ಮಹಾಲಿಂಗಪುರ: ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನ ಬಳಸಿಕೊಂಡು ವಿಶ್ವವಿಖ್ಯಾತ ವ್ಯಕ್ತಿಗಳಾಗಬೇಕು ಎಂದು ಜಮಖಂಡಿ ಬಿಎಲ್‌ಡಿಇ ಪದವಿ ಕಾಲೇಜಿನ ಉಪ ಪ್ರಾಚಾರ್ಯ ಡಾ.ಎಸ್.ಬಿ.ಕಮತಿ ಹೇಳಿದರು.
ಇಲ್ಲಿಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಮತ್ತು ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎಂಕಾಂ ವಿಭಾಗದಿಂದ ಆಯೋಜಿಸಿದ್ದ ‘ಭೌದ್ಧಿಕ ಆಸ್ತಿ ಹಕ್ಕುಗಳು (ಐಪಿಆರ್) - ಟ್ರೇಡ್‌ಮಾರ್ಕ್ (ಪೆಟೆಂಟ್)’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಕ್ರೀಯಾತ್ಮಕವಾಗಿ ಯೋಚಿಸುವುದಷ್ಟೆ ಅಲ್ಲ. ನಮ್ಮ ಕ್ರೀಯಾತ್ಮಕತೆಯನ್ನು ಬೇರೆಯವರು ಉಪಯೋಗಿಸದಂತೆ ಭೌದ್ಧಿಕ ಆಸ್ತಿ ಹಕ್ಕುಗಳ ಅನ್ವಯ ನೋಂದಣಿ ಮಾಡಬೇಕು. ಸಾಹಿತ್ಯಿಕ ಮತ್ತು ಕಲಾತ್ಮಕ ಕೃತಿಗಳು, ಪೆಟೆಂಟ್, ವಿನ್ಯಾಸಗಳು, ತಂತ್ರಾಂಶಗಳು, ದತ್ತಾಂಶಗಳು ಬೌದ್ಧಿಕ ಆಸ್ತಿಯ ಹಕ್ಕಿನಡಿ ಬರುತ್ತವೆ ಎಂದರು.
ಪ್ರಾಚಾರ್ಯ ಡಾ. ಕೆ.ಎಂ. ಅವರಾದಿ, ಎಂಕಾಂ ವಿಭಾಗದ ಮುಖ್ಯಸ್ಥೆ ಡಿ.ಎಂ. ಹೊಸಪೇಟಿ, ಪೂಜಾ ಹೊಸೂರ, ಪ್ರಿಯಂಕಾ ಬಳಗಾರ, ಎ.ಎಂ. ಉಗಾರೆ, ಎಂ.ಬಿ.ಧರಿಗೌಡರ, ಟಿ.ಡಿ. ಡಂಗಿ, ಅಶ್ವಿನಿ ಲಟ್ಟಿ, ಸೌಮ್ಯಾ ಹಾರೂಗೊಪ್ಪ, ಸೌಮ್ಯಾ ಸವದಿ, ರಾಜು ಚೌಗಲಾ ಮುಂತಾದವರು ಉಪಸ್ಥಿತರಿದ್ದರು.