- ಇಂದಿರಾ ವೃದ್ಧಾಪ್ಯ ವೇತನದ ಒಟ್ಟು ಫಲಾನುಭವಿಗಳು -21.87 ಲಕ್ಷ
- ಇಂದಿರಾ ವೃದ್ಧಾಪ್ಯ ವೇತನದ ಅನುಮಾನಾಸ್ಪದ ಫಲಾನುಭವಿಗಳ- 9.04 ಲಕ್ಷ
- ಸಂಧ್ಯಾ ಸುರಕ್ಷಾ ಫಲಾನುಭವಿಗಳು- 31.33 ಲಕ್ಷ
- ಸಂಧ್ಯಾ ಸುರಕ್ಷಾ ಅನುಮಾನಾಸ್ಪದ ಫಲಾನುಭವಿಗಳು-14.15 ಲಕ್ಷ
ರಾಜ್ಯದಲ್ಲಿ ಮಾಸಾಶನಗಳು ಎರಡು ತಿಂಗಳಿಂದ ಬಿಡುಗಡೆಯಾಗಿಲ್ಲ ಎಂದು ಬೊಬ್ಬೆ ಬಿದ್ದಿದೆ. ಆದರೆ, ವಾಸ್ತವದಲ್ಲಿ 15 ಲಕ್ಷಕ್ಕಿಂತ ಹೆಚ್ಚಿನ ಪಿಂಚಣಿದಾರರು ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ ಎಂಬುದು ಪರಿಶೀಲನೆಯಲ್ಲಿ ಖಚಿತವಾಗಿದ್ದು, ಸರ್ಕಾರ ಅವರಿಗೆ ಮಾಶಾಸನ ಹಣ ಜಮಾ ಮಾಡುವುದನ್ನು ಸ್ಥಗಿತ ಮಾಡಿದೆ.!!
ಮಾಸಾಶನ ಪಡೆಯಲು ಸರ್ಕಾರ ನಿಗದಿ ಮಾಡಿದ ಅರ್ಹತೆಗಳನ್ನು ಮೀರಿದ 23 ಲಕ್ಷ ಪಿಂಚಣಿದಾರರನ್ನು ಅನುಮಾನಾಸ್ಪದ ಎಂದು 2025ರ ಜೀನ್‌ನಲ್ಲಿಯೇ ಗುರುತಿಸಲಾಗಿತ್ತು. ಈ ವರ್ಷ ಮಾರ್ಚ್ನಿಂದ ಅವುಗಳ ಪರಿಶೀಲನಾ ಕಾರ್ಯ ನಡೆದಿತ್ತು. ಪಿಂಚಣಿ ನಿರ್ದೇಶನಾಲಯ ಒದಗಿಸಿದ ಪಟ್ಟಿಯಂತೆ ಗ್ರಾಮ ಆಡಳಿತ ಅಽಕಾರಿಗಳು ಫಲಾನುಭವಿಗಳ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಮಾರ್ಚ್ 27 ರ ವರದಿಯಂತೆ ಬಾಗಲಕೋಟೆ, ಬಳ್ಳಾರಿ, ಕೋಲಾರ, ದಾವಣಗೆರೆ, ಗದಗ ಸೇರಿ ನಾಲ್ಕು ಜಿಲ್ಲೆಯಲ್ಲಿ ಶೇ. 100 ರಷ್ಟು ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ. ಉಳಿದ 17 ಜಿಲ್ಲೆಗಳಲ್ಲಿ ಶೇ.90 ರಷ್ಟು, ರಾಜ್ಯದಲ್ಲಿ ಶೇ. 84.87 ರಷ್ಟು(19.62 ಲಕ್ಷ) ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ. ಅದರಲ್ಲಿ 15,75,911 ಪಿಂಚಣಿಗಳು ಅಕ್ರಮ ಎಂದು ಪರಿಗಣಿಸಿ ಅವುಗಳನ್ನು ಸ್ಥಗಿತ ಮಾಡಲಾಗಿದೆ. ಎಂದರೆ ಪಿಂಚಣಿ ನಿರ್ದೇಶನಾಲಯ ಅನುಮಾನಾಸ್ಪದ ಎಂದು ಪಟ್ಟಿ ಮಾಡಿದ ಮಾಸಾಶನಗಳಲ್ಲಿ ಶೇ.68 ರಷ್ಟು ಅಕ್ರವಾಗಿರುವುದು ಖಚಿತವಾಗಿದೆ. 23 ಲಕ್ಷದಲ್ಲಿ ನಿಯಮಾವಳಿಯಂತೆ ಇರುವ 3.86 ಲಕ್ಷ ಪಿಂಚಣಿಗಳನ್ನು ಮುಂದುವರಿಸಲಾಗಿದೆ.
ಅಕ್ರಮ ಹೇಗೆ..?
ಪ್ರಮುಖವಾಗಿ 9 ವಿಧದ ಸಾಮಾಜಿಕ ಭದ್ರತಾ ಯೋಜನೆಗಳಿವೆ. ಅವುಗಳಲ್ಲಿ ಮುಖ್ಯವಾಗಿ ಇಂದಿರಾ ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಫಲಾನುಭವಿಗಳು ಹೆಚ್ಚಿದ್ದು, ಅಲ್ಲೇ ಹೆಚ್ಚು ಅಕ್ರಮ ಫಲಾನುಭವಿಗಳೂ ಇರುವುದು ವಿಎಗಳ ಮನೆ ಭೇಟಿಯಲ್ಲಿ ಖಚಿತವಾಗಿದೆ.
ಸಂಧ್ಯಾ ಸುರಕ್ಷಾ ಹಾಗೂ ಇಂದಿರಾ ಗಾಂಽ ರಾಷ್ಟಿçÃಯ ವೃದ್ಧಾಪ್ಯ ವೇತನ ಯೋಜನೆಗೆ ಕನಿಷ್ಠ 65 ವರ್ಷ ವಯಸ್ಸಾಗಿರಬೇಕು ಎಂಬ ನಿಬಂಧನೆ ಇದೆ. ಆದರೆ, ಆಧಾರ ಕಾರ್ಡ್ನಲ್ಲಿ 40, 35 ವರ್ಷ ಇದ್ದವರಿಗೂ ವೃದ್ಧಾಪ್ಯ ವೇತನ ಹೋಗುತ್ತಿತ್ತು. ಸಂಧ್ಯಾ ಸುರಕ್ಷಾಕ್ಕೆ ಬಿಪಿಎಲ್ ಕಾರ್ಡ್ದಾರರಾಗಿರಬೇಕು. ಪತಿ, ಪತ್ನಿಯ ಇಬ್ಬರ ವಾರ್ಷಿಕ ಆದಾಯ 20 ಸಾವಿರ ದಾಟಬಾರದು. 10 ಸಾವಿರ ಮೇಲ್ಪಟ್ಟು ಠೇವಣಿ ಇರಬಾರದು. ಗಂಡು ಮಕ್ಕಳಿದ್ದರೂ ಪಾಲಕರನ್ನು ನೋಡಿಕೊಳ್ಳುತ್ತಿರಬಾರದು ಎಂಬ ನಿಯಮಗಳಿವೆ. ಆದರೆ, ಅದನ್ನು ಮೀರಿ ಸರ್ಕಾರಿ ನೌಕರರ ಪಾಲಕರು, ಆದಾಯ ತೆರಿಗೆ ಪಾವತಿದಾರರ ಪಾಲಕರು ವೃದ್ಧಾಪ್ಯ ವೇತನ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ಅಽಕಾರಿಗಳು ತಿಳಿಸಿದ್ದಾರೆ.
ಜಿಲ್ಲಾವಾರು ಸ್ಥಗಿತವಾದ ಪಿಂಚಣಿಗಳು
ಜಿಲ್ಲೆ ಸ್ಥಗಿತವಾದ ಪಿಂಚಣಿಗಳು
- ಬಾಗಲಕೋಟೆ 24313
- ಬಳ್ಳಾರಿ 24292
- ಕೋಲಾರ 90995
- ದಾವಣಗೆರೆ 95293
- ಗದಗ 13536
- ಶಿವಮೊಗ್ಗ 49622
- ವಿಜಯಪುರ 84153
- ಚಿತ್ರದುರ್ಗ 57466
- ಹಾವೇರಿ 41955
- ವಿಜಯನಗರ 31305
- ಧಾರವಾಡ 42925
- ಕೊಪ್ಪಳ 39887
- ಉತ್ತರ ಕನ್ನಡ 21488
- ರಾಯಚೂರು 90143
- ಕೊಡಗು 13636
- ಮಂಡ್ಯ 57808
- ದಕ್ಷಿಣ ಕನ್ನಡ 43350
- ಮೈಸೂರು 105679
- ಚಿಕ್ಕಬಳ್ಳಾಪುರ 25480
- ಉಡುಪಿ 15086
- ಬೆಂಗಳೂರು ಗ್ರಾಮೀಣ 22564
- ತುಮಕೂರು 57552
- ಬೆಳಗಾವಿ 131833
- ಬೆಂಗಳೂರು ದಕ್ಷಿಣ 33501
- ಚಿಕ್ಕಮಗಳೂರು 51757
- ಹಾಸನ 42281
- ಕಲಬುರಗಿ 82375
- ಯಾದಗಿರಿ 44299
- ಚಾಮರಾಜನರಗ 28871
- ಬೀದರ್ 59701
- ಬೆಂಗಳೂರು ನಗರ 52765