ಹುನಗುಂದ: ನಮಗೆ ಮಾತೃಭಾಷೆ ಮೇಲೆ ಹಿಡಿತವಿದ್ದರೆ ಬೇರೆ ಭಾಷೆಯನ್ನು ಸರಾಗವಾಗಿ ಕಲಿಯಬಹುದು ಎಂದು ವಿಎಂಎಸ್‌ಆರ್‌ವಿ ಕಾಲೇಜಿನ ಉಪನ್ಯಾಸಕ ಎಸ್. ಎಸ್. ಮುಡಪಲದಿನ್ನಿ ಹೇಳಿದರು.
ತಾಲೂಕಿನ ಕೂಡಲಸಂಗಮದ ಶ್ರೀ ಸಿದ್ಧಗಂಗಾ ಪಬ್ಲಿಕ್ ಶಾಲೆಯಲ್ಲಿ (ಸಿ.ಬಿ.ಎಸ್.ಈ) ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ ಹೆತ್ತ ತಾಯಿದ್ದಂತೆ, ಹೆತ್ತ ತಾಯಿಯನ್ನು ಯಾವತ್ತೂ ಕಡೆಗಣಿಸಬಾರದು. ಬರಿ ಕನ್ನಡ ಉಳಿಸಿ ಎಂದರೆ ಸಾಲದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಕನ್ನಡವನ್ನು ಹೆಚ್ಚಾಗಿ ಬಳಸಿದರೆ ಮಾತ್ರ ಕನ್ನಡ ಉಳಿಯುತ್ತೆ ಎಂದರು.
ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಕೆ.ಬಿ. ಮಾತನಾಡಿ, ಕನ್ನಡ ಭಾವನೆಯ ಭಾಷೆಯಾದರೆ, ಇಂಗ್ಲಿಷ್ ಅನ್ನದ ಭಾಷೆ, ಕನ್ನಡವನ್ನು ಪ್ರೀತಿಸಿ ಹಾಗೇಯೆ ಬೇರೆ ಭಾಷೆ ಗೌರವಿಸಬೇಕು ಎಂದು ಹೇಳಿದರು.
ಬಳಿಕ ವಿದ್ಯಾರ್ಥಿಗಳಿಂದ ಭಾಷಣ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮಲ್ಲಿಕಾರ್ಜುನ ಕರಡಿ, ಕನ್ನಡ ಭಾಷಾ ಶಿಕ್ಷಕ ಎಸ್. ಆರ್. ದಡ್ಡೇನವರ, ವೆಂಕಟೇಶ ಲೆಕ್ಕಿಹಾಳ, ಬಸವರಾಜ ವಾಲಿಕಾರ, ಚೇತನ ಯರಜೇರಿಮಠ, ಸಂಗಮೇಶ ಶಿರನಾಳ, ವಿಜಯಲಕ್ಷ್ಮೀ ಕೆ., ಸವಿತಾ ಸುಂಕದ ಉಪಸ್ಥಿತರಿದ್ದರು. ಅನುಷಾ ಸ್ವಾಗತಿಸಿದರು. ರಾಜೇಶ್ವರಿ ಕಮ್ಮಾರ ನಿರೂಪಿಸಿದರು. ಸ್ಪಂದನಾ ಶೆಟ್ಟಿ ವಂದಿಸಿದರು.