- ಶಿರಸಿ ಜಿಲ್ಲೆಯಲ್ಲಿ 18 ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 15 ಶಿಕ್ಷಕರಿಗೆ ಪ್ರಶಸ್ತಿ
ಕಾರವಾರ/ಶಿರಸಿ: ಜಿಲ್ಲೆಯ ಎರಡೂ ಶೈಕ್ಷಣಿಕ ಜಿಲ್ಲೆಗಳ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು ಪ್ರಕಟವಾಗಿವೆ. ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ಪ್ರತ್ಯೇಕವಾಗಿ ತಾಲೂಕಿಗೆ ಒಬ್ಬರಂತೆ ಒಟ್ಟು 33 ಗುರುಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ 5 ರಂದು ಶಿರಸಿ ಹಾಗೂ ಅಂಕೋಲಾದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಗಳಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಿಡಿಪಿಐಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ (ಕಾರವಾರ) ಶೈಕ್ಷಣಿಕ ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ಕೋಡಿಬಾಗದ ಸರ್ಕಾರಿ ಶಾಲೆಯ ವಿಶಾಂತ ನಾಯ್ಕ, ಅಂಕೋಲಾ ಮಳಲಗಾಂವ ಶಾಲೆಯ ರಮೇಶ ಕೇಶವ ಹೆಗಡೆ, ಕುಮಟಾ ನೆಹರೂ ನಗರ ಶಾಲೆಯ ಶೈಲಾ ದಿನಕರ ನಾಯ್ಕ, ಹೊನ್ನಾವರ ಖಂಡೋಡಿ ಶಾಲೆಯ ಲಕ್ಷ÷್ಮಣ ಮಂಜುನಾಥ ಪಟಗಾರ, ಭಟ್ಕಳ ಬಬ್ಬನಕಲ್ ಶಾಲೆಯ ಯಶವಂತ ಆರ್. ನಾಯ್ಕ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೋಡಿಬಾಗ ಹೆಣ್ಣು ಮಕ್ಕಳ ಶಾಲೆಯ ಶೋಭಾ ಆರ್. ಕಾಮತ್, ಅಂಕೋಲಾ ಗುಂಡಬಾಳ ಶಾಲೆಯ ಶೋಭಾ ಸಣ್ಣಪ್ಪ ನಾಯಕ, ಕುಮಟಾ ಗುಡಿಗಾರಗಲ್ಲಿ ಶಾಲೆಯ ರಾಮಚಂದ್ರ ಸುಬ್ರಾಯ ಶೆಟ್ಟಿ, ಹೊನ್ನಾವರ ಸಂಶಿ ಶಾಲೆಯ ಸಾಲ್ವದೋರ್ ಮಿಂಗ್ಲಿ ಲೋಪಿಸ್, ಭಟ್ಕಳ ಮಡಿಕೇರಿ ಶಾಲೆಯ ಮಾದೇವಿ ಟಿ.ಹರಿಕಾಂತ, ಪ್ರೌಢಶಾಲಾ ವಿಭಾಗದಲ್ಲಿ ಅಸ್ನೋಟಿ ಶಿವಾಜಿ ವಿದ್ಯಾಮಂದಿರದ ಸಂತೋಷ ಭರಮಾಣಿ ಕಾಂಬಳೆ, ಅಂಕೋಲಾ ಅವರ್ಸಾ ಕಾತ್ಯಾಯನಿ ಹೈಸ್ಕೂಲ್‌ನ ವಿನಾಯಕ ನಾಯಕ, ಕುಮಟಾ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‌ನ ರಾಮಕೃಷ್ಣ ಎನ್.ನಾಯಕ, ಹೊನ್ನಾವರ ಚಿತ್ತಾರ ಸರ್ಕಾರಿ ಪ್ರೌಢಶಾಲೆಯ ಭಾರತಿ ಆನಂದು ಶಾನಭಾಗ, ಭಟ್ಕಳ ಬೆಳಕೆ ಪ್ರೌಢಶಾಲೆಯ ಪ್ರಕಾಶ ಮಾಧವ ಶಿರಾಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿರಸಿ ಶೈಕ್ಷಣಿಕ ಜಿಲ್ಲೆಯ ಕಿಪ್ರಾ ವಿಭಾಗದಲ್ಲಿ ಶಿರಸಿ ಹಾರೇಪಾಲ ಶಾಲೆಯ ಅರುಣ ಭಟ್ಟ,ಸಿದ್ದಾಪುರ ಕಂಚಿಕೈ ಶಾಲೆಯ ಪ್ರೇಮಾ ನಾಯ್ಕ, ಯಲ್ಲಾಪುರ ಆನಗೋಡ ಶಾಲೆಯ ಮಾರುತಿ ಆಚಾರಿ, ಮುಂಡಗೋಡ ಸಂಜಯ ನಗರದ ಗಣೇಶ ಸುಬ್ರಾಯ ಆಚಾರಿ, ಹಳಿಯಾಳ ಕೆ.ಕೆ.ಹಳ್ಳಿಯ ಸುಜಾತಾ ಎ.ಆರ್., ಜೊಯಿಡಾ ಕೊಂದರ ಶಾಲೆಯ ಈರಣ್ಣ ಪಗಡಿ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿರಸಿ ಕಸ್ತೂರಬಾನಗರ ಶಾಲೆಯ ಮಹಾದೇವ ಸಂಭಾಜಿ, ಸಿದ್ದಾಪುರ ಹೊಸೂರು ಶಾಲೆಯ ಗಣಪತಿ ಗೊಂಡ, ಯಲ್ಲಾಪುರ ಶಿರನಾಲಾ ಶಾಲೆಯ ಸತೀಶ ಶೆಟ್ಟಿ, ಮುಂಡಗೋಡ ಮಳಗಿ ಕೆಪಿಎಸ್‌ನ ಪುಷ್ಪಲತಾ ಗೋವಿಂದರಾಯ್ ನಾಯಕ, ಹಳಿಯಾಳ ಚಿಬ್ಬಲಗೇರಿ ಶಾಲೆಯ ಬೇಬಿ ದೊಡ್ಡಾ ಬೋರಕರ್, ಜೊಯಿಡಾ ರಾಮನಗರ ಶಾಲೆಯ ವಿದ್ಯಾ ಸೀತಾರಾಮ ದೇಸಾಯಿ, ಪ್ರೌಢಶಾಲಾ ವಿಭಾಗದಲ್ಲಿ ಶಿರಸಿ ಇಸಳೂರು ಸರ್ಕಾರಿ ಪ್ರೌಢಶಾಲೆಯ ದಿವಾಕರ ಮರಾಠಿ, ಸಿದ್ದಾಪುರ ಕಾನಸೂರು ಕಾಳಿಕಾ ಭವಾನಿ ಪ್ರೌಢಶಾಲೆಯ ಪ್ರವೀಣ ಕುರುಬರ್, ಯಲ್ಲಾಪುರ ಕಿರವತ್ತಿ ಕೆಪಿಎಸ್‌ನ ನಾಗರಾಜ ಟಿ. ನಾಯ್ಕ, ಮುಂಡಗೋಡ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ರಮೇಶ ಪವಾರ, ಹಳಿಯಾಳ ತೇರಗಾಂವ ಸರ್ಕಾರಿ ಪ್ರೌಢಶಾಲೆಯ ಅರುಣ ಬೊಮ್ಮಯ್ಯ ನಾಯಕ, ಜೊಯಿಡಾ ತೀನೈಘಾಟ್ ಸರ್ಕಾರಿ ಪ್ರೌಢಶಾಲೆಯ ಬಾಬು ತಾರಾಸಿಂಗ ಚವ್ಹಾಣ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.