ಜಿಲ್ಲೆ

ಯುಟಿಎಸ್​ ಮೊಬೈಲ್​ ಆ್ಯಪ್​ ರ್ನಿಬಂಧ ಸಡಿಲಿಕೆ; ಅಡೆತಡೆ ಸರಿಪಡಿಸಿದ ಭಾರತೀಯ ರೈಲ್ವೆ

Bengaluru - General - Rama Kishan K V

ಬೆಂಗಳೂರು: ಯುಟಿಎಸ್​ ಮೊಬೈಲ್​ ಆ್ಯಪ್​ ಮೂಲಕ ಇ-ಟಿಕೆಟ್​ಗಳನ್ನು ಖರೀದಿಸುವಲ್ಲಿ ಎದುರಾಗುತ್ತಿದ್ದ ಅಡೆತಡೆಗಳನ್ನು ಭಾರತೀಯ ರೈಲ್ವೆ ಸರಿಪಡಿಸಿದ್ದು, ಈಗ ಇ-ಟಿಕೆಟ್​ ಖರೀದಿ ಪ್ರಕ್ರಿಯೆ ಸುಗಮವಾಗಿದೆ ಎಂದು ತಿಳಿಸಿದೆ.

ಹೊಸ ವ್ಯವಸ್ಥೆಯಿಂದ ಕಾಗದರಹಿತ ಕಾಯ್ದಿರಿಸದ ಪ್ರಯಾಣ, ಫ್ಲ್ಯಾಟ್​ಫಾರ್ಮ್​ ಅಥವಾ ಸೀಸನ್​ ಟಿಕೆಟ್​ಗಳನ್ನು ರೈಲ್ವೆ ನಿಲ್ದಾಣದಿಂದ ಐದು ಮೀಟರ್​ಗಿಂತ ಹೆಚ್ಚಿನ ದೂರದಿಂದ ಉಪನಗರ ಮತ್ತು ಉಪನಗರವಲ್ಲದ ನಿಲ್ದಾಣಗಳಿಗೆ ಖರೀದಿಸಬಹುದು.

ಪರಿಷ್ಕೃತ ನಿಯಮಗಳ ಪ್ರಕಾರ, ಟಿಕೆಟ್​ ಖರೀದಿಸಿದ ಒಂದು ಗಂಟೆಯೊಳಗೆ ಪ್ರಯಾಣ ಪ್ರಾರಂಭಿಸಬೇಕು. ಯುಟಿಎಸ್​ ಮೊಬೈಲ್​ ಆ್ಯಪ್​ ಬಳಕೆದಾರರಿಗೆ ಶೇ.3 ರಿಯಾಯಿತಿ ನೀಡುತ್ತಿದ್ದು, ವ್ಯಾಲೆಟ್​ ಮೂಲಕ ಖರೀದಿಸಿದ ಟಿಕೆಟ್​ಗಳು ಟಿಕೆಟ್​ ಮೌಲ್ಯದ ಮೇಲೆ ಶೇ.3 ರಿಯಾಯಿತಿ ಇರಲಿದೆ.