ಕೋಂಕಣ ರೈಲ್ವೆಯಲ್ಲಿ ಓಡಾಡುತ್ತಿದ್ದ ಮಗುವನ್ನು ಟಿಟಿ ವಶಕ್ಕೆ ಪಡೆದರು
ಕಾರವಾರ: ಕೊಂಕಣ ರೈಲ್ವೆ ನಿಗಮದ ವ್ಯಾಪ್ತಿಯಲ್ಲಿ ರೈಲ್ವೆ ರಕ್ಷಣಾ ಪಡೆ(ಆರ್‌ಪಿಎಫ್) ಅಧಿಕಾರಿಗಳು ಕಳೆದ ಒಂದು ವರ್ಷದಲ್ಲಿ 98 ಮಕ್ಕಳನ್ನು ರಕ್ಷಣೆ ಮಾಡಿ ಸಂಬಂಧಪಟ್ಟ ರಾಜ್ಯದ ಚೈಲ್ಡ್ ಹೆಲ್ಪ್ಲೈನ್‌ಗೆ ಒಪ್ಪಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಕೊಂಕಣ ರೈಲ್ವೆ, ಕಳೆದ ಒಂದು ವರ್ಷದಲ್ಲಿ ಪ್ರಯಾಣಿಕರ ಸುರಕ್ಷತೆ, ಅಪರಾಧ ತಡೆ ಮತ್ತು ಮಾನವೀಯ ನೆರವು ನೀಡುವಲ್ಲಿ ಸಾಕಷ್ಟು ಕಾರ್ಯ ಮಾಡಿದ್ದಾರೆ. ಆಪರೇಷನ್ ನನ್ಹೆ ಫರಿಶ್ತೆ ಹೆಸರಿನಲ್ಲಿ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಆಪರೇಷನ್ ಅಮಾನತ್ ಹೆಸರಿನಲ್ಲಿ ನಿರಂತರ ಕಾರ್ಯಾಚರಣೆಗಳು ನಡೆದಿವೆ. ಒಂದು ವರ್ಷದಲ್ಲಿ 1.22 ಕೋಟಿ ಮೌಲ್ಯದ 252 ಪ್ರಯಾಣಿಕರ ವಸ್ತುಗಳನ್ನು ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಲಾಗಿದೆ.
ಆಪರೇಷನ್ ಸತರ್ಕ್ ಹೆಸರಿನಲ್ಲಿ ಅಕ್ರಮ ಮದ್ಯ ಸಾಗಾಟದ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ 10.71 ಲಕ್ಷ ಮೌಲ್ಯದ 6,877 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, 65 ಜನರನ್ನು ಬಂಽಸಲಾಗಿದೆ. ಪ್ರಯಾಣಿಕರ ಸಾಮಾನು ಕಳ್ಳತನದಲ್ಲಿ ತೊಡಗಿದ್ದ 40 ಕ್ರಿಮಿನಲ್‌ಗಳನ್ನು ಬಂಽಸಿ. ಅವರಿಂದ 48.67 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಮಯಪ್ರಜ್ಞೆ ಮೆರೆದ ಆರ್‌ಪಿಎಫ್ ಸಿಬ್ಬಂದಿ `ಜೀವ ರಕ್ಷಾ' ಯೋಜನೆಯಡಿ ನಾಲ್ವರು ಪ್ರಯಾಣಿಕರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೈಲ್ವೆ ಕಾಯ್ದೆಯ ಸೆಕ್ಷನ್ 141 ರ ಅಡಿ ಅನಽಕೃತವಾಗಿ ಚೈನ್ ಎಳೆಯುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ 192 ಪ್ರಕರಣಗಳನ್ನು ದಾಖಲಿಸಲಾಗಿದ್ದು, 222 ಜನರನ್ನು ಬಂಽಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.