ಜಿಲ್ಲೆ

ಉತ್ತರಪ್ರದೇಶ ಮಾದರಿಯಂತೆ ಡಿಜೆ ಹಳ್ಳಿ ಘಟನೆಗೆ ಕಾರಣರಾದವರ ಆಸ್ತಿ ಮುಟ್ಟುಗೋಲಿಗೆ ಚಿಂತನೆ ನಡೆದಿದೆ; ಡಿಸಿಎಂ ಲಕ್ಷ್ಮಣ ಸವದಿ

ರಾಯಚೂರು: ಬೆಂಗಳೂರಿನ ಕೆ.ಜೆ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಪೂರ್ವಯೋಜಿತ. ರಾಜಕೀಯ ಲಾಭಕ್ಕಾಗಿ ನಡೆದ ಘಟನೆಯಿದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆಯಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಲಿದೆ. ಉತ್ತರಪ್ರದೇಶ ಮಾದರಿಯಂತೆ ಘಟನೆಗೆ ಕಾರಣರಾದವರ ಆಸ್ತಿ ಮುಟ್ಟುಗೋಲಿಗೆ ಚಿಂತನೆ ನಡೆದಿದೆ. ನವೀನ್‌ಗೂ ಬಿಜೆಪಿಗೂ ಸಂಬಂಧವಿಲ್ಲ. ಆತ ಕಟ್ಟಾ ಕಾಂಗ್ರೆಸ್ ಬೆಂಬಲಿಗ. ಇವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರ ಮಾವನವರ ಕುರಿತಾದ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ನವರೂ ಏನೇ ಹೇಳಿದರೂ ಆತ ಕಾಂಗ್ರೆಸ್ ಕಾರ್ಯಕರ್ತ ಎನ್ನುವುದು ಜಗಜ್ಜಾಹೀರು. ಶಾಂತಿ, ಸುವ್ಯವಸ್ಥೆಗೆ ಗೃಹ ಸಚಿವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸವದಿ ಹೇಳಿದರು.