ಜೊಯಿಡಾ ರಾಮನಗರದಲ್ಲಿ ಪ್ಲಾಸ್ಟಿಕ್‌ ವಶಕ್ಕ ಪಡೆಯಲಾಯಿತು.  
ಉತ್ತರ ಕನ್ನಡ

255 ಕೆಜಿ ಅಕ್ರಮ ಪ್ಲಾಸ್ಟಿಕ್‌ ವಶ

ಕಾರವಾರ: ಜೊಯಿಡಾ ತಾಲೂಕಿನ ರಾಮನಗರದಲ್ಲಿ ಅಧಿಕಾರಿಗಳು ಪ್ಲಾಸ್ಟಿಕ್ ವಸ್ತುಗಳನ್ನು ತುಂಬಿದ ವಾಹನದ ಮೇಲೆ ದಾಳಿ ನಡೆಸಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರವಾರ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ್, ರಾಮನಗರ ಗ್ರಾಮ ಪಂಚಾಯಿತಿ ಸಿಬ್ಬಂದಿ ಅರ್ಚನಾ ಮತ್ತು ಕಮಲಾಕರ ಅವರ ತಂದ ದಾಳಿ ನಡೆಸಿತ್ತು. ಏಕ ಬಳಕೆಯ ಪ್ಲೇಟ್, ಸ್ಟ್ರಾ, ಕಪ್ ಮತ್ತು ಕ್ಯಾರಿಬ್ಯಾಗ್ ಪ್ಲಾಸ್ಟಿಕ್‌ಗಳನ್ನು ತುಂಬಿದ್ದ ಓಮ್ನಿ ವಾಹನದ ಮೇಲೆ ದಾಳಿ ನಡೆಸಿದ್ದು, 150 ಕೆಜಿ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ. 3 ಸಾವಿರ ರೂ. ದಂಡ ವಿಧಿಸಲಾಗಿದೆ.
ಅಲ್ಲದೇ ರಾಮದೇವ ಜನರಲ್ ಸ್ಟೋರ್ಸ್, ಭಾಗ್ಯಲಕ್ಷ್ಮೀ ಟ್ರೇಡರ್ಸ್ ಮೇಲೆ ದಾಳಿ ನಡೆಸಿದ ಅಽಕಾರಿಗಳು ಅವರಿಂದ 105 ಕೆಜಿ ನಿಷೇಽತ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, 4 ಸಾವಿರ ರೂ. ದಂಡವನ್ನು ಆಕರಿಸಿದ್ದಾರೆ. ಈ ವೇಳೆ ವ್ಯಾಪಾರಿಗಳಲ್ಲಿ ಹಾಗೂ ಅಲ್ಲಿ ಸೇರಿದ್ದ ಸಾರ್ವಜನಿಕರಲ್ಲಿ ನಿಷೇಽತ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸದಂತೆ ಜಾಗೃತಿ ಮೂಡಿಸಲಾಯಿತು, ಪ್ಲಾಸ್ಟಿಕ್‌ಗಳನ್ನು ರಾಮನಗರ ಗ್ರಾಪಂಗೆ ವೈಜ್ಞಾನಿಕ ವಿಲೇವಾರಿಗಾಗಿ ಹಸ್ತಾಂತರಿಸಲಾಯಿತು.