ಸಾಂದರ್ಭಿಕ ಚಿತ್ರ  vehicle
ಉತ್ತರ ಕನ್ನಡ

ಅಪ್ರಾಪ್ತರಿಂದ ವಾಹನ ಚಾಲನೆ 13.09 ಲಕ್ಷ ದಂಡ ವಸೂಲಿ

ಕಾರವಾರ: ಅಪ್ರಾಪ್ತರು ವಾಹನ ಓಡಿಸುವುದನ್ನು ತಡೆಯಲು ಜಿಲ್ಲಾ ಪೊಲೀಸ್ ಇಲಾಖೆ ಅಭಿಯಾನ ನಡೆಸಿದೆ. ಕಳೆದ 9 ತಿಂಗಳುಗಳಲ್ಲಿ ಪೊಲೀಸರು ಅಪ್ರಾಪ್ತರು ವಾಹನ ಚಲಾಯಿಸಿದಕ್ಕಾಗಿ 131 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಅಪ್ರಾಪ್ತರು ಬೈಕ್, ಕಾರುಗಳನ್ನು ಚಲಾಯಿಸಿ ಉಂಟಾಗುತ್ತಿರುವ ಅಪಘಾತಗಳನ್ನು ತಡೆಯಲು ಪೊಲೀಸ್ ಇಲಾಖೆ ಅಭಿಯಾನ ನಡೆಸಿತ್ತು. ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ರಮ ವಹಿಸಿತ್ತು. ಅದಕ್ಕಾಗಿ ದುಬಾರಿ ದಂಡವನ್ನು ಆಕರಿಸಿದ್ದು, 131 ಪ್ರಕರಣಗಳಲ್ಲಿ ಒಟ್ಟು 13.09 ಲಕ್ಷ ರೂ. ದಂಡವನ್ನು ಆಕರಿಸಲಾಗಿದೆ.

ಭಟ್ಕಳ ಶಹರ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಒಟ್ಟು 45 ಪ್ರಕರಣಗಳನ್ನು ದಾಖಲಿಸಿ, 5.38 ಲಕ್ಷ ದಂಡ ಆಕರಿಸಲಾಗಿದೆ ಎಂದು ಎಸ್‌ಪಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಪೋಶಕರು ಯಾವುದೇ ಕಾರಣಕ್ಕೂ ಅಪ್ರಾಪ್ತರಿಗೆ ಯಾವುದೇ ವಾಹನ ಚಾಲನೆಗೆ ಅವಕಾಶ ನೀಡಬಾರದು. ಅದು ಗಂಭೀರ ಅಪಾಯವನ್ನು ಉಂಟು ಮಾಡುತ್ತದೆ ಎಂದು ಎಸ್‌ಪಿ ಕಚೇರಿಯ ಪ್ರಕಟಣೆ ತಿಳಿಸಿದೆ.