ಪಿಯುಸಿ ಫಲಿತಾಂಶದ ವೆಬ್ ಸೈಟ್
ಕಾರವಾರ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಶೇ. 91.78 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆ ರಾಜ್ಯದಲ್ಲಿ ಐದನೇ ಸ್ಥಾನ ಪಡೆದಿದೆ.
2025 ರಲ್ಲಿ ಶೇ.82.93 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು, ಜಿಲ್ಲೆ ರಾಜ್ಯಕ್ಕೆ 6 ನೇ ಸ್ಥಾನದಲ್ಲಿತ್ತು. ಈ ಬಾರಿ ಫಲಿತಾಂಶದ ಜತೆ ಒಂದು ರ‍್ಯಾಂಕ್ ಕೂಡ ಸುಧಾರಿಸಿದೆ. 2024 ಹಾಗೂ 23 ರಲ್ಲಿ ಜಿಲ್ಲೆ 4 ನೇ ಸ್ಥಾನದಲ್ಲಿತ್ತು. 2023 ರಲ್ಲಿ ಶೇ.89.74 ರಷ್ಟು, 2024 ರಲ್ಲಿ ಶೇ.92.51 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
ಒಟ್ಟು 11,998 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಅದರಲ್ಲಿ 11023 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ ಶೇ.83.9, ವಾಣಿಜ್ಯ ವಿಭಾಗದಲ್ಲಿ ಶೇ.93.2, ವಿಜ್ಞಾನ ವಿಭಾಗದಲ್ಲಿ ಶೇ. 94.7 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
- *ಭಟ್ಕಳ ಅಂಜುಮನ್ ಪಿಯು ಕಾಲೇಜ್‌ನ ಶಿಫಾ ಅನಂ ಅಮೀರ್ ಹಂಜಾ(ಶೇ.98.50)
- *ಹಿರೇಗುತ್ತಿ ಸರ್ಕಾರಿ ಪಿಯು ಕಾಲೇಜ್‌ನ ಜಾನ್ಹವಿ ಮಾಸ್ತಿ ಗೌಡ(ಶೇ.97.83)
- *ಕಾರವಾರ ಸರ್ಕಾರಿ ಪಿಯು ಕಾಲೇಜ್‌ನ ಸಾಕ್ಷಿ ವಿನೋದ ನಾಯ್ಕ (ಶೇ.97.5)
- *ಹೊನ್ನಾವರ ಎಸ್‌ಡಿಎಂ ಪಿಯು ಕಾಲೇಜ್‌ನ ಚಿನ್ಮಯಿ ಮಂಜುನಾಥ ಶೆಟ್ಟಿ (ಶೇ.99.33)
- *ಶಿರಸಿ ಎಂಇಎಸ್ ಪಿಯು ಕಾಲೇಜ್‌ನ ಪ್ರಣವ ಎನ್. ಭಟ್ (ಶೇ.99)
- *ಭಟ್ಕಳ ನ್ಯೂ ಇಂಗ್ಲಿಷ್ ಪಿಯು ಕಾಲೇಜ್‌ನ ಸಂಜನಾ ನಾಗಪ್ಪ ನಾಯ್ಕ(ಶೇ.98.83)
- *ಶಿರಸಿ ಎಂಇಎಸ್ ಪಿಯು ಕಾಲೇಜ್‌ನ ಚೈತನ್ಯ ಜಿ ಹೆಗಡೆ(ಶೇ.99.16)
- *ಭಟ್ಕಳದ ಅಂಜುಮನ್ ಮಹಿಳಾ ಪಿಯು ಕಾಲೇಜ್‌ನ ಮೈಮುನಾ ಅಜೈಬ್(ಶೇ.99)
- *ಸಿದ್ದಾಪುರ ಚೇತನಾ ಪಿಯು ಕಾಲೇಜ್‌ನ ರಘು ಶರಶ್ಚಂದ್ರ ಹೆಗಡೆ (98.83)
ಜಿಲ್ಲೆಯ ಖಾಸಗಿ ಹಾಗೂ ವಸತಿ ಸಹಿತ ಸರ್ಕಾರಿ ಪಿಯು ಕಾಲೇಜ್‌ಗಳು ಹೆಚ್ಚಿನ ಫಲಿತಾಂಶ ಪಡೆದಿವೆ. ಖಾಸಗಿ ಕಾಲೇಜ್‌ಗಳ 3211 ರ ಪೈಕಿ 3103 ವಿದ್ಯಾರ್ಥಿಗಳು(ಶೇ.96.6) ತೇರ್ಗಡೆ ಹೊಂದಿದ್ದಾರೆ. ವಸತಿ ಸಹಿತ ಸರ್ಕಾರಿ ಕಾಲೇಜ್‌ಗಳ 190 ರಲ್ಲಿ 174 ವಿದ್ಯಾರ್ಥಿಗಳು (ಶೇ.91.6), ಸರ್ಕಾರಿ ಪಿಯು ಕಾಲೇಜ್‌ಗಳ 5681 ರಲ್ಲಿ 5181 ವಿದ್ಯಾರ್ಥಿಗಳು(ಶೇ.91.2), ಅನುದಾನಿತ ಕಾಲೇಜ್‌ಗಳ 2871 ರಲ್ಲಿ 2542 ವಿದ್ಯಾರ್ಥಿಗಳು(ಶೇ.88.5) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ತಾಲೂಕುವಾರು ಫಲಿತಾಂಶ
ತಾಲೂಕುಗಳು ಶೇ. ಫಲಿತಾಂಶ
- ಅಂಕೋಲಾ 90.5
- ಭಟ್ಕಳ 86.1
- ದಾಂಡೇಲಿ 83.1
- ಹಳಿಯಾಳ 89.0
- ಹೊನ್ನಾವರ 92.9
- ಜೊಯಿಡಾ 92.4
- ಕಾರವಾರ 85.9
- ಕುಮಟಾ 96.3
- ಮುಂಡಗೋಡ 93.8
- ಸಿದ್ದಾಪುರ 91.7
- ಶಿರಸಿ 96.7
- ಯಲ್ಲಾಪುರ 89.5
ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ಬಂದಿದೆ. ಅದಕ್ಕಾಗಿ ಶ್ರಮಿಸಿದ ಎಲ್ಲ ಉಪನ್ಯಾಸಕರಿಗೆ, ಪಾಲಕರಿಗೆ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಸತೀಶ ನಾಯ್ಕ ಡಿಡಿಪಿಯು, ಕಾರವಾರ