ಜಾಲವಾದ ಗ್ರಾಮದ ಹೊಸನಗರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಸಂಸ್ಥೆಯ ಸಿಂದಗಿ ತಾಲೂಕು ಯೋಜನಾಧಿಕಾರಿ ಕೃಷ್ಣಮೂರ್ತಿ ಮಹಿಳಾ ಸಂಘದ ಸದಸ್ಯರಿಗೆ ನೀರಿನ ಸದ್ಬಳಕೆ ಕುರಿತು ಮಾಹಿತಿ ನೀಡಿದರು. ಬಾಬುರಾವ್ ಗೋಣಿ, ಶ್ರೀಗೌರಿ, ಗುರುಬಾಯಿ ಇತರರಿದ್ದರು. 
ಜಿಲ್ಲೆ

ಜೀವಜಲವನ್ನು ಮಿತವಾಗಿ ಬಳಸಿ

Vijayapura - Desk - Gurappa Lokuri

ದೇವರಹಿಪ್ಪರಗಿ: ನೀರು ಜೀವಜಲ, ಇದು ಅತ್ಯಮೂಲ್ಯ. ನೀರನ್ನು ಮಿತವಾಗಿ ಬಳಸುವ ಮೂಲಕ ಜಲ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥ ಸಂಸ್ಥೆಯ ಸಿಂದಗಿ ತಾಲೂಕು ಯೋಜನಾಧಿಕಾರಿ ಕೃಷ್ಣಮೂರ್ತಿ ಹೇಳಿದರು.

ತಾಲೂಕಿನ ಜಾಲವಾದ ಗ್ರಾಮದ ಹೊಸನಗರದಲ್ಲಿ ಬುಧವಾರ ಮಹಿಳಾ ಸಂಘದ ಸದಸ್ಯರಿಗೆ ನೀರು ಉಳಿಸಿ ಕಾರ್ಯಕ್ರಮದ ಮೂಲಕ ನೀರಿನ ಮಹತ್ವ, ನೀರಿನ ಮಿತವ್ಯಯ, ಅನಗತ್ಯ ನೀರು ಪೋಲಾಗದಂತೆ ತಡೆಯುವ ಕ್ರಮಗಳು, ಮಕ್ಕಳಲ್ಲಿ ನೀರಿನ ಕುರಿತು ಅರಿವು, ಜಾಗೃತಿ ಮೂಡಿಸುವ ಬಗ್ಗೆ ತಿಳಿ ಹೇಳಿದರು.

ಜಾಲವಾದ ವಲಯದ ಹೊಸನಗರ(ಬಮ್ಮನಜೋಗಿ) ಕಾರ್ಯಕ್ಷೇತ್ರದಲ್ಲಿ ಯುಗಾದಿ ಹಾಗೂ ಈದ್-ಉಲ್-ಫಿತ್ರ ಹಬ್ಬಗಳ ನಿಮಿತ್ತ ಹೊಸದಾಗಿ ರಚನೆಯಾದ ವಿಜಯಲಕ್ಷ್ಮಿ ಸ್ವಸಹಾಯ ಸಂಘ ಉದ್ಘಾಟಿಸಿ, ನಂತರ ಸಂಘದ ಸದಸ್ಯರಿಗೆ ಯೋಜನೆಯ ಕಾರ್ಯಕ್ರಮಗಳ ಮಾಹಿತಿ, ನಿರ್ಣಯ ಪಟ್ಟಿ ವಿತರಿಸಲಾಯಿತು.

ವಲಯ ಮೇಲ್ವಿಚಾರಕ ಬಾಬುರಾವ್ ಗೋಣಿ, ಸೇವಾಪ್ರತಿನಿಧಿಗಳಾದ ಶ್ರೀಗೌರಿ, ಗುರುಬಾಯಿ, ಸಂಘದ ಸದಸ್ಯರು ಹಾಗೂ ಮಕ್ಕಳು ಇದ್ದರು.