ಚಿಕ್ಕಮಗಳೂರು: ನೆರೆಯ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಅಮಾಯಕ ದಲಿತ ಹಿಂದೂಗಳನ್ನು ರಕ್ಷಿಸಿ ಜೀವ ಭದ್ರತೆ ಒದಗಿಸಬೇಕು ಎಂದು ಹಿಂದೂ ಭೀಮ್ ಆರ್ಮಿ ಮುಖಂಡರುಗಳು ಶುಕ್ರವಾರ ಜಿಲ್ಲಾಡಳಿತ ಮುಖಾಂತರ ಕೇಂದ್ರದ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಭೀಮ್ ಆರ್ಮಿ ಅಧ್ಯಕ್ಷ ಯೋಗೀಶ್, ಬಾಂಗ್ಲಾದೇಶದಲ್ಲಿ ಸಂಭವಿಸಿರುವ ರಾಜಕೀಯ ಅರಾಜಕತೆಯ ಹಿನ್ನೆಲೆ ಸಾಕಷ್ಟು ಗಲಭೆಗಳು ನಡೆಯುತ್ತಿವೆ. ಈ ನಡುವೆ ಬಾಂಗ್ಲಾದ ಹಿಂದೂಗಳು, ಅದರಲ್ಲೂ ದಲಿತರನ್ನು ಗುರಿಯಾಗಿಸಿ ದಾಳಿ ನಡೆಯುತ್ತಿರುವುದು ಖಂಡನೀಯ ಎಂದರು.
ಮೀಸಲಾತಿ ವಿಷಯದಲ್ಲಿ ಆರಂಭವಾದ ಹೋರಾಟ ಬಾಂಗ್ಲಾದ ಪ್ರಧಾನಿ ಪದತ್ಯಾಗದವರೆಗೂ ಬಂದುನಿAತು ರಾಜಕೀಯ ಅರಾಜಕತೆಗೆ ಹಿಡಿದ ಕೈಗನ್ನಡಿಯಾಗಿದೆ. ಇದನ್ನೇ ಬಂಡವಾಳವನ್ನಾಗಿಸಿರುವ ಕೋಮುವಾದಿ ಶಕ್ತಿಗಳು ನಿರಂತರವಾಗಿ ಹಿಂದೂಗಳನ್ನು ಗುರಿಯಾಗಿಸಿ ಕಗ್ಗೋಲೆ ಮಾಡುತ್ತಿದೆ ಎಂದು ಹೇಳಿದರು.
ಬಾಂಗ್ಲಾದ ಅಂತರಾಷ್ಟಿçÃಯ ಹಿಂದೂ ಕ್ರಿಕೆಟ್ ಪಟು ಲಿಟ್ಟನ್ ದಾಸ್‌ರ ಮನೆಯನ್ನು ಬೆಂಕಿಹಚ್ಚಿ ಸುಟ್ಟುಹಾಕಿರುವುದು ಹಿಂದೂಗಳ ದಯನೀಯ ಸ್ಥಿತಿಯನ್ನು ತೋರಿಸುತ್ತದೆ. ಅಲ್ಲದೇ ಮಹಿಳೆಯರು, ಮಕ್ಕಳು ಎನ್ನದೇ ಕಂಡ ಕಂಡಲ್ಲಿ ಕೊಲೆ, ಅತ್ಯಾಚಾರ ನಡೆಸುತ್ತಿರುವುದು ಗಮನಿಸಿದರೆ ೧೯೪೭ರಲ್ಲಿ ಪಾಕಿಸ್ತಾನದಲ್ಲಿ ನಡೆದ ಘಟನೆ ಮರುಕಳಿಸಿದಂತಾಗಿದೆ ಎಂದರು.
ಭಾರತ ಹಾಗೂ ಪಾಕಿಸ್ತಾನ ಸ್ವಾತಂತ್ರö್ಯ ಸಮಯದಲ್ಲಿ ಪಾಕಿಸ್ತಾನ ಮೊದಲ ದಲಿತ ಸಚಿವ ಜೋಗೇಂದ್ರನಾಥ ಮಂಡಲ್ ಅವರು ಪ್ರಾಣ ರಕ್ಷಣೆಗೆ ಪದತ್ಯಾಗಗೊಳಿಸಿ ಭಾರತಕ್ಕೆ ಬರಬೇಕಾಯಿತು. ಅಂಥ ಪರಿಸ್ಥಿತಿ ಇಂದು ಬಾಂಗ್ಲಾದಲ್ಲಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೀಗಾಗಿ ಕೇಂದ್ರ ಸರ್ಕಾರ ಶೀಘ್ರವೇ ಮಧ್ಯಸ್ಥಿಕೆವಹಿಸಿ ಅಂತರಾಷ್ಟಿçÃಯ ಒತ್ತಡ ಏರುವ ಮೂಲಕ ಬಾಂಗ್ಲಾದಲ್ಲಿ ಪ್ರಾಣ ಭಯದಿಂದ ನಲುಗುತ್ತಿರುವ ದಲಿತ ಹಿಂದೂಗಳ ರಕ್ಷಣೆಗೆ ಧಾವಿಸಿ ಆಶ್ರಯ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿಂದೂ ಭೀಮ್ ಆರ್ಮಿ ಕಾರ್ಯದರ್ಶಿ ಧರ್ಮರಾಜು, ಸದಸ್ಯರಾದ ಪ್ರದೀಪ್, ಕೇಶವಮೂರ್ತಿ, ಪ್ರಸಾದ್, ಹೊನ್ನಭೋವಿ, ಯತೀಶ್, ನಾಗರಾಜು ಮತ್ತಿತರರಿದ್ದರು.