ಜಿಲ್ಲೆ

ಪರಿಸರಸ್ನೇಹಿ ಬಟ್ಟೆಚೀಲ ಬಳಕೆಯಾಗಲಿ

ಪ್ರಶಾಂತ ಹೂಗಾರ

ಚಿಕ್ಕೋಡಿ: ಪುರಸಭೆ ವತಿಯಿಂದ ಪ್ಲಾಸ್ಟಿಕ್ ಮುಕ್ತ ಅಭಿಯಾನದಡಿ ಸಿಎಲ್‌ಇ ಸಂಸ್ಥೆಯ ಎಂ.ಕೆ ಕವಟಗಿಮಠ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ನಿಷೇಧ ಅಭಿಯಾನದ ಕುರಿತು ಭಾನುವಾರ ಜಾಗೃತಿ ಮೂಡಿಸಲಾಯಿತು.

ಚಿಕ್ಕೋಡಿ ಪಟ್ಟಣದಲ್ಲಿ ಪುರಸಭೆ ವತಿಯಿಂದ ಪ್ಲಾಸ್ಟಿಕ್ ಮುಕ್ತ ಅಭಿಯಾನದಡಿ ಜಾಗೃತಿ ಮೂಡಿಸಲಾಯಿತು. ಮಹಾಂತೇಶ ನಿಡವಣಿ, ವಿ.ರಮೇಶ ಇತರರಿದ್ದರು.

ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಹಾಗೂ ಅಂಗಡಿಕಾರರು, ಪೌರಕಾರ್ಮಿಕರಿಗೆ ಏಕಬಳಕೆ ಪ್ಲಾಸ್ಟಿಕ್ ನಿಷೇಧ, ವಿಂಗಡಿತ ತ್ಯಾಜ್ಯ ಸಂಗ್ರಹೆ ಅರಿವು ಮೂಡಿಸಲಾಯಿತು. ಪುರಸಭೆ ಮುಖ್ಯಾಕಾರಿ ಮಹಾಂತೇಶ ನಿಡವಣಿ, ಮಾರುಕಟ್ಟೆ ಸ್ಥಳಗಳಲ್ಲಿ ದಾಳಿ ಮಾಡಿ ನಿಷೇತ ಪ್ಲಾಸ್ಟಿಕ್ ವಶಪಡಿಸಿಕೊಂಡು ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕುವುದಾಗಿ ಎಚ್ಚರಿಸಿದರು.

ಪರಿಸರ ಸ್ನೇಹಿ ಬಟ್ಟೆ ಚೀಲ, ಪೇಪರ್ ಬ್ಯಾಗ್ ಉಪಯೋಗಿಸಬೇಕು ಎಂದರು. ಪ್ಲಾಸ್ಟಿಕ್ ಮುಕ್ತ ಅಂಗಡಿ ಮಾಲೀಕರಿಗೆ ಪರಿಸರ ಸ್ನೇಹಿ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ಕೆ.ಎಸ್.ಪಿ.ಸಿ.ಬಿಯ ಪರಿಸರ ಅಕಾರಿ ವಿ.ರಮೇಶ, ಪುರಸಭೆಯ ಆರೋಗ್ಯ ನಿರೀಕ್ಷಕ ಟಿ.ಕೆ. ಜಮಖಂಡಿ, ಪುರಸಭೆಯ ಸಿಬ್ಬಂದಿಗಳಿದ್ದರು ಇತರರಿದ್ದರು.