ಜಿಲ್ಲೆ

ಅಹಂ ಭಾವದಿಂದ ಸರ್ವ ಕಾರ್ಯದಲ್ಲೂ ನಷ್ಟ: ಮಜೀದ್ ಫಾಳಿಲಿ ಹೇಳಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಮನುಷ್ಯನ ಹೃದಯದಲ್ಲಿ ಇನ್ನೊಬ್ಬನ ಮೇಲೆ ಗೌರವಾದಾರ ಇಲ್ಲದಿದ್ದಲ್ಲಿ ಅಂಥವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ, ಸುಶಿಕ್ಷಿತನಾಗಿದ್ದರೂ ಆತನ ಮನದಲ್ಲಿ ಅಹಂ ಭಾವ ಬಂದು ಸರ್ವ ಕಾರ್ಯದಲ್ಲೂ ನಷ್ಟಕ್ಕೊಳಗಾಗುತ್ತಾನೆ ಎಂದು ಕೇಂದ್ರ ಜುಮಾ ಮಸೀದಿ ಖತೀಬ್ ಹಾಫಿಲ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ ಹೇಳಿದರು.

ಉಳ್ಳಾಲ ದರ್ಗಾದಲ್ಲಿ ನಡೆಯುತ್ತಿರುವ 22ನೇ ಪಂಚವಾರ್ಷಿಕ ಉರೂಸ್ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.

ಯಾವುದೇ ಕಾರ್ಯ ಯಶಸ್ವಿಯಾಗಬೇಕಾದರೆ ದೇವರ ಅನುಗ್ರಹ ಅಗತ್ಯ. ಮನುಷ್ಯ ನಿಮಿತ್ತ ಮಾತ್ರ. ಯಾರನ್ನು ಪ್ರೀತಿಸಬೇಕು, ಯಾರನ್ನು ಗೌರವಿಸಬೇಕೆಂದು ದೇವನು ಹೇಳಿದ್ದು, ನಾವು ಅವರನ್ನು ಗೌರವಿಸದೆ ಅಹಂ ಭಾವ ತೋರಿದರೆ ಪರಾಜಯ ಖಚಿತ ಎಂದರು.

ಸಯ್ಯಿದ್ ಮುನೀರ್ ಅಹ್ದಲ್ ತಂಙಳ್ ಮುಹಿಮ್ಮಾತ್ ದುಆ ನೆರವೇರಿಸಿದರು. ಫಾರೂಕ್ ನಯೀಮಿ ಕೊಲ್ಲಂ ಮುಖ್ಯ ಪ್ರಭಾಷಣ ನೀಡಿದರು. ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಅಧ್ಯಕ್ಷತೆ ವಹಿಸಿದ್ದರು.

ಅಕ್ಕರೆಕೆರೆ ಮೊಹಲ್ಲಾ ಅಧ್ಯಕ್ಷ ಮುಹಿಯುದ್ದೀನ್, ಕಾರ್ಯದರ್ಶಿ ಇಬ್ರಾಹಿಂ, ಕೋಶಾಧಿಕಾರಿ ಮೊಯಿದ್ದೀನ್, ಖತೀಬ್ ಉಸ್ಮಾನ್ ಸ ಅದಿ ಫಾಳಿಲಿ, ಸದರ್ ಉಸ್ತಾದ್ ಸಿನಾನ್ ಮಿಸ್ವಾಹಿ, ಉಳ್ಳಾಲ್ ಪೇಟೆ ಮೊಹಲ್ಲಾ ಅಧ್ಯಕ್ಷ ಮೊಯ್ದಿನ್ ಕುಂಞಿ, ತೊಕ್ಕೊಟ್ಟು ಮೊಹಲ್ಲಾ ಅಧ್ಯಕ್ಷ ಅಬ್ದುಲ್ ಲತೀಫ್, ಕೋಶಾಧಿಕಾರಿ ಶಫೀಲ್, ಎಸ್.ಖಾಲಿದ್, ಖತೀಬ್ ಅಬ್ದುಲ್ ರಝಾಕ್ ಲತೀಫಿ, ಎನ್.ಎಸ್.ಮಹಮ್ಮದ್ ತೊಕ್ಕೊಟ್ಟು, ಅಕ್ಕರೆಕೆರೆ ಅಬೂಬಕ್ಕರ್ ಸಿದ್ದೀಕ್ ಮಸೀದಿಯ ಇಮಾಮ್ ಉಸ್ಮಾನ್ ಸಅದಿ ಅಲ್ ಫಾಳಿಲಿ, ಪೇಟೆ ಮೊಹಲ್ಲಾ ಕಾರ್ಯದರ್ಶಿ ಮುಸ್ತಫಾ ಅಹ್ಮದ್, ಕೋಶಾಧಿಕಾರಿ ಯೂಸುಫ್ ಇದ್ದಿನಬ್ಬ, ಖತೀಬ್ ಅಹ್ಮದ್ ಕಬೀರ್, ರಝಾ ಅಮ್ಹದಿ, ಅಬ್ದುಲ್ ಖಾದರ್ ಮದನಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿಗರ, ಕೋಶಾಧಿಕಾರಿ ನಾಝೀಮ್ ಮುಕಚ್ಚೇರಿ, ಸದಸ್ಯರಾದ ಝೈನುದ್ದೀನ್ ಮೇಲಂಗಡಿ, ನಝೀರ್ ಉಳ್ಳಾಲ, ಅಶ್ರಫ್, ಅಬ್ದುಲ್ ರಹ್ಮಾನ್, ಅಮೀರ್, ಮೊಯಿದ್ದೀನ್, ಅಬೂಬಕ್ಕರ್ ಹೈದರಲಿನಗರ, ಆಝಾದ್ ಇಸ್ಮಾಯಿಲ್ ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ ಮೊದಲಾದವರು ಉಪಸ್ಥಿತರಿದ್ದರು. ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.