ಸತೀಶ ಸೈಲ್‌ ಅವರು ಶಂಕುಸ್ಥಾಪನೆ ನೆರವೇರಿಸಿದರು.  
ಉತ್ತರ ಕನ್ನಡ

ಎಂಸಿಎ ಸಿಎಸ್ಆರ್ ಅನುದಾನದಡಿ 35 ಲಕ್ಷ ಸರ್ಕಾರಿ ಕಾಲೇಜ್‌ ಕಟ್ಟಡ

ಒದಗಿಸಲು ಬದ್ದವಾಗಿದ್ದು, ಇದಕ್ಕಾಗಿ ಅಗತ್ಯವಿರುವ ಅನುದಾನವನ್ನು ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಏಜೆನ್ಸಿ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಕೆ. ಸೈಲ್ ಹೇಳಿದರು.
ಅವರು ಶುಕ್ರವಾರ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ,ಕೆ.ಎಸ್.ಎಂ.ಸಿ.ಎ ಸಂಸ್ಥೆಯ ಸಿ.ಎಸ್.ಆರ್ ಅನುದಾನದಡಿ 35 ಲಕ್ಷ ರೂ ವೆಚ್ಚದಲ್ಲಿ ಕಾಲೇಜಿನ ಮೂರನೇ ಮಹಡಿಯಲ್ಲಿ ಸಭಾ ಭವನ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸರ್ಕಾರದಿಂದ ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ 15 ಕೋಟಿಯ ವೆಚ್ಚದ 3 ಶಾಲೆಗಳು ಮಂಜೂರಾಗಿದ್ದು, ಕಾರವಾರದ ಪದವಿ ಪೂರ್ವ ಕಾಲೇಜಿನ ಸುಸಜ್ಜಿತ ಕ್ಯಾಂಟೀನ್ ಬೇಡಿಕೆ ಸಹ ಇದ್ದೂ ಅದನ್ನೂ ಕೂಡಾ ಪರಿಗಣಿಸಲಾಗುವುದು, ಈ ಕಾಲೇಜು ರಾಜ್ಯದ ಮಾದರಿ ಪದವಿ ಪೂರ್ವ ಕಾಲೇಜಾಗಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಸಚಿವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಬಾರಿಯೂ ಕೂಡಾ ಕಾಲೇಜಿನಲ್ಲಿ ಶೇ.100 ರಷ್ಟು ಫಲಿತಾಂಶ ಬರುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ ಏನಗಗೌಡರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸತೀಶ್ ನಾಯ್ಕ್, ಪ್ರಾಂಶುಪಾಲ ರಮೇಶ್ ಪತ್ರೇಕರ್, ಕಾಲೇಜು ಅಭಿವೃಧ್ದಿ ಸಮಿತಿ ಉಪಾಧ್ಯಕ್ಷ ಜಿ.ಪಿ. ನಾಯ್ಕ್, ಸದಸ್ಯರಾದ ಮಾರುತಿ ನಾಯ್ಕ್, ರತ್ನಾಕರ ನಾಯ್ಕ್, ಮತ್ತಿತರರು ಉಪಸ್ಥಿತರಿದ್ದರು.