ಜಿಲ್ಲೆ

ಪ್ರಾಣಿ, ಪಕ್ಷಿಗಳ ಮೇಲೂ ಇರಲಿ ಕರುಣೆ: ಹುಸೈನ್ ಸಅದಿ ಕಿವಿಮಾತು

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ನಿಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮ, ಇತರ ಸಂದರ್ಭದಲ್ಲಿ ಅನ್ನಾಹಾರ ಮಾಡಿದಾಗ ನೆರೆಮನೆಯವನು ಯಾವುದೇ ಜಾತಿ, ಧರ್ಮೀಯನಿರಲಿ ಅವರಿಗೂ ಕೊಟ್ಟು ಸಂತೋಷ ಹಂಚಿಕೊಳ್ಳಬೇಕು. ಮನುಷ್ಯ ಮಾತ್ರವಲ್ಲದೆ ಪ್ರಾಣಿ, ಪಕ್ಷಿಗಳೊಂದಿಗೂ ಕರುಣೆ ಕಾಣಿಸಬೇಕಿರುವುದು ಇಸ್ಲಾಂ ಸಿದ್ಧಾಂತ ಎನ್ನುವುದು ಪ್ರವಾದಿ ಸಂದೇಶ ಎಂದು ಮುಸ್ಲಿಂ ಕರ್ನಾಟಕ ರಾಜ್ಯ ಸುನ್ನಿ ಜಂಇಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಹುಸೈನ್ ಸಅದಿ ಕೆ.ಸಿ.ರೋಡ್ ಹೇಳಿದರು.

ಉಳ್ಳಾಲ ದರ್ಗಾದ 22 ಪಂಚವಾರ್ಷಿಕ ಉರುಸ್ ಪ್ರಯುಕ್ತ ಗುರುವಾರ ನಡೆದ ಕಾರ್ಯಕ್ರಮದಲ್ಲಿ, ‘ಇಸ್ಲಾಂ ಸ್ನೇಹವಾಗಿದೆ.. ಭೀತಿಯಲ್ಲ’ ಎನ್ನುವ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಸಯ್ಯಿದ್ ಅಬ್ದುಲ್ ರಹ್ಮಾನ್ ಶಹೀರ್ ತಂಙಳ್ ಅಲ್‌ಬುಖಾರಿ ಪೊಸೋಟು ದುಆ ನೆರವೇರಿಸಿದರು. ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸುನ್ನಿ ಜಂಇಯತುಲ್ ಉಲಮಾ ಸದಸ್ಯ ಅಬ್ದುಲ್ ರಶೀದ್ ಝೈನಿ ಅಲ್‌ಕಾಮಿಲ್ ಸಖಾಫಿ ಧಾರ್ಮಿಕ ಪ್ರವಚನ ನೀಡಿದರು.

ದರ್ಗಾ ಮಾಜಿ ಅಧ್ಯಕ್ಷರಾದ ಕಣಚೂರು ಮೋನು, ಯು.ಎಸ್.ಹಂಝ, ಮಾಜಿ ಉಪಾಧ್ಯಕ್ಷ ಇಸ್ಮಾಯಿಲ್ ಮೋನು, ಕಣಚೂರು ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಅಬ್ದುಲ್ ರಹಿಮಾನ್ ಕಣಚೂರು, ಉಳ್ಳಾಲಬೈಲು ಮಸೀದಿಯ ಅಧ್ಯಕ್ಷ ಅಮೀರ್ ಅಲಿ, ಖತೀಬ್ ಕಬೀರ್ ಸಅದಿ, ಪಿಲಾರ್ ಮಸೀದಿ ಖತೀಬ್ ಜಬ್ಬಾರ್ ಸಖಾಫಿ, ಅಶ್ರಫ್ ತಂಙಳ್, ಅಬ್ದುಲ್ ಕರೀಂ ಸಖಾಫಿ, ಯೇನೆಪೋಯ ವೈದ್ಯಕೀಯ ಕಾಲೇಜು ಸಿಬ್ಬಂದಿ ಅಬ್ದುಲ್ ರಝಾಕ್, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್‌ವೇ, ಕಾರ್ಯದರ್ಶಿ ಮುಸ್ತಫಾ ಮದನಿಗರ, ಕೋಶಾಧಿಕಾರಿ ನಾಝೀಮ್ ಮುಕಚ್ಚೇರಿ, ಸದಸ್ಯರಾದ ಝೈನುದ್ದೀನ್ ಮೇಲಂಗಡಿ, ಅಬೂಬಕ್ಕರ್ ಹೈದರಲಿನಗರ, ಆಝಾದ್ ಇಸ್ಮಾಯಿಲ್, ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ ಮತ್ತಿತರರು ಉಪಸ್ಥಿತರಿದ್ದರು. ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.

ಅನಾಥರು, ನಿರ್ಗತಿಕರ ಮೇಲೆ ಪ್ರೀತಿ, ಕರುಣೆ ತೋರಿಸಬೇಕು. ಅಂಥ ಹೃದಯ ಇಲ್ಲದವನು ಮನುಷ್ಯನಲ್ಲ. ಇಸ್ಲಾಮಿನಲ್ಲಿ ಉಗ್ರವಾದವನ್ನು ತೀವ್ರವಾಗಿ ವಿರೋಧಿಸಲಾಗಿದ್ದು ಇದಕ್ಕೆ ಬೆಂಬಲ ನೀಡುವವ ಮುಸಲ್ಮಾನನಲ್ಲ. ದೇವನನ್ನು ಭಯಪಟ್ಟು ಜೀವಿಸುವ ಒಂದು ವರ್ಗ ಇಂದಿಗೂ ಭೂಮಿಯ ಮೇಲಿದ್ದಾರೆ. ಈ ಕಾರಣದಿಂದಾಗಿ ಜಗತ್ತು ಇಂದಿಗೂ ಉಳಿದಿದೆ. ಹುಸೈನ್ ಸಅದಿ ಕೆ.ಸಿ.ರೋಡ್ ರಾಜ್ಯ ಸುನ್ನಿ ಜಂಇಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ https://www.vijayavani.net/foundation-stone-laying-for-sri-durgaparameshwari-temple https://www.vijayavani.net/katha-sankalana-bidugade