ಕಾರವಾರ: ಬಹು ನಿರೀಕ್ಷೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಮಂಗಳವಾರ ರಾತ್ರಿ ಬಿಡುಗಡೆಯಾಗಿದೆ. ಕೆಲ ದಿನಗಳಿಂದ ಹಬ್ಬಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಉತ್ತರ ಕನ್ನಡದ ಎಲ್ಲ ಆರೂ ಕ್ಷೇತ್ರಗಳಲ್ಲಿ ಹಳೆಯ ಕಲಿಗಳಿಗೇ ಟಿಕೆಟ್ ನೀಡಲಾಗಿದೆ.
ಶಿರಸಿಯಿಂದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಯಲ್ಲಾಪುರದಿಂದ ಸಚಿವ ಶಿವರಾಮ ಹೆಬ್ಬಾರ, ಕಾರವಾರದಿಂದ ರೂಪಾಲಿ ನಾಯ್ಕ, ಕುಮಟಾದಿಂದ ದಿನಕರ ಶೆಟ್ಟಿ, ಭಟ್ಕಳದಿಂದ ಸುನೀಲ ನಾಯ್ಕ ಹಾಗೂ ಹಳಿಯಾಳದಿಂದ ಸುನೀಲ ಹೆಗಡೆ ಮುಂಬರುವ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳಾಗಲಿದ್ದಾರೆ.
ಸುನೀಲ ಹೆಗಡೆ ಅವರನ್ನು ಬಿಟ್ಟರೆ ಉಳಿದೆಲ್ಲರೂ ಹಾಲಿ ಶಾಸಕರಾಗಿದ್ದಾರೆ. ಶಿವರಾಮ ಹೆಬ್ಬಾರ ಅವರನ್ನು ಬಿಟ್ಟರೆ ಉಳಿದೆಲ್ಲರೂ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು ಎಂಬುದು ವಿಶೇಷ. ಕಾಗೇರಿ ಅವರನ್ನು ಬಿಟ್ಟರೆ ಉಳಿದೆಲ್ಲರಿಗೂ ಬಿಜೆಪಿ ಸತತ ಎರಡನೇ ಬಾರಿಗೆ ಟಿಕೆಟ್ ನೀಡಿದೆ.
ಊಹಾಪೋಹಗಳು: ಹಿರಿಯರನ್ನು ಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಾಗುವುದು. ಕರಾವಳಿಯ ಕೆಲವು ಹಾಲಿ ಎಂಎಲ್‌ಎಗಳಿಗೆ ಟಿಕೆಟ್ ತಪ್ಪಲಿದೆ ಎಂಬೆಲ್ಲ ಸುದ್ದಿಗಳು ಈ ಹಿಂದೆಯೂ ಇದ್ದವು. ಕಳೆದ ಎರಡು ದಿನಗಳಿಂದ ಈ ವಿಷಯ ಭಾರಿ ಚರ್ಚೆಯಲ್ಲಿತ್ತು.
ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿತ್ತು. ಇದರಿಂದ ಜಿಲ್ಲೆಯ ಹಾಲಿ ಬಿಜೆಪಿ ಎಂಎಲ್‌ಎಗಳೂ ತಲ್ಲಣಗೊಂಡಿದ್ದರು. ಆಕಾಂಕ್ಷಿಗಳು ಚಟುವಟಿಕೆ ಚುರುಕು ಮಾಡಿದ್ದರು.
ಆದರೆ, ಅಂಥ ಯಾವುದೇ ಬದಲಾವಣೆಯಾಗಿಲ್ಲ. ಒಳಗೊಳಗೇ ಸಾಕಷ್ಟು ಅಪಸ್ವರವಿದ್ದರೂ ಬಹಿರಂಗವಾಗಿ ಬಂಡಾಯವೇಳುವಂಥ ಯಾವುದೇ ಲಕ್ಷಣವೂ ಇಲ್ಲ.
ವಿಶ್ವೇಶ್ವರ ಹೆಗಡೆ ಕಾಗೇರಿ ಅಂಕೋಲಾ-ಶಿರಸಿ ವಿಧಾನಸಭಾ ಕ್ಷೇತ್ರದಿಂದ 1994ರಿಂದ ಸತತ ಮೂರು ಬಾರಿಗೆ ಹಾಗೂ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ 2008ರಿಂದ ಸತತ ಮೂರು ಬಾರಿ ಸೇರಿ ಒಟ್ಟು 6 ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದಾರೆ. ಈಗ ಏಳನೇ ಬಾರಿಗೆ ಅವರಿಗೆ ಟಿಕೆಟ್ ದೊರಕಿದೆ.
ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ 2008ರಲ್ಲಿ ರಚನೆಯಾದ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದರು.
2013 ಹಾಗೂ 2018ರಲ್ಲಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು. 2019ರಲ್ಲಿ ಆಪರೇಷನ್ ಕಮಲದಡಿ ಬಿಜೆಪಿ ಸೇರಿ, ಬಿಜೆಪಿ ಅಭ್ಯರ್ಥಿಯಾಗಿ ಉಪ ಚುನಾವಣೆ ಗೆದ್ದಿದ್ದರು. ಅವರಿಗೆ ಬಿಜೆಪಿ ಎರಡನೇ ಬಾರಿಗೆ ಟಿಕೆಟ್ ನೀಡಿದೆ.
1994ರಿಂದಲೂ ಕುಮಟಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ದಿನಕರ ಶೆಟ್ಟಿ ಅವರು 2008ರಲ್ಲಿ ಅದೇ ಪಕ್ಷದಿಂದ ಶಾಸಕರೂ ಆದರು.
ಆದರೆ, 2013ರಲ್ಲಿ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರ ಬಿಜೆಪಿ ಸೇರಿ 2018ರಲ್ಲಿ ಶಾಸಕರಾದರು. ಎರಡನೇ ಬಾರಿಗೆ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ.
ಮೊದಲು ಗ್ರಾಪಂ, ತಾಪಂಗಳಲ್ಲಿ ಕಾರ್ಯನಿರ್ವಹಿಸಿದ್ದ ರೂಪಾಲಿ ನಾಯ್ಕ 2018ರಲ್ಲಿ ಮೊದಲ ಬಾರಿ ಬಿಜೆಪಿ ಟಿಕೆಟ್ ಪಡೆದು, ಶಾಸಕರೂ ಆದರು. ಈಗ ಅವರಿಗೆ ಎರಡನೇ ಬಾರಿಗೆ ಟಿಕೆಟ್ ದೊರಕಿದೆ.
ಬ್ಯಾಂಕ್‌ಗಳ ನಿರ್ದೇಶಕರಾಗಿ, ಸ್ಪೋಟ್ಸ್ ರ್ ಕ್ಲಬ್‌ಗಳ ಅಧ್ಯಕ್ಷರಾಗಿದ್ದ ಭಟ್ಕಳದ ಸುನೀಲ ನಾಯ್ಕ 2018ರಲ್ಲಿ ಬಿಜೆಪಿ ಟಿಕೆಟ್ ಪಡೆದು ಶಾಸಕರಾದರು. ಈಗ ಎರಡನೇ ಬಾರಿ ಬಿಜೆಪಿ ಟಿಕೆಟ್ ಪಡೆದಿದ್ದಾರೆ.
ಹಳಿಯಾಳದಲ್ಲಿ ಸುನೀಲ ಹೆಗಡೆ 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು. 2013ರಲ್ಲಿ ಮತ್ತೆ ಅದೇ ಪಕ್ಷದಿಂದ ಸ್ಪರ್ಧಿಸಿ ಸೋಲುಂಡ ಬಳಿಕ ಬಿಜೆಪಿ ಸೇರಿದ್ದರು. 2018ರಲ್ಲಿ ಬಿಜೆಪಿ ಟಿಕೆಟ್ ಪಡೆದು ಮತ್ತೆ ಸೋಲು ಕಂಡರು. ಈಗ ಎರಡನೇ ಬಾರಿಗೆ ಬಿಜೆಪಿ ಅವರಿಗೆ ಅವಕಾಶ ನೀಡಿದೆ. ಇದುವರೆಗೂ ಬಿಜೆಪಿ ಗೆಲ್ಲದ ಈ ಕ್ಷೇತ್ರದಲ್ಲಿ ಕಮಲ ಅರಳಿಸುವ ದೊಡ್ಡ ಸವಾಲು ಹೆಗಡೆ ಮೇಲಿದೆ.
ಕುಮಟಾ ಹೊರತುಪಡಿಸಿ ಉಳಿದೆಲ್ಲ ಕಡೆ ಕಾಂಗ್ರೆಸ್ ಟಿಕೆಟ್ ೋಷಣೆಯಾಗಿದೆ.
ಹಳಿಯಾಳ, ಕುಮಟಾ ಹಾಗೂ ಶಿರಸಿ ಕ್ಷೇತ್ರಗಳಲ್ಲಿ ಜೆಡಿಎಸ್ ಟಿಕೆಟ್ ಕೂಡ ಅಂತಿಮಗೊಂಡಿದೆ. ಭಟ್ಕಳದಲ್ಲಿ ಶೀಘ್ರ ೋಷಣೆಯಾಗುವ ಸಾಧ್ಯತೆ ಇದೆ.
ಈಗ ಬಿಜೆಪಿ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳ ೋಷಣೆ ಮಾಡಿದ್ದರಿಂದ ಕಣದ ಚಿತ್ರಣ ಲಭ್ಯವಾಗಿದೆ.
ಹಳಿಯಾಳ, ಶಿರಸಿ, ಕುಮಟಾದಲ್ಲಿ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಕಾರವಾರದಲ್ಲಿ ತ್ರಿಕೋನ ಸ್ಪರ್ಧೆಯಿದ್ದರೂ ಇಲ್ಲಿ ಜೆಡಿಎಸ್ ಅಭ್ಯರ್ಥಿಯಿಲ್ಲ. ಭಟ್ಕಳದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ.