ಜಿಲ್ಲೆ

"ಯುಎಸ್​ನಲ್ಲಿ ಅಧ್ಯಯನ' ಮೇಳ ಸಂಪನ್ನ

ಬೆಂಗಳೂರು: ಅಮೆರಿಕದಲ್ಲಿ ಉನ್ನತ ಶಿಕ್ಷಣ ಕುರಿತು ಮಾಹಿತಿ ನೀಡುವ ಅಧಿಕೃತ ಮೂಲವಾದ ಎಜುಕೇಶನ್​ ಯುಎಸ್​ಎ ಭಾರತದ ಎಂಟು ಕಡೆಗಳಲ್ಲಿ "ಯುಎಸ್​ನಲ್ಲಿ ಅಧ್ಯಯನ' ಶಿಕ್ಷಣ ಮೇಳವನ್ನು ಆಯೋಜಿಸಲಾಯಿತು. ಈ ಮೇಳಗಳು ಆ.9 ರಂದು ಚೆನ್ನೆ$ಯಲ್ಲಿ ಆರಂಭವಾಗಿ ಆ.17ರಂದು ಪುಣೆಯಲ್ಲಿ ಕೊನೆಗೊಂಡಿದೆ. ದೇಶಾದ್ಯಂತ ನಡೆದ ಈ ಮೇಳದಲ್ಲಿ ಮಾನ್ಯತೆ ಪಡೆದ 50ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಭಾಗವಹಿಸಿತ್ತು. ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಅಮೆರಿಕನ್​ ಸಂಸ್ಥೆಗಳ ಅಧಿಕೃತ ಪ್ರತಿನಿಧಿಗಳನ್ನು ಭೇಟಿಯಾಗುವ ಅವಕಾಶ ದೊರಕಿದೆ.

ಈ ಮೇಳಗಳು ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಬಯಸುವ ಪದವಿ, ಸ್ನಾತಕೋತ್ತರ ಅಥವಾ ಪಿಎಚ್​ಡಿ ವಿದ್ಯಾರ್ಥಿಗಳಿಗೆ ತಮ್ಮದೇ ಶಿಕ್ಷಣ ಮಾರ್ಗವನ್ನು ರೂಪಿಸಿಕೊಳ್ಳಲು ನೇರ ಸಲಹೆ ಮತ್ತು ಮಾರ್ಗದರ್ಶನ ಪಡೆಯುವ ಅವಕಾಶ ಒದಗಿಸಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳು, ಎಜುಕೇಶನ್​ ಯುಎಸ್​ಎ ಸಲಹೆಗಾರರು ಮತ್ತು ಅಮೇರಿಕ ರಾಯಭಾರ ಕಚೇರಿಯ ಪ್ರತಿನಿಧಿಗಳೊಂದಿಗೆ ನೇರವಾಗಿ ಸಂವಾದ ನಡೆಸುವ ಮೂಲಕ, ವಿಶ್ವಾಸಾರ್ಹ ಮತ್ತು ಪಾರದರ್ಶಕ ಮಾಹಿತಿಯನ್ನು ಪಡೆದರು. ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಆಸಕ್ತಿ ಇರುವ ಭಾರತೀಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದೇ ಮೇಳದ ಉದ್ದೇಶವಾಗಿತ್ತು.