ಅಧಿಕಾರಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. 
ಉತ್ತರ ಕನ್ನಡ

30 ಅಧಿಕಾರಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ

ಕಾರವಾರ: ಕಳೆದ ಮೂರು ವರ್ಷಗಳ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಸೋಮವಾರ ಏಕಕಾಲದಲ್ಲಿ ಪ್ರದಾನ ಮಾಡಲಾಯಿತು. ಇಲಾಖೆಗಳಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುವವರಿಗೆ ಪ್ರತಿ ವರ್ಷ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡುವ ಪರಿಪಾಠವಿದೆ. ಮೂರು ವರ್ಷಗಳಿಂದ ಈ ಪ್ರಶಸ್ತಿ ನೀಡಿರಲಿಲ್ಲ. ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಸಮಾರಂಭದಲ್ಲಿ 30 ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 
ಸಹಾಯಕ ತೋಟಗಾರಿಕೆ ಅಽಕಾರಿ ನಾಗಪ್ಪ ಕೊಟುರ, ಜೊಯಿಡಾ ಆಂಬುಲೆನ್ಸ್ ಚಾಲಕ ಸುಶಾಂತ ಮೇತ್ರಿ, ಗ್ರಾಮ ಆಡಳಿತ ಅಧಿಕಾರಿ ವಿಜೇತಾ ಶಾನಭಾಗ, ಜಿಪಂ ಮುಖ್ಯ ಯೋಜನಾಽಕಾರಿ ವಿನೋದ ಅಣ್ವೇಕರ್, ಜಿಪಂ ಜವಾನ ಸುರೇಶ ಪಿ.ಹೊನ್ನಾವರ, ಸಹಾಯಕ ತೋಟಗಾರಿಕೆ ಅಧಿಕಾರಿ ಸಂತೋಷ್, ಹೊನ್ನಾವರ ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯದ ವಾರ್ಡನ್ ಸವಿತಾ ನಾಯ್ಕ, ಶಿಶು ಅಭಿವೃದ್ಧಿ ಯೋಜನಾಧಿಕಅರಿ ನಾಗರತ್ನಾ ನಾಯಕ, ತಹಸೀಲ್ದಾರ್ ಎನ್.ಎಫ್ ನರೋನಾ, ಚೆಂಡಿಯಾ ಮೆಡಿಕಲ್ ಆಫೀಸರ್ ಡಾ.ಹರ್ಷ ಅವರಿಗೆ 2023 ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಜಿಲ್ಲಾ ಪಂಚಾಯಿತಿ ಸಹಾಯಕ ನಿರ್ದೇಶಕ ಸುನೀಲ ದಿಗಂಬರ ನಾಯ್ಕ, ಬೆಳಸೆ ಮೆಡಿಕಲ್ ಆಫೀಸರ್ ಡಾ.ಅರ್ಚನಾ ನಾಯ್ಕ, ಜಿಲ್ಲಾ ನ್ಯಾಯಾಲಯದ ಬೇಲೀಫ್ ಹನುಮಂತ ಗೌಡ, ಕಂದಾಯ ನಿರೀಕ್ಷಕ ಅನಿಲ್ ಪರಬತ್, ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಕಲ್ಪನಾ ಕಾರ್ವೇಕರ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರತೀಕ ಶೆಟ್ಟಿ, ಮುಂಡಗೋಡ ಇಒ ತಿಪ್ಪಣ್ಣ ದಾಸನಕೊಪ್ಪ, ಜಿಲ್ಲಾಽಕಾರಿ ಕಚೇರಿಯ ಚಾಲಕ ಪಾಂಡುರಂಗ ಹಳದನಕರ್, ಬನವಾಸಿ ಹಾಸ್ಟೆಲ್ ವಾರ್ಡನ್ ಪ್ರಸನ್ನ ಹೆಗಡೆ, ಸಿದ್ದಾಪುರ ತಹಸೀಲ್ದಾರ್ ಎಂ.ಆರ್.ಕುಲಕರ್ಣಿ ಅವರಿಗೆ 2024 ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಜಿಪಂ ಯೋಜನಾ ನಿರ್ದೇಶಕ ಕರೀಂ ಅಸದಿ, ಸಿದ್ದಾಪುರ ಸಹಾಯಕ ತೋಟಗಾರಿಕೆ ಅಧಿಕಾರಿ ರಮೇಶ ಬಿ, ಸಿಇಒ ಅವರ ಆಪ್ತ ಸಹಾಯಕ ಮೈಲಾರ ಬೆಣ್ಣಿ, ಬಂದರು ಇಲಾಖೆ ಆಡಳಿತ ಸಹಾಯಕ ಸುರೇಶ ಡಿ.ಶೆಟ್ಟಿ, ಪಂಚಾಯಿತಿ ಇಂಜಿನಿಯರಿAಗ್ ವಿಭಾಗದ ದ್ವಿತೀಯ ದರ್ಜೆ ಸಹಾಯಕ ಕೃಷ್ಣ ಭಟ್, ಹಳಿಯಾಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಐ.ಮಾನೆ, ಪಿಡಿಒ ಮಂಜುನಾಥ್, ಶಿರಸಿ ಎಸಿ ಕಚೇರಿಯ ಭುವನೇಶ್ವರಿ ಅಲಗೇರಿ, ಗ್ರಾಮ ಆಡಳಿತ ಅಽಕಾರಿ ಶಿವರಾಜ ಬಿ.ಎ.ಅವರಿಗೆ 2025 ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಸಾಧಕರಿಗೆ ಸನ್ಮಾನ 
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಸಾಧನೆ ಮಾಡಿದ ರಚನ್ ಸುರೇಂದ್ರ ನಾಯ್ಕ, ಸ್ಮೃತಿ ವಿಶ್ವನಾಥ ಗಾಂವಕರ್, ಕ್ರೀಡಾ ಸಾಧನೆಗಾಗಿ ಶಿರಸಿಯ ಅಭಿನೀತ್ ಭಟ್ಟ, ಕುಮಟಾದ ಸಿಂಚನಾ ಗಣಪತಿ ಭಟ್ಟ, ಕಲೆ, ಸಾಂಸ್ಕೃತಿ, ಸಂಗೀತ ಕ್ಷೇತ್ರದ ಸಾಧನೆಗಾಗಿ ಸಿದ್ದಾಪುರದ ಆಶ್ರಿತ್ ಜಿ., ಅಶೋಕ ಮೇತ್ರಿ, ಕ್ರೀಡೆಯಲ್ಲಿ ಸಾಧನೆ ಮಾಡಿದ ಕಾರವಾರದ ಪೂರ್ವಿ ಹರಿಕಾಂತ, ಭಟ್ಕಳದ ಕುಮಾರ ಬಿ.ವಿ.ರಾಹುಲ್, ಕುಮಟಾಧ ನಂದನ್ ದೈವಜ್ಞ, ಪ್ರತಾಪ ಬಾಲಚಂದ್ರ ಪಟಗಾರ ಅವರನ್ನು ಸನ್ಮಾನಿಸಲಾಯಿತು. 
ಅಂಗಾಂಗ ದಾನ ಮಾಡಿದ ಅಂಕೋಲಾ ಹಳವಳ್ಳಿಯ ಸುಬ್ರಾಯ ಭಟ್ಟ ಅವರ ತಾಯಿ ಲಲಿತಾ ವೆಂಕಟರಮಣ ಭಟ್ಟ, ಉದಯೋನ್ಮುಖ ಕೃಷಿಕ ಹಾಗೂ ಕೃಷಿ ಪಂಡಿತ ಪ್ರಶಸ್ತಿ ಪಡೆದ ತಿಮ್ಮಣ್ಣ ವಿಠೋಬ ನಾಯಕ ಅಂಕೊಲಾ, ಸಿದ್ದಾಪುರದ ಪುಟ್ಟಣ್ಣಯ್ಯ ತಮ್ಮಣ್ಣಯ್ಯ ಗೌಡ, ಜಯಂತ್ ಸೋಮೇಶ್ವರ ಹೆಗಡೆ, ಹೊನ್ನಾವರದ ನಾಗಪ್ಪ ಗೌಡ, ದಾಂಡೇಲಿಯ ಪುಂಡಲೀಕ ಪಿಸಾಳೆ, ಶಿರಸಿಯ ರಾಜೇಶ್ವರಿ ಹೆಗಡೆ ಅವರನ್ನು ಸನ್ಮಾನಿಸಲಾಯಿತು.