ಕುಂದಾಪುರ: ಮಹಾತ್ಮರು ಅವರ ಕಠಿಣವಾದ ಪರಿಶ್ರಮದಿಂದ ಆಧ್ಯಾತ್ಮಿಕವಾಗಿ ಉನ್ನತ ಶ್ರೇಣಿ ಹೊಂದುತ್ತಾರೆ ಅವರು ತೋರಿಸಿಕೊಟ್ಟ ದಾರಿಯಲ್ಲಿ ಸಾಗಬೇಕು ಆಗ ನಾವು ಸ್ವರ್ಗದಲ್ಲಿ ದೇವರನ್ನು ಕಾಣುತ್ತೇವೆ ಎಂದು ಪ್ರಭಾಷಣಕಾರ ನೌಫಲ್ ಸಕಾಫಿ ಕಳಸ ಹೇಳಿದರು.
ಬುಧವಾರ ಕುಂದಾಪುರದ ಜೆ.ಎಂ.ರಸ್ತೆಯಲ್ಲಿರುವ ದರ್ಗಾ ಶರೀಫ್ ಹಝ್ರತ್ ಸುಲ್ತಾನ್ ಸಯ್ಯಿದ್ ಯೂಸುಫ್ ವಲಿಯುಲ್ಲಾಹಿ ಯಲ್ಲಿ ಕುಂದಾಪುರ ಉರುಸ್ ಮುಬಾರಕ್ ಕಾರ್ಯಕ್ರಮದಲ್ಲಿ ಮಗರಿಬ್ ನಮಾಜಿನ ನಂತರ ನಡೆದ ವಾರ್ಷಿಕ ಜಲಾಲಿಯ್ಯ ರಾತೀಬ್ ಹಾಗೂ ಮತ ಪ್ರಭಾಷಣ ಮಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಎಸ್‌ಡಿಎಂಸಿ ರಾಜ್ಯ ನಿರ್ದೇಶಕ ಅಬ್ದುಲ್ ಸಲಾಂ ಚಿತ್ತೂರು ಅವರನ್ನು ಸನ್ಮಾನಿಸಲಾಯಿತು. ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ನೇತೃತ್ವ ವಹಿಸಿದ್ದರು. ದರ್ಗಾ ಶರೀಫ್ ಚಾರಿಟೆಬಲ್ ಟ್ರಸ್ಟ್ ಕುಂದಾಪುರ ಅಧ್ಯಕ್ಷ ಕೆ.ಎಸ್ ಕಾಸಿಂ ಕೋಯ ಅಧ್ಯಕ್ಷತೆ ವಹಿಸಿದ್ದರು. ಮುದರ್ರಿಸ್ ಎಂಜೆಎಂ ಕೋಡಿ ಇಲ್ಲಿನ ಯೂಸುಫ್ ಸಕಾಫಿ ದುವಾ ನಡೆಸಿದರು. ಕುಂದಾಪುರ ಜಾಮಿಯಾ ಮಸೀದಿಯ ಉಪಾಧ್ಯಕ್ಷ ಮುಜಾವರ್ ಅಬು ಮಹಮ್ಮದ್ ಪ್ರಶಸ್ತಿ ಪತ್ರ ವಾಚಿಸಿದರು.
ಶೇಕ್ ಫರೀದ್ ಭಾಷಾ ಸಾಹೇಬ್ ಖಾಸಿಂ, ಎ.ಕೆ.ಯೂಸುಫ್ ಸಾಹೇಬ್, ಅಕ್ಬರ್ ಆಲಿ ಜುಕಾಕೋ, ಅಬ್ದುಲ್ ರೆಸಾರ್ಟ್, ಮೊಹಮ್ಮದ್ ರಯಾನ್ ಹಿಮಾಮಿ ಸಕಾಫಿ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ಜಾಮಿಯಾ ಮಸೀದಿ ಖತೀಬರಾದ ಮೌಲಾನಾ ಶಾಹಿದ್ ರಝಾ, ಕುಂದಾಪುರ ಜಾಮಿಯಾ ಮಸೀದಿ ಅಧ್ಯಕ್ಷ ವಸಿಂ ಭಾಷಾ, ಹಾರೂನ್ ಸಾಹೇಬ್ ಉಪಸ್ಥಿತರಿದ್ದರು.