ಮದ್ದೂರು: ಹಿಪ್ಪುನೇರಳೆ ಬೆಳೆಗೆ ಶಿಫಾರಸು ಮಾಎಇದ ಕೀಟನಾಶಕಗಳನ್ನು ಮಾತ್ರ ಬಳಸಿ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಸುಂದರರಾಜ್ ಹೇಳಿದರು.
ಹಿಪ್ಪುನೇರಳೆ ತೋಟಗಳ ನಿರ್ವಹಣೆ ಮತ್ತು ಪಾಲನೆ ಹಾಗೂ ಶಿಫಾರಸು ಮಾಡಿದ ಕೀಟನಾಶಕಗಳ ಬಳಕೆಗೆ ಲಭ್ಯವಿರುವ ರೇಷ್ಮೆ ಕೃಷಿ ತಂತ್ರಜ್ಞಾನಗಳ ಪ್ರಾಮುಖ್ಯತೆ ಎಂಬ ವಿಷಯ ಕುರಿತು ರೇಷ್ಮೆ ಕೃಷಿ ಇಲಾಖೆ, ಕೆ.ಆರ್. ಪೇಟೆಯ ರೇಷ್ಮೆ ತರಬೇತಿ ಕೇಂದ್ರ ವತಿಯಿಂದ ಗುರುವಾರ ತಾಂತ್ರಿಕ ಸೇವಾ ಕೇಂದ್ರದಡಿಯಲ್ಲಿ ತಾಲೂಕಿನ ಕೀಳಘಟ್ಟ ಗ್ರಾಮದಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿಲ್ಕ್ ಸಮಗ್ರ -2 ದಲ್ಲಿ ಲಭ್ಯವಿರುವ ಯೋಜನೆಗಳು ಮತ್ತು ಪ್ರಯೋಜನಗಳನ್ನು ರೈತರು ಅರಿಯಬೇಕು ಎಂದರು.
ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎಚ್.ಸಿ.ಸುರೇಶ್, ಕೇಂದ್ರ ರೇಷ್ಮೆ ಮಂಡಳಿ-ಸಂಶೋಧನಾ ವಿಸ್ತರಣಾ ಕೇಂದ್ರ ಉಪ ಘಟಕದ ವಿಜ್ಞಾನಿ ಡಾ.ಶಿವಕುಮಾರ್, ಕೆ.ಆರ್.ಪೇಟೆಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಿ.ಸೋಮಣ್ಣ, ಮದ್ದೂರು ರೇಷ್ಮೆ ಕೃಷಿ ವಿಸ್ತರಣಾ ಅಧಿಕಾರಿ ಪ್ರಶಾಂತ್ ಕುಮಾರ್ ಮಾತನಾಡಿದರು.