ಅರಟಾಳ ಸಮೀಪದ ಬಾಡಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಲಾಲಸಾಬ್ ದರ್ಗಾ ಉದ್ಘಾಟನೆ ಹಾಗೂ ಉರುಸ್ ಕಾರ್ಯಕ್ರಮದಲ್ಲಿ ನಾಗರಾಳದ ಪರಮಾನಂದ ಯೋಗಾಶ್ರಮದ ಜ್ಞಾನೇಶ್ವರ ಸ್ವಾಮೀಜಿ ಮಾತನಾಡಿದರು. ಶಿವಾನಂದ ಸ್ವಾಮೀಜಿ, ಕೃಷ್ಣಗೌಡ ಪಾಟೀಲ, ಕೋಲೂರ ಶಂಭುಲಿಂಗ ಇತರರಿದ್ದರು. 
ಜಿಲ್ಲೆ

ಉರುಸ್ ಆಚರಣೆ ಶ್ಲಾಘನೀಯ

ಪ್ರಶಾಂತ ಹೂಗಾರ

ಅರಟಾಳ: ಹಿಂದು-ಮುಸ್ಲಿಂ ಭಾವೈಕ್ಯದಿಂದ ಉರುಸ್ ಆಚರಣೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ನಾಗರಾಳದ ಪರಮಾನಂದ ಯೋಗಾಶ್ರಮದ ಶ್ರೀ ಜ್ಞಾನೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಬಾಡಗಿ ಗ್ರಾಮದಲ್ಲಿ ಶುಕ್ರವಾರ ಹಜರತ ಶ್ರೀ ಜಲಾಲಸಾಬ ದರ್ಗಾ ಉದ್ಘಾಟನೆ ಹಾಗೂ ಉರುಸ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಬದುಕಿನುದ್ದಕ್ಕೂ ಮಹಾತ್ಮರ ಸ್ಮರಣೆ ಯಾರು ಮಾಡುತ್ತಾರೋ ಅವರು ಪರಮಾತ್ಮನಿಗೆ ಹತ್ತಿರವಾಗುತ್ತಾರೆ. ಗ್ರಾಮದ ಜನರು ಒಗ್ಗಟ್ಟಿನಿಂದ ಉರುಸ್ ಆಚರಣೆ ಹಾಗೂ ಅನ್ನಸಂತರ್ಪಣೆ ಮಾಡುತ್ತಿರುವುದು ಪುಣ್ಯದ ಕೆಲಸ ಎಂದರು.

ಹಳಿಂಗಳಿ ಶಿವಾನಂದ ಸ್ವಾಮೀಜಿ, ಕೃಷ್ಣಗೌಡ ಪಾಟೀಲ, ಕೋಲೂರ ಶಂಭುಲಿಂಗ ಸ್ವಾಮೀಜಿ, ಸಂಗಯ್ಯ ಹಿರೇಮಠ, ಅರ್ಚಕ ಲಾಲಸಾಬ್ ಮುಲ್ಲಾ, ಅಪ್ಪು ಬುದ್ನಿ, ಸಿದ್ದಪ್ಪ ನೇಮಗೌಡ, ಸಿದ್ದು ಹಳ್ಳಿ, ಗುರಪ್ಪ ಹುನ್ನೂರ, ಈರಪ್ಪ ನೇಮಗೌಡ, ಅಸ್ಕರ್ ಮುಲ್ಲಾ ಇದ್ದರು. ಮಾಣಿಕ ಬಡಿಗೇರ ನಿರೂಪಿಸಿ, ವಂದಿಸಿದರು.