ಜಿಲ್ಲೆ

ಯೂರಿಯಾ ಪೂರೈಕೆ ಸಮಸ್ಯೆ ಶಿಘ್ರ ಬಗೆಹರಿಸಲಿ

ರೇಷ್ಮೆ ನಗರ ಡೆಸ್ಕ್

ಚನ್ನಪಟ್ಟಣ: ಯೂರಿಯಾ ತಯಾರು ಮಾಡುವುದು ಕೇಂದ್ರ ಸರ್ಕಾರ. ರೈತರಿಗೆ ಅಗತ್ಯವಿರುವ ಯೂರಿಯಾ ಬಿಡುಗಡೆ ಮಾಡಬೇಕಾಗಿರುವುದು ಕೇಂದ್ರದ ಹೊಣೆ. ಈ ವಿಚಾರದಲ್ಲಿ ಕೇಂದ್ರವೇ ಜವಾಬ್ದಾರಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಬಮುಲ್​ ಅಧ್ಯ ಡಿ.ಕೆ.ಸುರೇಶ್​ ಆಗ್ರಹಿಸಿದರು.

ತಾಲೂಕಿನ ಬೈರಾಪಟ್ಟಣದ ಬಮುಲ್​ ಶಿಬಿರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ರಸಗೊಬ್ಬರಕ್ಕಾಗಿ ರೈತರ ಪರದಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಮಂತ್ರಿಗಳು ಹಾಗೂ ಸಂಸದರು ಈ ಬಗ್ಗೆ ಸಂಬಂಧಪಟ್ಟ ಮಂತ್ರಿಗಳ ಜತೆ ಮಾತನಾಡಬೇಕು. ಸಿಎಂ ಈಗಾಗಲೇ ಈ ಬಗ್ಗೆ ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಈಗ ಲೋಕಸಭಾ ಅಧಿವೇಶನ ನಡೆಯುತ್ತಿದೆ. ಎಲ್ಲ ಮಂತ್ರಿಗಳು ಅಲ್ಲೆ ಸಿಗುತ್ತಾರೆ, ಈ ಬಗ್ಗೆ ಸಭೆ ಮಾಡಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಸಿಎಂ ಹಾಗೂ ಶಾಸಕರ ಸಭೆಗೆ ಡಿಸಿಎಂ ಅವರಿಗೆ ಆಹ್ವಾನ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ರೀತಿ ಏನು ಇಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಸವೋರ್ಚ್ಚ ಅಧಿಕಾರ ಇದೆ. ಶಾಸಕರ ಸಮಸ್ಯೆ ಆಲಿಸಬೇಕು ಎಂದು ಸಭೆ ಮಾಡುತ್ತಿದ್ದಾರೆ. ಮೊದಲಿಂದಲೂ ಇದೇ ಕೆಲಸ ಮಾಡಿದ್ದು, ಈಗ ಜಿಲ್ಲಾವಾರು ಶಾಸಕರ ಸಭೆ ಮಾಡಿ ಶಾಸಕರ ಭಾವನೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಮತ ಕಳ್ಳತನ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನಾನೇನು ಮಾತನಾಡಲ್ಲ. ಆದರೆ, ನಮ್ಮ ನಾಯಕ ರಾಹುಲ್​ ಗಾಂಧಿ ಹೇಳಿಕೆಗೆ ನನ್ನ ಸಹಮತ ಇದೆ. ಆ.4ರಂದು ಮತದಾರರ ಪಟ್ಟಿಯಲ್ಲಿ ಆದ ಲೋಪದೋಷಗಳ ಬಗ್ಗೆ ರಾಹುಲ್​ ಗಾಂಧಿ ಹಾಗೂ ಎಐಸಿಸಿ ಅಧ್ಯ ಮಲ್ಲಿಕಾರ್ಜುನ ರ್ಖಗೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯರು ಪೂರ್ವಭಾವಿ ಸಭೆ ಮಾಡಿದ್ದಾರೆ ಎಂದರು.

ಕಡಿಮೆ ಬಾಡಿಗೆಗೆ ಸ್ಥಳ ನೀಡಲು ಮನವಿ

ಮೆಟ್ರೋ ಸ್ಟೇಷನ್​ನಲ್ಲಿ ನಂದಿನಿ ಪಾರ್ಲರ್​ ಆರಂಭಿಸಲು ಸ್ಥಳ ಪರಿಶೀಲನೆ ನಡೆಯುತ್ತಿದೆ. ಮೊದಲು ಅವರ ಜತೆ ಒಪ್ಪಂದ ಮಾಡಿಕೊಳ್ಳಬೇಕಿದೆ. ಬಾಡಿಗೆ ವಿಚಾರದಲ್ಲಿ ಮಾತುಕತೆ ಮಾಡಬೇಕಾಗಿದ್ದು, ಇದು ರೈತರ ಸಂಸ್ಥೆ ಆಗಿರುವ ಹಿನ್ನೆಲೆಯಲ್ಲಿ ಕಡಿಮೆ ಬಾಡಿಗೆಗೆ ಸ್ಥಳ ನೀಡುವಂತೆ ಮನವಿ ಮಾಡಿದ್ದೇವೆ. ಹೊರ ರಾಜ್ಯದವರು ಹೆಚ್ಚಿನ ಬಾಡಿಗೆ ಕೊಡಲು ರೆಡಿ ಇದ್ದಾರೆ. ಅದನ್ನೇ ನಮ್ಮ ಬಳಿಯೂ ಅಪೇೆ ಮಾಡಲಾಗುತ್ತಿದೆ. ಈ ಬಗ್ಗೆ ಬಿಎಂಆರ್​ಸಿಎಲ್​ ಎಂಡಿ ಜತೆ ಮಾತನಾಡಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಸುರೇಶ್​ ತಿಳಿಸಿದರು.