ಜಮಖಂಡಿ ನಗರದ ರೋಟರಿ ಭವನದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಪ್ರಗತಿಪರ ರೈತರಿಗೆ ಕೃಷಿ ಸಾಧಕ ಪ್ರಶಸ್ತಿ ವಿತರಿಸಲಾಯಿತು. ಎಂ.ಕೆ. ನ್ಯಾಮಗೌಡ, ಕಿರಣಕುಮಾರ ದೇಸಾಯಿ, ಶಂಕರ ಪಟ್ಟಣಶೆಟ್ಟಿ, ಪ್ರಕಾಶ ಶಿಂದೆ, ಡಾ. ಜಿ.ಆಯ್ ಗುರುಮಠ, ಡಾ. ಆರ್.ವಿ ಮೆಟಗುಡ ಮತ್ತಿತರರಿದ್ದರು. 
ಜಿಲ್ಲೆ

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ: ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಂ.ಕೆ. ನ್ಯಾಮಗೌಡ ಹೇಳಿದರು.

ನಗರದ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಜಮಖಂಡಿ ಆಶ್ರಯದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆ ಹಾಗೂ ಕೃಷಿ ಸಾಧಕ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಸಾವಯವ ಕೃಷಿ ಮೈಗೂಡಿಸಿಕೊಳ್ಳಬೇಕು ಎಂದರು.

ರೋಟರಿ ಸಂಸ್ಥೆ ಪ್ರತಿವರ್ಷ ರೈತ ದಿನಾಚರಣೆಯಲ್ಲಿ 10 ಜನ ಪ್ರಗತಿಪರ ರೈತರಿಗೆ ಕೃಷಿ ಸಾಧಕ ಪ್ರಶಸ್ತಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಂಸ್ಥೆ ಅಧ್ಯಕ್ಷ ಕಿರಣಕುಮಾರ ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತನಿಗೆ ತನ್ನ ಜಮೀನು ಆಸ್ತಿಯಾದರೆ, ದೇಶಕ್ಕೆ ರೈತನೇ ಆಸ್ತಿ ಎಂದರು.

ಮರೆಗುದ್ದಿ ಗುರುಪಾದ ಶ್ರೀಗಳು, ಹುಲ್ಯಾಳದ ರುದ್ರಪ್ಪ ಜುಲಪಿ, ಧರೆಪ್ಪ ಕಿತ್ತೂರ, ಹಳಿಂಗಳಿ ಧನಪಾಲ ಯಲ್ಲಟ್ಟಿ, ಬಸವರಾಜ ಗಿರಗಾಂವಿ, ಸದಾಶಿವ ಬಂಗಿ, ಮಹಾದೇವ ಚೋಳಿ, ಮಲ್ಲಿನಾಥ ಪಡಸಲಗಿ, ಶೇಖರ ಮಾನೋಜಿ, ಶೇಖರ ಕೋಲೂರ ಅವರಿಗೆ ಕೃಷಿ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಖಜಾಂಚಿ ಶಂಕರ ಪಟ್ಟಣಶೆಟ್ಟಿ, ಜಂಟಿ ಕಾರ್ಯದರ್ಶಿ ಪ್ರಕಾಶ ಶಿಂದೆ, ಸದಸ್ಯ ಡಾ. ಜಿ.ಆಯ್ ಗುರುಮಠ, ಡಾ. ಆರ್.ವಿ ಮೆಟಗುಡ, ಗಂಗಾಧರ್ ಮಠಪತಿ, ರಾಜಶೇಖರ್ ಕೋವಳ್ಳಿ, ಡಾ. ಎ.ಆರ್ ದೇವರಡ್ಡಿ, ಮಹೇಶ ಪಾಟೀಲ, ಎಸ್.ವೈ ಬಿರಾದಾರ, ಜಿ.ಬಿ. ಕೌಜಲಗಿ, ಸಾಗರ ಆಲಗೂರ, ವಿಜಯ ಧರ್ಮದಾಸಾನಿ, ಜಿ.ವಿ. ಪ್ರಭು, ವಿವೇಕಾನಂದ ಮಹಾಬಲಶೆಟ್ಟಿ ಮತ್ತಿತರರಿದ್ದರು.ಪ್ರಕಾಶ ಗೌಡರ ನಿರೂಪಿಸಿದರು. ಕಾರ್ಯದರ್ಶಿ ಮಲ್ಲಪ್ಪ ಭುಜರುಕ ವಂದಿಸಿದರು.