ಅಳವಂಡಿ ಸಮೀಪದ ಕಾತರಕಿ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಿರೇಸಿಂದೋಗಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ರಾಬಕೊವಿ ನಿರ್ದೇಶಕ ವೆಂಕನಗೌಡ್ರ ಹಿರೇಗೌಡ್ರ ಚಾಲನೆ ನೀಡಿದರು. ಸಿಆರ್‌ಪಿ ದೇವರಡ್ಡಿ ಕಲ್ಗುಡಿ, ಮುಖ್ಯಶಿಕ್ಷಕ ರಾಮಣ್ಣ ರಕರಡ್ಡಿ, ಗ್ರಾಪಂ ಅಧ್ಯಕ್ಷೆ ಶಿವಮ್ಮ ಭೈರಣ್ಣವರ, ಉಪಾಧ್ಯಕ್ಷ ವಿರೂಪಾಕ್ಷಗೌಡ್ರ ಪೊಲೀಸ್ ಪಾಟೀಲ್, ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದರಡ್ಡಿ ಮೇಟಿ, ಉಪಾಧ್ಯಕ್ಷ ಪಕೀರಮ್ಮ ತಳವಾರ ಇತರರಿದ್ದರು. 
ಜಿಲ್ಲೆ

ಕಲಿಕಾಮಟ್ಟ ಸುಧಾರಣೆಗೆ ಉಪಯುಕ್ತ

ಗಾಯತ್ರಿ ಮಾಲಿಪಾಟೀಲ್

ಅಳವಂಡಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಂದೆ ತರಲು ಆಯೋಜಿಸಿರುವ ಕಲಿಕಾ ಹಬ್ಬ ಉಪಯುಕ್ತವಾಗಿದೆ ಎಂದು ರಾಬಕೊವಿ ನಿರ್ದೇಶಕ ವೆಂಕನಗೌಡ್ರ ಹಿರೇಗೌಡ್ರ ಹೇಳಿದರು.

ಸಮೀಪದ ಕಾತರಕಿ ಸಹಿಪ್ರಾ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಿರೇಸಿಂದೋಗಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಈ ಕಾರ್ಯಕ್ರಮ ಮಕ್ಕಳ ಕಲಿಕಾ ಮಟ್ಟವನ್ನು ಉತ್ತಮ ಪಡಿಸುತ್ತದೆ ಎಂದರು.

ಬಿಆರ್‌ಪಿ ಹನುಮರೆಡ್ಡಿ ಮಾತನಾಡಿ, ಮಕ್ಕಳು ನಿರಂತರ ಅಧ್ಯಾಯನ ಮಾಡಬೇಕು. ಸರ್ಕಾರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಂದೆ ತರಲು ಈ ಕಾರ್ಯಕ್ರಮ ಜಾರಿಗೊಳಿಸಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಿಆರ್‌ಪಿ ದೇವರಡ್ಡಿ ಕಲ್ಗುಡಿ, ಮುಖ್ಯಶಿಕ್ಷಕ ರಾಮಣ್ಣ ರಕರಡ್ಡಿ, ಗ್ರಾಪಂ ಅಧ್ಯಕ್ಷೆ ಶಿವಮ್ಮ ಭೈರಣ್ಣವರ, ಉಪಾಧ್ಯಕ್ಷ ವಿರೂಪಾಕ್ಷಗೌಡ್ರ ಪೊಲೀಸ್ ಪಾಟೀಲ್, ಎಸ್‌ಡಿಎಂ ಸಿ ಅಧ್ಯಕ್ಷ ಗೋವಿಂದರಡ್ಡಿ ಮೇಟಿ, ಉಪಾಧ್ಯಕ್ಷ ಪಕೀರಮ್ಮ ತಳವಾರ, ಪ್ರಮುಖರಾದ ಯರಿಯಪ್ಪಗೌಡ ಹಿರೇಗೌಡ್ರ, ನಾಗರಾಜ ಹುರಕಡ್ಲಿ, ಸುರೇಶ ಅರಕೇರಿ, ಮಲ್ಲಪ್ಪ ಗುಡದಣ್ಣವರ, ಸುಮತಿ, ಸುರೇಶ ತೋಟದ, ದೇವೇಂದ್ರಪ್ಪ ಕುರಡಗಿ, ಪ್ರಶಾಂತ, ಗವಿಸಿದ್ದಪ್ಪ ಇತರರಿದ್ದರು.