ಜಿಲ್ಲೆ

ಮರುಬಳಕೆಯ ಬಟ್ಟೆ ಬ್ಯಾಗ್ ಬಳಸಿ

ಪ್ರಸಿನ್ ಕೆ.ಆರ್

ಹಾಸನ: ನಗರದ ರಿಂಗ್ ರಸ್ತೆ ಬದಿಯ ಚಿಕ್ಕಹೊನ್ನೇನಹಳ್ಳಿ ರಸ್ತೆ ಬಳಿ ಮಹಾನಗರ ಪಾಲಿಕೆ, ಪೌರಾಡಳಿತ ನಿರ್ದೇಶನಾಲಯ, ಸ್ವಚ್ಛ ಭಾರತ್ ಮಿಷನ್ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ ಸಂಯುಕ್ತ ಆಶ್ರಯದಲ್ಲಿ ಗುರುವಾರ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಹಾಪೌರರಾದ ಗಿರೀಶ್ ಚನ್ನವೀರಪ್ಪ ಮಾತನಾಡಿ, ಸ್ವಚ್ಛತಾ ಹೀ ಸೇವಾ ಅಭಿಯಾನವು ಏಕ್ ದಿನ, ಏಕ್ ಗಂಟೆ, ಏಕ್ ಸ್ಥಳದಲ್ಲಿ ಎಂಬ ತತ್ವದಡಿ ನಗರವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

ಸಾರ್ವಜನಿಕರು ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ರಸ್ತೆಗೆ ಎಸೆಯದೆ, ನಿಯಮಿತವಾಗಿ ವಿಲೇವಾರಿ ಮಾಡಬೇಕು. ಪ್ಲಾೃಸ್ಟಿಕ್ ಬ್ಯಾಗ್ ಬದಲು ಮರು ಬಳಕೆಯ ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕು ಎಂದರು.

ನಮ್ಮ ಮನೆ, ನಮ್ಮ ಊರು, ನಮ್ಮ ದೇಶ ಎಂಬ ಭಾವನೆಯೊಂದಿಗೆ ಪ್ರತಿಯೊಬ್ಬರೂ ಪರಿಸರ ಸ್ವಚ್ಛವಾಗಿಡಲು ಒತ್ತು ನೀಡಬೇಕೆಂದರು. ಪಾಲಿಕೆ ಆಯಕ್ತ ಕೃಷ್ಣಮೂರ್ತಿ, ಇಂಜಿನಿಯರ್ ಎಚ್.ಆರ್. ಚನ್ನೇಗೌಡ, ಕವಿತಾ, ಲಯನ್ಸ್ ವಲಯ ಅಧ್ಯಕ್ಷ ಎಚ್.ಕೆ. ನಾಗೇಶ್, ರವಿನಾಕಲಗೂಡು, ನಗರಸಭೆ ಸಿಬ್ಬಂದಿ, ಸ್ವಯಂಸೇವಕರು, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಇತರರು ಇದ್ದರು.