- ಉತ್ತರ ಕನ್ನಡದ 9 ತಾಲೂಕುಗಳು ಸೇರ್ಪಡೆ
- ಕಸ್ತೂರಿ ರಂಗನ್ ವರದಿ ಆಧರಿಸಿ 7 ನೇ ಬಾರಿಗೆ
ಕಸ್ತೂರಿ ರಂಗನ್ ಅವರ ವರದಿಯನ್ನು ಆಧರಿಸಿ ಉತ್ತರ ಕನ್ನಡ ಜಿಲ್ಲೆಯ 558 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಲು ಕೇಂದ್ರ ಪರಿಸರ ಮಂತ್ರಾಲಯ 7 ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ.
ಜು.27 ರಂದು ಭಾರತ ಸರ್ಕಾರದ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. 2024 ರ ಕರಡು ಅಧಿಸೂಚನೆಗೆ ಹೋಲಿಸಿದರೆ ಈ ಕರಡಿನಲ್ಲಿ ಜಿಲ್ಲೆಯ ಸುಮಾರು 146 ಗ್ರಾಮಗಳ ಹೆಸರನ್ನು ಕೈಬಿಡಲಾಗಿದೆ.
ಜಿಲ್ಲೆಯ 9 ತಾಲೂಕುಗಳಲ್ಲಿ ಎಎಸ್‌ಜಡ್ ಗ್ರಾಮಗಳಿದ್ದು, ಹಳಿಯಾಳ, ದಾಂಡೇಲಿ ಹಾಗೂ ಮುಂಡಗೋಡ ತಾಲೂಕಿನ ಯಾವುದೇ ಗ್ರಾಮಗಳನ್ನು ಈ ವ್ಯಾಪ್ತಿಗೆ ಸೇರಿಸಲಾಗಿಲ್ಲ. ಅಚ್ಚರಿಯ ಸಂಗತಿ ಎಂದರೆ ದಟ್ಟ ಅರಣ್ಯ ಇರುವ ಹಲವು ಗ್ರಾಮಗಳ ಹೆಸರು ಈ ಅಧಿಸೂಚನೆಯಲ್ಲಿಲ್ಲ. ಆದರೆ, ಸಾಕಷ್ಟು ಜನದಟ್ಟಣೆ ಇರುವ ಗ್ರಾಮಗಳನ್ನು ಸೂಕ್ಷ್ಮ ವಲಯ ಪ್ರದೇಶಗಳಲ್ಲಿ ಸೇರಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡುವುದರಿಂದ ಕೆಂಪು ಪಟ್ಟಿಗೆ ಸೇರಿದ ಕೈಗಾರಿಕೆಗಳ ಸ್ಥಾಪನೆಗೆ ನಿರ್ಬಂಧ ಬೀಳಲಿದೆ. ಇದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಯೋಜಿತ ಹಾಗೂ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿರುವ ಹಲವು ಬೃಹತ್ ಯೋಜನೆ ಜಾರಿಗೆ ಅಡ್ಡಿಯುಂಟಾಗಲಿದೆ ಎಂಬುದು ಪರಿಸರವಾದಿಗಳ ಅಭಿಪ್ರಾಯ. ಇನ್ನೊಂದೆಡೆ ಉತ್ತರ ಕನ್ನಡದ ಜನಜೀವನಕ್ಕೆ ಅಡಚಣೆಯಾಗಲಿದೆ. ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂಬ ಆಕ್ಷೇಪವೂ ಇದೆ.
ತಾಲೂಕುವಾರು ಪರಿಸರ ಸೂಕ್ಷ್ಮ ಗ್ರಾಮಗಳು
ತಾಲೂಕು ಗ್ರಾಮಗಳ ಸಂಖ್ಯೆ
- ಅಂಕೋಲಾ -37
- ಭಟ್ಕಳ -24
- ಹೊನ್ನಾವರ - 41
- ಜೊಯಿಡಾ -87
- ಕಾರವಾರ -34
- ಕುಮಟಾ -40
- ಸಿದ್ದಾಪುರ - 99
- ಶಿರಸಿ -113
- ಯಲ್ಲಾಪುರ 183
ಈ ಹಿಂದೆ ಈ ಅಽಸೂಚನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಎಲ್ಲ ಹಳ್ಳಿಗಳಿಂದಲೂ ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. ಪರಿಸರ ಸೂಕ್ಷ÷್ಮ ವಲಯ ಕರಡು ಅಽಸೂಚನೆಯನ್ನು ಒಟ್ಟಾರೆ ಮೇಲ್ಮೆÊ ಹಸಿರನ್ನು ಪರಿಗಣಿಸಿ ಮಾಡಲಾಗಿದೆ. ಯಾವುದೇ ವೈಜ್ಞಾನಿಕ ಸಮೀಕ್ಷೆ ನಡೆದಿಲ್ಲ. ಕರಡು ಅಽಸೂಚನೆಯಲ್ಲಿ ಖಾಸಗಿ, ಭೂಮಿ, ಅರಣ್ಯ ಭೂಮಿ ಎಂಬ ವರ್ಗೀಕರಣ ಮಾಡಿಲ್ಲ. ಇದರಿಂದ ತೋಟ, ಬೆಟ್ಟ ಮುಂತಾದ ಅರಣ್ಯವಲ್ಲದ ಹಸಿರಿನ ಪ್ರದೇಶಗಳೂ ಸೂಕ್ಷ÷್ಮ ವಲಯದ ಪಟ್ಟಿಯಲ್ಲಿ ಸೇರಲಿವೆ ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರನಾಥ ನಾಯ್ಕ ಆಕ್ಷೇಪಿಸಿದ್ದಾರೆ.
ವೈಜ್ಞಾನಿಕ ಸಮೀಕ್ಷೆ ನಡೆಸಿ, ಅರಣ್ಯ ಭೂಮಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ. ಅದರ ಹೊರತಾಗಿ ಇಡೀ ಊರನ್ನು ಸೂಕ್ಷ÷್ಮ ವಲಯ ಎಂದು ಘೋಷಿಸುವುದು ಸರಿಯಲ್ಲ ಎಂದು ನಾವು ಕಳೆದ ಬಾರಿ ಆಕ್ಷೇಪಣೆ ಸಲ್ಲಿಸಿದ್ದೆವು. ಇಡೀ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸಿದ್ದೆವು. ಈ ಬಾರಿಯೂ ಕರಡು ಅಽಸೂಚನೆಯಲ್ಲಿ ಹೆಚ್ಚಿನ ವ್ಯತ್ಯಾಸವಾದಂತಿಲ್ಲ.
ಎ.ರವೀಂದ್ರನಾಥ ನಾಯ್ಕ ಉತ್ತರ ಕನ್ನಡ ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ