ಜಿಲ್ಲೆ

ಅರಬ್ಬಿ ಸಮುದ್ರದಲ್ಲಿ ಎದ್ದ ಬಿರುಗಾಳಿಗೆ ಹೊನ್ನಾವರದಲ್ಲಿ ಬೋಟ್ ಮುಳುಗಡೆ!

ಕಾರವಾರ: ಅರಬ್ಬಿ ಸಮುದ್ರದಲ್ಲಿ ಬುಧವಾರ ಎದ್ದ ಬಿರುಗಾಳಿಗೆ ಹೊನ್ನಾವರದಲ್ಲಿ ಬೋಟ್ ಒಂದು ಮುಳುಗಡೆಯಾಗಿದೆ.

ಶರಾವತಿಯ ಅಳವೆಯಲ್ಲಿ ಬೆಳಗ್ಗೆ ಘಟನೆ ನಡೆದಿದ್ದು, ಬೊಟ್ ನಲ್ಲಿದ್ದವರು ಈಜಿ ಪಾರಾಗಿದ್ದಾರೆ.

ಫೆಲಿಕ್ಸ ಲೋಪಿಸ್ ಅವರ ಸೇಂಟ್ ಆಂಟನಿ ಎಂಬ ಬೋಟ್ ಮುಳುಗಿದೆ. ಅದರಲ್ಲಿ 22 ಮೀನುಗಾರರಿದ್ದರು‌.

ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಹಾಗೂ ಅಬ್ಬರದ ಅಲೆಗಳ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.