ಜಿಲ್ಲೆ

ಕೊಡ್ಲಿವಾಡ ರೈತನ ಮಗ ದೇಶಕ್ಕೆ 910ನೇ ರ‌್ಯಾಂಕ್

ಮಂಜುನಾಥ ಕೋಳಿಗುಡ್ಡ

ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಧನೆ

ಕೃಷಿ ಉತ್ಪನ್ನ, ಕುರಿ ಸಾಕಾಣಿಕೆ ಮಾಡಿ ಮಗನ ಓದಿಸಿರುವ ತಂದೆ-ತಾಯಿ

ವಿಜಯವಾಣಿ ವಿಶೇಷ ಬೆಳಗಾವಿ

ಕೈಲಾಗದು ಎಂದು ಕೈಕಟ್ಟಿ ಕುಳಿತರೇ ಸಾಗದು ಕೆಲಸವು ಮುಂದೆ ಎಂಬ ಮಾತಿನಂತೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಏಳು ಬಾರಿ ವಿಲವಾಗಿ ಎಂಟನೇ ಪ್ರಯತ್ನದಲ್ಲಿ 910ನೇ ರ‌್ಯಾಂಕ್ ಪಡೆದು ವಿಲತೆಯೇ ಸಲತೆಗೆ ಕಾರಣ ಎಂದು ಸಾಧಿಸಿ ತೋರಿಸಿದ್ದಾರೆ ರೈತನ ಮಗ.

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಹಣಮಂತ ನಂದಿ ಈ ಸಾಧಕ. ಬಡ ರೈತ ಕುಟುಂಬದ ಕಾಳವ್ವ ಯಲ್ಲಪ್ಪ ನಂದಿ ದಂಪತಿ ಹಿರಿಯ ಪುತ್ರ ಹಣಮಂತ ನಂದಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ಸತತ 8ನೇ ಪ್ರಯತ್ನದಲ್ಲಿ ತೇರ್ಗಡೆ:

ಯುಪಿಎಸ್‌ಸಿ ಪರೀಕ್ಷೆಯಲ್ಲಿ 910ನೇ ರ‌್ಯಾಂಕ್ ಪಡೆದಿರುವ ಹಣಮಂತ ನಂದಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೊಡ್ಲಿವಾಡ ಗ್ರಾಮ, ಪ್ರೌಢ ಶಾಲೆ ಶಿಕ್ಷಣವನ್ನು ಸತ್ತಿಗೇರಿ ಗ್ರಾಮದಲ್ಲಿ ಪೂರ್ಣಗೊಳಿಸಿದ್ದಾರೆ. ಧಾರವಾಡದ ಕರ್ನಾಟಕ ಮಹಾವಿದ್ಯಾಲಯದಲ್ಲಿ ಪಿಯುಸಿ ಶಿಕ್ಷಣ ಮುಗಿಸಿ ಬೆಳಗಾವಿಯ ಕೆಎಲ್‌ಎಸ್ ಸಂಸ್ಥೆಯ ಗೋಗಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕ್ ವಿಷಯದಲ್ಲಿ 2016ರಲ್ಲಿ ಪದವಿ ಪಡೆದುಕೊಂಡಿದ್ದಾರೆ. ಬಳಿಕ ಐಎಎಸ್ ಪರೀಕ್ಷೆಗಾಗಿ 2017ರಲ್ಲಿಯೇ ಬೆಂಗಳೂರಿಗೆ ಹೋಗಿ ಸಿದ್ಧತೆ ಆರಂಭಿಸಿದ್ದರು. 2018 ರಿಂದ 2024ರವರೆಗೂ ಸತತ 7 ಬಾರಿ ಯುಪಿಎಸ್ ಪರೀಕ್ಷೆ ಬರೆದಿದ್ದರು ವಿಲಗೊಂಡಿದ್ದರು. ಆದರೆ, ಹಿಡಿದ ಛಲ ಬಿಡದೇ ಅಧ್ಯಯನ ಮುಂದುವರಿಸಿ 8ನೇ ಪ್ರಯತ್ನದಲ್ಲಿಯೇ ಯುಪಿಎಸ್‌ಯಲ್ಲಿ ಪಾಸ್ ಆಗಿದ್ದಾರೆ. ಹೆತ್ತವರಿಗೆ ಕೊಟ್ಟ ಮಾತು ಉಳಿಸಿಕೊಂಡಿರುವ ತೃಪ್ತಿ ತಂದಿದೆ ಎಂದು ಹಣಮಂತ ನಂದಿ ವಿಜಯವಾಣಿ ಜತೆಗೆ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.

--

ಬಾಕ್ಸ್

ಬಡ ರೈತ ಕುಟುಂಬ:

ಇವರದ್ದು ಬಡ ರೈತನ ಕುಟುಂಬ. ತಂದೆ ಯಪ್ಪಲ್ಲ, ತಾಯಿ ಕಾಳವ್ವ ಅಕ್ಷರ ಕಲಿತಿಲ್ಲ. ಆದರೆ, ಮಗನ ಕಲಿಕೆಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಆದರೆ, ತಂದೆ-ತಾಯಿ ಬೆರವ ಹನಿಗೆ ಮಗ ಇದೀಗ ಸಲು ನೀಡಿದ್ದಾನೆ. ಎಲ್ಲರಂತೆ ನನ್ನ ಮಕ್ಕಳು ಕೂಡ ಸರ್ಕಾರ ನೌಕರಿ ಹಿಡಿಯಲಿ. ನಮ್ಮಂತೆ ಕೂಲಿ ಕೆಲಸ ಮಾಡುವುದು ಬೇಡ ಎಂದು ಕೃಷಿ ಉತ್ಪನ್ನ, ಕುರಿ ಸಾಕಾಣಿಕೆಯಿಂದ ಬರುವ ಆದಾಯವನ್ನು ಮಗನ ಕಲಿಕೆಗೆ ಖರ್ಚು ಮಾಡುತ್ತಿದ್ದರು. ಆದರೆ, ಹೆತ್ತವರಿಗೆ ಯುಪಿಎಸ್ ಎಂದರೆ ಏನು? ಎಂಬುವುದು ಗೊತ್ತಿರಲಿಲ್ಲವಂತೆ. ಡಿಸಿ ಆಗಲು ಓದುತ್ತಿದ್ದೇನೆ ಎಂದು ಹಣಮಂತ ಹೇಳುತ್ತಿರುವುದರಿಂದ ಖುಷಿಯಿಂದಲೇ ನನ್ನ ಮಗ ಡಿಸಿ ಆಗಲು ಓದುತ್ತಿದ್ದಾನೆ ಎಂದು ಊರೆಲ್ಲ ಹೇಳಿಕೊಂಡು ಹೆತ್ತವರು ಓಡಾಡುತ್ತಿದ್ದರಂತೆ.

---

ಕೋಟ್ಸ್

ಐಎಎಸ್, ಐಪಿಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು ಎನ್ನುವವರು ದೃಢ ಸಂಕಲ್ಪ ಮಾಡಿಕೊಳ್ಳಬೇಕು. ಮೊದಲೇ ಪ್ರಯತ್ನದಲ್ಲಿಯೇ ವಿಫಲವಾದರೆ ಓದುವುದನ್ನು ನಿಲ್ಲಿಸಬಾರದು. ಸತತ ಓದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯಾವತ್ತು ನಮ್ಮ ಮೇಲಿನ ವಿಶ್ವಾಸವನ್ನು ನಾವು ಕಳೆದುಕೊಳ್ಳಬಾರದು. ಪ್ರಯತ್ನ ಯಾವತ್ತು ಕೈ ಬಿಡುವುದಿಲ್ಲ ಎಂಬುದಕ್ಕೆ ನಾನೇ ಉದಾಹರಣೆ.

-ಹಣಮಂತ ನಂದಿ, ಯುಪಿಎಸ್‌ಸಿ ಪರೀಕ್ಷೆಯಲ್ಲಿ 910ನೇ ರ‌್ಯಾಂಕ್

............