ಮುಂಡಗೋಡ ತಾಲೂಕಿನ ಅಗಡಿ ಗ್ರಾಮದ ಮನೆಯಲ್ಲಿ ಪತ್ತೆಯಾದ ಶ್ರೀಗಂಧ ( sandalwood) ತುಂಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 
ಉತ್ತರ ಕನ್ನಡ

sandalwood 60 ಕೆಜಿ ಶ್ರೀಗಂಧದ ತುಂಡು ವಶಕ್ಕೆ

ಮುಂಡಗೋಡ: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 60 ಕೆಜಿ ಹಸಿ ಶ್ರೀಗಂಧ sandalwood ತುಂಡುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಾಲೂಕಿನ ಅಗಡಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದು, ಆರೋಪಿ ಪರಾರಿಯಾಗಿದ್ದಾನೆ.
ಅಗಡಿ ಗ್ರಾಮದ ಪರಶುರಾಮ ಲೋಕಪ್ಪ ಲಮಾಣಿ ಪರಾರಿಯಾದವ. ಈತ ತನ್ನ ಮನೆಯಲ್ಲಿ ನಾಲ್ಕು ಚೀಲಗಳಲ್ಲಿ 60 ಕೆಜಿಯಷ್ಟು ಶ್ರೀಗಂಧದ ತುಂಡುಗಳನ್ನು ಕಟ್ಟಿ ಇಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮನೆ ಪರಿಶೀಲಿಸಿದಾಗ ಹಸಿ ಶ್ರೀಗಂಧದ ತುಂಡುಗಳು ಪತ್ತೆಯಾಗಿವೆ.
ಪರಾರಿಯಾಗಿರುವ ಆರೋಪಿಯ ಪತ್ತೆಗೆ ಶೋಧ ಕಾರ್ಯ ನಡೆದಿದೆ. ಡಿಎಫ್‌ಒ ಹರ್ಷಾಬಾನು ಜಿ.ಪಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಹುಲಕೋಟಿ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲ್ಲಶೆಟ್ಟಿ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಶ್ರೀಕಾಂತ ವೆರ್ಣೇಕರ, ಗುಸ್ತು ಅರಣ್ಯ ರಕ್ಷಕ ಮರ್ದಾನಲಿ ಕಳಸ, ನಾರಾಯಣಸಿಂಗ್ ರಜಪೂತ ಕಾರ್ಯಾಚರಣೆಯಲ್ಲಿದ್ದರು.