ಕೂಡ್ಲಿಗಿ: ತರಬೇತಿಯು ಸರ್ಕಾರದ ಯೋಜನೆಗಳು ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಗಾಗಿ ಸಂಪನ್ಮೂಲ ವ್ಯಕ್ತಿಗಳ ಕೌಶಲ ಹೆಚ್ಚಿಸುತ್ತದೆ ಎಂದು ತಾಪಂ ವ್ಯವಸ್ಥಾಪಕ ವೈ.ಎಸ್.ಅಶ್ವತ್ಥ್ ಕುಮಾರ್ ಹೇಳಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ 2024-25ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮ ಸಂಪನ್ಮೂಲ ವ್ಯಕ್ತಿಗಳಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ತರಬೇತಿಯಿಂದ ಸಾಮಾಜಿಕ ಪರಿಶೋಧನೆ ಬಗ್ಗೆ ತಿಳಿದುಕೊಳ್ಳುವುದರೊಂದಿಗೆ ಗ್ರಾಮ ಮಟ್ಟದಲ್ಲಿ ಸರ್ಕಾರದ ಹಲವು ಯೋಜನೆಗಳ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ತಿಳಿವಳಿಕೆ ಮೂಡಿಸಲು ಸಹಕಾರಿಯಾಗಲಿದೆ. ಸಮರ್ಪಕವಾಗಿ ತಿಳಿದುಕೊಂಡು ಮುಂದಿನ ಕಾರ್ಯಗಳನ್ನು ನಿರ್ವಹಿಸಬೇಕು ಎಂದರು.
ಪ್ರಥಮ ದರ್ಜೆ ಸಹಾಯಕ ಎಸ್.ವೆಂಕಟೇಶ್, ಯು.ಎನ್.ತೇಜಸ್ವಿನಿ, ತರಬೇತುದಾರ ಶ್ಯಾಮರಾವ್ ಭಾಗವಹಿಸಿದ್ದರು.