ಜಿಲ್ಲೆ

ಶಿಸ್ತು ಕ್ರಮಕ್ಕೆ ಮುಸ್ಲಿಂ ಸಮಾಜ ಆಗ್ರಹ

Dharwada - Basavaraj Idli

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥನಿಗೆ ತಕ್ಕ ಶಿಕ್ಷೆಯಾಗಬೇಕು, ಈ ಬಗ್ಗೆ ಪೊಲೀಸ್ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ಕಾಲೇಜು ವಿದ್ಯಾಥಿರ್ನಿಯ ಬರ್ಬರ ಹತ್ಯೆ ಮಾನವೀಯತೆ ಮೇಲಾದ ಕ್ರೂರತೆ. ಇಂಥ ಪ್ರಕರಣಗಳನ್ನು ಅಂಜುಮನ್ ಸಂಸ್ಥೆ ಖಂಡಿಸುತ್ತದೆ. ಕೊಲೆಗಾರನನ್ನು ಎನ್ಕೌಂಟರ್ ಮಾಡಬೇಕು ಎಂದು ಸಂಸ್ಥೆಯ ಎ.ಎಂ. ಹಿಂಡಸಗೇರಿ, ಅಲ್ತಾಫ್ ಹಳ್ಳೂರ ಇತರರು ಆಗ್ರಹಿಸಿದ್ದಾರೆ.

ಯಾವುದೇ ಕಾರಣಕ್ಕೂ ಈ ವಿಷಯವನ್ನು ರಾಜಕೀಯಗೊಳಿಸಬಾರದು. ಮುಸ್ಲಿಂ ಸಮಾಜ ನಿರಂಜನ ಹಿರೇಮಠ ಕುಟುಂಬದ ಜತೆಗಿದ್ದೇವೆ. ಆರೋಪಿಯನ್ನು ತಮಗೆ ಒಪ್ಪಿಸಿದರೆ ನಾವೇ ಅವನಿಗೆ ತಕ್ಕ ಶಿಕ್ಷೆ ನೀಡುತ್ತೇವೆ ಎಂದೂ ಪದಾಧಿಕಾರಿಗಳು ತಿಳಿಸಿದ್ದಾರೆ.