ಜಿಲ್ಲೆ

ಹಾಲುಮತ ಸಮುದಾಯ ಶಿಕ್ಷಣ ಸಂಸ್ಥೆ ಸ್ಥಾಪಿಸಲಿ

ಹನುಮಸಾಗರ: ಹಾಲುಮತ ಸಮುದಾಯದವರು ದೇವಸ್ಥಾನಗಳ ನಿರ್ಮಾಣಕ್ಕಿಂತ ಶಾಲಾ ಕಾಲೇಜುಗಳ ನಿರ್ಮಾಣ ಹಾಗೂ ಸ್ಥಾಪನೆಗೆ ಹೆಚ್ಚು ಒತ್ತು ನೀಡಬೇಕು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಹೇಳಿದರು.

ಸಮೀಪದ ಯಲಬುಣಚಿ ಗ್ರಾಮದಲ್ಲಿ ಭಾನುವಾರ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಾಲುಮತ ಸಮುದಾಯದವರು ರಾಜ್ಯದಲ್ಲಿ ಹೆಚ್ಚು ದೇವಸ್ಥಾನ ನಿರ್ಮಾಣ ಮಾಡುತ್ತಿದ್ದಾರೆಂದು ಮಾತನಾಡುತ್ತಿದ್ದಾರೆ. ಹಾಗಾಗಿ ಶಾಲಾ ಕಾಲೇಜು ಸ್ಥಾಪನೆ ಮಾಡಬೇಕಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸಮುದಾಯದ ಜನರು ಒಗ್ಗಟ್ಟಾಗಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಸಣ್ಣ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣ ಮಾಡಿ, ಸಾಮೂಹಿಕ ವಿವಾಹ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡುತ್ತಿರುವ ಯಲಬುಣಚಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯ. ಬೀರಲಿಂಗೇಶ್ವರ ಭಕ್ತಿಯ ಭಂಡಾರ ನಮಗೆಲ್ಲ ಶಕ್ತಿ ಕರುಣಿಸಲಿ ಎಂದರು.

ಎಂಟು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಬಾದಿಮನಾಳ ಕನಕ ಗುರು ಪೀಠದ ಶಿವಸಿದ್ದೇಶ್ವರ ಸ್ವಾಮೀಜಿ, ಸರೂರ ಹಾಲುಮತ ಮೂಲಗುರುಪೀಠದ ಸಿದ್ದಯ್ಯ ಸ್ವಾಮೀಜಿ, ಶಿವಲಿಂಗಯ್ಯ ಗುರುವಿನ, ತೇಜಯ್ಯ ಗುರುವಿನ, ಚನ್ನವೀರಯ್ಯ ಹಿರೇಮಠ, ಸಂಸದ ರಾಜಶೇಖರ ಹಿಟ್ನಾಳ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್.ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಪೂರ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ದಿಶಾ ಸಮಿತಿ ಸದಸ್ಯ ದೊಡ್ಡಬಸನಗೌಡ ಪಾಟೀಲ್ ಬಯ್ಯಪುರ, ಹಾಲುಮತ ಸಮುದಾಯದ ತಾಲೂಕಾಧ್ಯಕ್ಷ ಮಲ್ಲಣ್ಣ ಪಲ್ಲೆದ, ಮುಖಂಡರಾದ ದೇವೇಂದ್ರಪ್ಪ ಬಳೂಟಗಿ, ಮಹಾಲಿಂಗಪ್ಪ, ಬಾಲಪ್ಪ ಚಾಕರಿ, ಪರಸಪ್ಪ ಕತ್ತಿ, ಮಹಾಂತೇಶ ಗಣವರಿ, ಫಕೀರಪ್ಪ ಚಳಗೇರಿ, ಸತ್ಯಪ್ಪ ರಾಜೂರು, ಈರಣ್ಣ ಪರಸಾಪೂರ, ಚಂದ್ರು ವಡಗೇರಿ, ಬಸನಗೌಡ ಗೌಡ್ರ, ಶರಣಪ್ಪ ಪರಸಾಪೂರ, ಹೋಳಿಯಪ್ಪ ಕುರಿ, ಹನಮಂತಪ್ಪ ಚೌಡ್ಕಿ, ಕಲೇಶ ತಾಳದ, ರಂಗನಾಥ ಡೊಳ್ಳಿನ ಇತರರಿದ್ದರು.