ಎನ್.ಆರ್.ಪುರದ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದ ಸಮಾರೋಪವನ್ನು ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ಉದ್ಘಾಟಿಸಿದರು. ಶಾಂಭವಿ, ಎಚ್.ಎಸ್.ಪೂರ್ಣೇಶ್, ವಿ.ಆರ್.ನಟಶೇಖರ್, ಜಯಮ್ಮ, ತಮನ್ನಾ ಇದ್ದರು. 
ಜಿಲ್ಲೆ

ನ್ಯಾಯಾಲಯದಲ್ಲಿ ಕನ್ನಡ ಬಳಸಿ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ನ್ಯಾಯಾಲಯದಲ್ಲಿ ಕನ್ನಡ ಬಳಸುವುದರೊಂದಿಗೆ ಭಾಷೆ ಉಳಿಸುವುದರಲ್ಲಿ ನ್ಯಾಯಾಧೀಶರು, ವಕೀಲರು, ಕಕ್ಷಿದಾರರ ಪಾತ್ರ ಮಹತ್ವದ್ದಾಗಿದೆ ಎಂದು ಶೃಂಗೇರಿ ತಾಲೂಕು ಕಸಾಪ ಪೂರ್ವಾಧ್ಯಕ್ಷ ನಟಶೇಖರ್ ಹೇಳಿದರು.

ನ್ಯಾಯಾಲಯದಲ್ಲಿ ಶನಿವಾರ ತಾಲೂಕು ಕಸಾಪ ಹಾಗೂ ತಾಲೂಕು ವಕೀಲರ ಸಂಘದ ಆಶ್ರಯದಲ್ಲಿ ನಡೆದ ಶ್ರಾವಣ ಸಂಜೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ, ಕೆಳ ನ್ಯಾಯಾಲಯದಲ್ಲಿ ಕನ್ನಡ ಬಳಕೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಸುತ್ತೋಲೆ ಹೊರಡಿಸಿದರೂ ನ್ಯಾಯಾಲಯಗಳಲ್ಲಿ ಸಂಪೂರ್ಣವಾಗಿ ಕನ್ನಡ ಬಳಸುತ್ತಿಲ್ಲ. ಕೆಲವೊಂದು ಕಾನೂನಿನ ಪದಗಳಿಗೆ ಕನ್ನಡದಲ್ಲಿ ಪದಗಳೇ ಇಲ್ಲದಂತಾಗಿದೆ. ಇದ್ದರೂ ಕ್ಷಕಿದಾರರಿಗೆ, ಕೆಲವು ವಕೀಲರಿಗೆ ಅರ್ಥವಾಗುತ್ತಿಲ್ಲ. ಕನ್ನಡದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದರೆ ಅದು ಯಾವುದೇ ಕಾರಣಕ್ಕೂ ವಜಾ ಆಗುವುದಿಲ್ಲ ಎಂದು ತಿಳಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕಿ ಶಾಂಭವಿ ಮಾತನಾಡಿ, ಅಭಿಯೋಜನೆ ಇಲಾಖೆಯಿಂದ ಕನ್ನಡ ಬಳಸಬೇಕೆಂಬ ಸುತ್ತೋಲೆ ಬಂದಿದೆ. ಕನ್ನಡದಲ್ಲೇ ಪತ್ರ ವ್ಯವಹಾರಗಳು ನಡೆಯುತ್ತಿವೆ. ಕನ್ನಡ ನಮ್ಮ ಹೆಮ್ಮೆಯ ಭಾಷೆಯಾಗಿದ್ದು, ಎಲ್ಲರೂ ಕನ್ನಡ ಬಳಸುವುದರ ಮೂಲಕ ಉಳಿಸಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಮಾತನಾಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ವಿ.ಆರ್.ನಟಶೇಖರ್ ಅವರನ್ನು ಸನ್ಮಾನಿಸಲಾಯಿತು.
ಜೆಎಂಎ್ಸಿ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್, ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತೆ ಜಯಮ್ಮ, ಶಿಕ್ಷಕಿ ತಮನ್ನಾ, ನಂಜುಂಡಪ್ಪ, ಜೇಸಿ ಅಧ್ಯಕ್ಷ ಗಂಗಾಧರ್, ಜುಬೇದಾ, ರಾಜಕುಮಾರ್, ವಕೀಲರು, ಸಿಬ್ಬಂದಿ, ಕಸಾಪ ಸದಸ್ಯರು ಇದ್ದರು.