ಜಿಲ್ಲೆ

ನಾಳೆಯಿಂದ ಪಳ್ಳಿತ್ತಡ್ಕ ದುರ್ಗಾ ಶರೀಫ್ ಉರುಸ್

Mangaluru - Nishantha Narayana

ಪುತ್ತೂರು: ಇರ್ದೆ ಸೀರೆ ಹೊಳೆಯ ತಟದಲ್ಲಿರುವ ಪಳ್ಳಿತ್ತಡ್ಕ ದುರ್ಗಾ ಶರೀಫ್ ೪೯ನೇ ಉರುಸ್ ಮುಬಾರಕ್ ಏ.೨೦ರಿಂದ ೨೬ರವರೆಗೆ ನಡೆಯಲಿದೆ ಎಂದು ಕೊರಿಂಗಿಲ ಜುಮಾ ಮಸೀದಿ ಉಪಾಧ್ಯಕ್ಷ ಆಲಿಕುಂಞಿ ಹೇಳಿದರು.

೨೦ರಂದು ಫಾರೂಕ್ ನಈಮಿ ಕೊಲ್ಲಂ, ೨೧ರಂದು ಅಬೂರಬೀಹ್ ಸ್ವದಕತುಲ್ಲ ಬಾಖವಿ ಕೊಲ್ಲಂ, ೨೨ರಂದು ಸಿ.ಕೆ.ರಾಶಿದ್ ಬುಖಾರಿ, ಕುಟ್ಯಾಡಿ, ೨೩ರಂದು ಅಲ್ ಹಾಫಿಳ್ ಮಾಹಿನ್ ಮನ್ನಾನಿ, ೨೪ರಂದು ಜಬ್ಬಾರ್ ಸಖಾಫಿ ಪಾತೂರು, ೨೫ರಂದು ಶುಹೈಬುಲ್ ಹೈತಮಿ ವಯನಾಡ್, ೨೬ರಂದು ಶಫೀಕ್ ಬದ್ರಿ ಬಾಖವಿ ಕಡಾಕ್ಕಲ್ ಮುಖ್ಯ ಭಾಷಣ ನಡೆಸಲಿದ್ದಾರೆ. ೨೬ರಂದು ಸಮಾರೋಪ ಸಮಾರಂಭದಲ್ಲಿ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಲು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ, ಪ್ರಧಾನ ಕಾರ್ಯದರ್ಶಿ ಮೂಸಕುಂಞಿ ಬೆಟ್ಟಂಪಾಡಿ, ಉರುಸ್ ಕಮಿಟಿ ಅಧ್ಯಕ್ಷ ಅಬೂಬಕ್ಕರ್ ಟಿ. ಎಂ. ಉಪಸ್ಥಿತರಿದ್ದರು.