ಸಿದ್ದಾಪುರ: ಸರ್ಕಾರಿ ಉತ್ಸವದ ಬದಲಾಗಿ ಜನರೆಲ್ಲ ಸೇರಿ ಆಯೋಜಿಸುವ ಉತ್ಸವಗಳು ಪರಸ್ಪರ ಪ್ರೀತಿ, ವಿಶ್ವಾಸಗಳನ್ನು ವೃದ್ಧಿಗೊಳ್ಳಲು ಸಹಾಯಕವಾಗುತ್ತದೆ. ಉತ್ಸವವನ್ನು ಪಕ್ಷ, ಜಾತಿ, ಭೇದ ಮೀರಿ ಸಂಘಟಿಸಿರುವುದು ಶ್ಲಾಘನೀಯವಾದದ್ದು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಪಟ್ಟಣದ ನೆಹರೂ ಮೈದಾನದಲ್ಲಿ ಎರಡು ದಿನಗಳ ಕಾಲ ಜರುಗಿದ ಸಿದ್ದಾಪುರ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳ ಸಾಧಕರನ್ನು ಗೌರವಿಸಲು, ಇಲ್ಲಿನ ಪ್ರತಿಭೆಗಳಿಗೆ ಅವಕಾಶ ಒದಗಿಸಲು ಸಾಧ್ಯವಾಗುತ್ತದೆ ಎಂದರು.
ಡಾ. ಕೆ. ಶ್ರೀಧರ ವೈದ್ಯ ಮಾತನಾಡಿ ಅರ್ಹತೆ, ಅವಕಾಶ, ಅದೃಷ್ಟ ಈ ಮೂರೂ ಸಾಧನೆಗೆ ಅಗತ್ಯ. ಈ ಉತ್ಸವದಲ್ಲಿ ಸಾಧನೆಗೆ ಗೌರವ, ಕಲಾವಿದರಿಗೆ, ಕ್ರೀಡಾಪಟುಗಳಿಗೆ ಅವಕಾಶ ದೊರಕಿದೆ ಎಂದರು. ಉತ್ಸವ ಸಮಿತಿ ಗೌರವಾದ್ಯಕ್ಷ ಉಪೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಡಾ.ಶಶಿಭೂಷಣ ಹೆಗಡೆ, ಕಾರ್ಯಾಧ್ಯಕ್ಷರಾದ ಸತೀಶ ಹೆಗಡೆ ಬೈಲಳ್ಳಿ, ವಿಜಯ ಪ್ರಭು, ಉಪಾಧ್ಯಕ್ಷರಾದ ನಾಗರಾಜ ನಾಯ್ಕ ಬೇಡ್ಕಣಿ, ಅನಿಲ ದೇವನಳ್ಳಿ, ವಿಜಯ ನಾರಾಯಣ ಹೆಗಡೆ ಸೇರಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿನಾಯಕ ಭಟ್ಟ ಮತ್ತಿಹಳ್ಳಿ (ಧಾರ್ವಿುಕ), ತಹಸೀಲ್ದಾರ್ ಎಂ.ಆರ್. ಕುಲಕರ್ಣಿ (ಆಡಳಿತ), ಆನಂದ ಐ. ನಾಯ್ಕ (ಸಹಕಾರ), ಜಿ.ಎಸ್. ಹೆಗಡೆ ಬೆಳ್ಳೆಡಿಕೆ (ವಕೀಲ), ನಾಗೇಂದ್ರ ಭಟ್(ಸಮಾಜಸೇವೆ), ಮಂಜುನಾಥ ಭಟ್ಟ(ಶಿಕ್ಷಣ), ಡಾ. ಚಂದ್ರಶೇಖರ ಪಂಡಿತ್( ವೈದ್ಯಕೀಯ), ಅರುಣ ಗೌಡರ್ ಬಂದೀಸರ(ನಾಟಿ ವೈದ್ಯ), ಗಂಗಾಧರ ಕೊಳಗಿ (ಮಾಧ್ಯಮ), ಕೇಶವ ಹೆಗಡೆ ಕೊಳಗಿ (ಯಕ್ಷಗಾನ), ಸದಾಶಿವ ಬಿ. ನಾಯ್ಕ (ಕೈಗಾರಿಕೆ), ಸುಮನಾ ಹೆಗಡೆ ಹೆಗ್ಗರಣಿ( ಕೃಷಿ), ಶಾರದಾ ಪಿ. ವಾಲ್ಮೀಕಿ(ತೋಟಗಾರಿಕೆ), ರಮೇಶ ನಾಯ್ಕ ಹುಸೂರು (ಹೈನುಗಾರಿಕೆ), ಗುರುರಾಜ ನಾಯ್ಕ (ಕ್ರೀಡೆ), ಅಣ್ಣಪ್ಪ ನಾಯ್ಕ (ಉತ್ತಮ ರ್ದಜಿ), ಸೋಮಶೇಖರ ಹೊನ್ನೆಗುಂಡಿ(ಲಾಂಡ್ರಿ), ಅನಂತ ಕಾಮತ್(ವ್ಯಾಪಾರ), ಪ್ರಶಾಂತ ಶೇಟ್(ರಜತ, ಸ್ವರ್ಣ ಶಿಲ್ಪ), ಚಂದ್ರು ಭಂಡಾರಿ (ಸವಿತಾ ಸಮಾಜ), ಗಣೇಶ ಆಚಾರಿ( ವಿಶ್ವಕರ್ಮ), ಕೇಶವ ಅಂಬಿಗ(ಹಮಾಲಿ), ಗಿರಿಧರ ಗೌಡ (ಕೊನೆ ಕೊಯ್ಲು), ವಾಸುದೇವ ಕೊಂಡ್ಲಿ (ರಿಕ್ಷಾ ಚಾಲನೆ), ಸಾವಿತ್ರಿ ಅವಧಾನಿ(ಯೋಗ), ಪರಮೇಶ್ವರ ಕಾನಳ್ಳಿ (ಜಾನಪದ), ಮಾಧವ ಎಂ. ನಾಯ್ಕ (ದೈಹಿಕ ಶಿಕ್ಷಣ), ಸುದರ್ಶನ ಪಿಳ್ಳೆ( ಉತ್ತಮ ಗುತ್ತಿಗೆದಾರ) ರಜತ್ ಹೆಗಡೆ(ಕಲೆ) ಅವರನ್ನು ಸನ್ಮಾನಿಸಲಾಯಿತು. ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ ಗೌಡರ್ ಹಾಗೂ ಸುಧಾರಾಣಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.