಿಗೆ ಅನ್ನಪಾನವೇ ಇಂಧನ. ಹೀಗೆ ನಿತ್ಯ ಮಾಡುವ ಹಿತಮಿತದ ಪವಿತ್ರವಾದ ಭೋಜನವೇ ತಪಸ್ಸು. ಇಂತಹ ತಪದಿಂದ ಪ್ರಜ್ವಲಿತ ಅಗ್ನಿ ಪಾಪ, ದೋಷ ಮತ್ತು ರೋಗವನ್ನು ನಿಃಶೇಷ ಮಾಡಬಲ್ಲುದಾಗಿದೆ. ಇಂತಹ ತಪಸ್ಸಿನಿಂದ ಜಠರ ವೈಶ್ವಾನರನು ಪ್ರಜ್ವಲಿತನಾದಾಗ ಹುಲ್ಲು ಮೆದೆಗಳ ಸುಡುವ ಕಾಡ್ಗಿಚ್ಚಿನಂತೆ, ದೇಹಗತ ದೋಷಗಳ ಜೀವಗತ ಪಾಪಗಳ ದಹಿಸುವನು. ಲೇಶವೂ ಶೇಷವಿರದಂತೆ ಸೂತ್ರದಲಿ ಒಳಪಟ್ಟು ಬದುಕನ್ನು ನಡೆಸುತಿರೆ, ಹರಡಿ ಮೈಯೊಳು ಬಿಸಿಯ ಜ್ವಲಿಸಿ ಕಾಯಾಗ್ನಿ, ಕೋಟಿ ಜನ್ಮದ ಗಾಢ ನಿದ್ದೆಯನು ತೊರೆದೆದ್ದು ಸಾವುಗಳು ಪರಮ ಪದದೆಡೆಗೆ ಕುಂಡಲಿನಿ ಎಂದು ಶ್ರೀಗಳು ಸರ್ವರನ್ನು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಶಾಸಕ ಡಾ. ಭರತ ಶೆಟ್ಟಿ ಮತ್ತು ಕರ್ಣಾಟಕ ಬ್ಯಾಂಕ್​ ಸಿಒಒ ಬಿ.ಎಸ್​. ರಾಜಾ ಧರ್ಮಸಭೆಯಲ್ಲಿ ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು. ರಾಮಮೂರ್ತಿ ಕೆ.ಬಿ. ದಂಪತಿ ಶ್ರೀ ಗುರುಭಿಕ್ಷಾ ಸೇವೆ ಸಮಪಿರ್ಸಿದರು. ಸುರೇಶ ಕಲ್ಲಬ್ಬೆ, ಉದಯ ಭಟ್ಟ, ಕಿರಣ ಹೆಗಡೆ, ದಿನ ಪ್ರಧಾನ ಗುಂಡಿ ಮಂಜಪ್ಪ ದಂಪತಿ ಉಪಸ್ಥಿತರಿದ್ದರು.
ಹಾಲಕ್ಕಿ ಸಮಾಜದವರಿಂದ ಸ್ವರ್ಣ ಪಾದುಕಾ ಪೂಜೆ ಸಮಪಿರ್ತವಾಯಿತು. ಹಾಲಕ್ಕಿ ಒಕ್ಕಲಿಗರ ಸಂದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಬೆಳಂಬಾರ, ಬಿ.ಎಸ್​. ಗೌಡ, ಎಸ್​.ಜಿ. ಗೌಡ, ಮಂಜುನಾಥ ಗೌಡ ಕೆಕ್ಕಾರು ಮತ್ತಿತರರಿದ್ದರು.