ಕಾರವಾರ: ನೀರಿನ ಮೇಲೆ ಹಾಗೂ ನೆಲದ ಮೇಲೂ ಸಂಚರಿಸಬಲ್ಲ ಅಪರೂಪದ ಹಾವರ್ ಕ್ರಾಫ್ಟ್ ಬಹು ದಿನಗಳ ಬಳಿಕ ಇಲ್ಲಿನ ಕಾರವಾರ ಕಡಲ ತೀರಕ್ಕೆ ಬಂದಿದ್ದು, ಜನರ ಆಕರ್ಷಣೆಯ ಕೇಂದ್ರವಾಯಿತು.
ಗೋವಾದಲ್ಲಿ ನೆಲೆ ನಿಂತಿರುವ ಭಾರತೀಯ ಕೋಸ್ಟ್ಗಾರ್ಡ್ನ ಎರಡು ಹಾವರ್ ಕ್ರಾಫ್ಟ್ಗಳು ಗುರುವಾರ ಕಾರವಾರ ತೀರಕ್ಕೆ ಆಗಮಿಸಿ ನಿಂತವು. ಮುರ್ಡೇಶ್ವರಕ್ಕೆ ಪ್ರಯಾಣ ಬೆಳೆಸುವ ಮಾರ್ಗದಲ್ಲಿ ವಿಶ್ರಾಂತಿಗಾಗಿ ಕಾರವಾರದಲ್ಲಿ ನಿಲ್ಲಲಾಗಿದೆ ಎಂದು ಕೋಸ್ಟ್ಗಾರ್ಡ್ ಅಽಕಾರಿಗಳು ತಿಳಿಸಿದ್ದಾರೆ.
ಹಾವರ್ ಕ್ರಾಫ್ಟ್ ಎಂಬುದು ನೀರು ಹಾಗೂ ನೆಲ ಎರಡರಲ್ಲೂ ಓಡಾಡುವ ಕೋಸ್ಟ್ಗಾರ್ಡ್ನ ವಿಶಿಷ್ಟ ಗಸ್ತು ಹಾಗೂ ಕಾರ್ಯಾಚರಣೆಗೆ ಹಡಗುಗಳಾಗಿವೆ. ಗಾಳಿ ತುಂಬಿದ ಬೃಹತ್ ರಬ್ಬರ್ ಬೋಟ್‌ಗೆ ಹೊರಗಡೆ ಇಂಜಿನ್‌ಗಳನ್ನು ಕೂರಿಸಿ ಓಡಿಸಲಾಗುತ್ತದೆ. ಮಂಗಳೂರು, ಗೋವಾಗಳಲ್ಲಿ ಈ ಕ್ರಾಫ್ಟ್ಗಳು ನೆಲೆ ಕಂಡಿವೆ.