ಜಿಲ್ಲೆ

ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸಿ

Dharwada - Basavaraj Idli

ಹುಬ್ಬಳ್ಳಿ: ಅನ್ಯಧಮಿರ್ಯರ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಪ್ರಮೋದ ಮುತಾಲಿಕ್ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಮೂಲ ನಿವಾಸಿಗಳ ಒಕ್ಕೂಟದ ಸಂಚಾಲಕ ಶಂಕರ ಅಜಮನಿ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಣಿ ಚನ್ನಮ್ಮ ಮೈದಾನದ ಸಾರ್ವಜನಿಕ ಗಣೇಶ ವಿಗ್ರಹ ವಿಸರ್ಜನೆ ಮೆರವಣಿಗೆ ವೇಳೆ ಇವರಿಬ್ಬರು ಕೋಮು ಸೌಹಾರ್ದ ಕದಡುವ ರೀತಿಯಲ್ಲಿ ಮಾತನಾಡಿದ್ದಾರೆ. ಇವರನ್ನು ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಗದೀಶ ಶೆಟ್ಟರ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಧಿರ್ಸಿದರೆ ಸೋಲುತ್ತಾರೆ ಎಂದು ಯತ್ನಾಳ ಹೇಳುವುದನ್ನು ನೋಡಿದರೆ, ಇವಿಎಂ ಮಷಿನ್ಗಳ ಮೇಲೆ ಅನುಮಾನ ಬರುತ್ತದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.

ಒಕ್ಕೂಟದ ಸದಾನಂದ ತೇರದಾಳ, ವಿಜಯಕುಮಾರ, ಸಲೀಂ ಅಹ್ಮದ ಮುಲ್ಲಾ, ಅಬ್ದುಲ್ ಬಂಗಾರಿ ಗೋಷ್ಠಿಯಲ್ಲಿದ್ದರು.