ಮಹಾಲಿಂಗಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ಮುಖಂಡ ಅರ್ಜುನ ದೊಡಮನಿ ಮಾತನಾಡಿದರು. ವಿಠ್ಠಲ ಹೊಸಮನಿ, ಬಸಪ್ಪ ಮೇತ್ರಿ, ರಘು ಆನೆಪ್ಪಗೋಳ ಇತರರಿದ್ದರು. 
ಜಿಲ್ಲೆ

ಒಳಮೀಸಲಾತಿ ಶೀಘ್ರ ಜಾರಿಗೊಳಿಸಲು ಒತ್ತಾಯ

ದತ್ತಾತ್ರೇಯ ಪಿ ಕುಲಕರ್ಣಿ

ಮಹಾಲಿಂಗಪುರ: ರಾಜ್ಯ ಸರ್ಕಾರ ಪ್ರಸಕ್ತ ವರ್ಷದ ಮಳೆಗಾಲ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕೆಂದು ದಲಿತ ಮುಖಂಡ ಅರ್ಜುನ ದೊಡಮನಿ ಒತ್ತಾಯಿಸಿದರು.

ಪಟ್ಟಣದ ಜಿಎಲ್‌ಬಿಸಿ ಅತಿಥಿ ಗೃಹದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿಯಿಂದ ಮಂಗಳವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ. ಎಚ್. ಎನ್. ನಾಗಮೋಹನದಾಸ್ ಅವರ ಸಮೀಕ್ಷಾ ವರದಿ ಜು. 30ರೊಳಗೆ ಸಲ್ಲಿಕೆಯಾಗಬೇಕು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿವೇಶನದಲ್ಲಿ ಒಳಮೀಸಲಾತಿ ಈಡೇರಿಕೆಗಾಗಿ ತಮ್ಮ ಬದ್ಧತೆ ಪ್ರದರ್ಶಿಸಬೇಕು ಎಂದರು.

ಸೈದಾಪುರದ ಯುವ ಮುಖಂಡ ವಿಠ್ಠಲ ಹೊಸಮನಿ ಮಾತನಾಡಿ, ಒಳಮೀಸಲಾತಿ ಹೋರಾಟ 30 ವರ್ಷಗಳ ಹೋರಾಟವಾಗಿದೆ. ಒಳಮೀಸಲಾತಿ ಬೇಡಿಕೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿ ಒಂದು ವರ್ಷವಾಗುತ್ತಿದೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಆ.11 ರಿಂದ ಸತ್ಯಾಗ್ರಹ : ಮಳೆಗಾಲ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಒತ್ತಾಯಿಸಿ ಆಗಸ್ಟ್ 11ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಅನಿರ್ದಿಷ್ಟ ಅಹೋರಾತ್ರಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಎಲ್ಲ ಸಂಘ, ಸಂಸ್ಥೆಗಳ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಹೋರಾಟದಲ್ಲಿ ಭಾಗವಹಿಸಬೇಕೆಂದು ಸಮಾಜದ ನಾಯಕರು ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಬಸಪ್ಪ ಮೇತ್ರಿ, ರಘು ಆನೆಪ್ಪಗೋಳ, ಶಿವಾನಂದ ದೊಡಮನಿ, ಮಹಾಲಿಂಗ ಮಾದರ, ಲಕ್ಷ್ಮಣ ಮಾಂಗ, ಸದಾಶಿವ ಮಾದರ, ಲಘಮಣ್ಣ ಪೂಜೇರಿ, ಮಹಾದೇವ ಮುಗಳಖೋಡ, ಅರುಣ ಮೇತ್ರಿ, ಭೀಮಸಿ ಗೌಂಡಿ, ಸಿಂಧೂರ ಹಲಸಪ್ಪಗೋಳ, ಶ್ರೀಶೈಲ ದೊಡಮನಿ ಇದ್ದರು.